ಮಂಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಮತ್ತು ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಮಿಥುನ್ ರೈ ಪರವಾಗಿ ಇಂದು ಪುದು ಗ್ರಾಮದ ಪೇರಿಮಾರ್ ವಾರ್ಡಿನ ಸದಸ್ಯರಾದ ಹಾಶೀರ್ ಪೇರಿಮಾರ್ & ಹುಸೈನ್ ಪಾಡಿ ರವರ ನೇತೃತ್ವದಲ್ಲಿ ಬಿರುಸಿನ ಮತಯಾಚನೆ ಮತ್ತು ಪ್ರಚಾರ ನಡೆಸಲಾಯಿತು.

ಈ ಸಂದರ್ಭದಲ್ಲಿ ವಲಯ ಕಾಂಗ್ರೆಸ್ ನ ಅಧ್ಯಕ್ಷ ರಫೀಕ್ ಪೇರಿಮಾರ್, ಯುವ ಕಾಂಗ್ರೆಸ್ ಕಾರ್ಯದರ್ಶಿ ಶೌಕತ್ ಆಲಿ, ಯುವ ನಾಯಕ ಮಜೀದ್ ಪೇರಿಮಾರ್ ರವರಿಗೆ ಸಾತ್ ನೀಡಿದರು.
ಅಲ್ಲದೆ ಯುವ ಕಾಂಗ್ರೆಸ್ ಸದಸ್ಯರಾದ ಹಕೀಲ್ ಮಾರಿಪಳ್ಳ, ಪವಾಝ್ ಮಾರಿಪಳ್ಳ, ಹಫೀಝ್ ಮಾರಿಪಳ್ಳ, ಮುಸ್ತಾಕ್ ದೇವಸ್ಯ, ಅಹ್ಮದ್ ದಿರ್ಶಾದ್ ಪೇರಿಮಾರ್, ಆಸೀಫ್ ಮಾರಿಪಳ್ಳ, ಜಾಬೀರ್ ಪೇರಿಮಾರ್, ಇಕ್ಬಾಲ್ ಪೇರಿಮಾರ್, ಸಿರಾಜ್ ಪೇರಿಮಾರ್, ಅಝ್ಮಾಲ್ ಜಲಾಲಿಯ್ಯನಗರ, ಇಮ್ರಾನ್ ಖಾನ್ ದೇವಸ್ಯ, ಜಾಫರ್ ಕರ್ಮಾರ್, ಫಾಝೀಲ್ ಬಾಲ್ದಬೊಟ್ಟು, ರಿಕಾಝ್ ಬಾಲ್ದಬೊಟ್ಟು, ಶಾಹದ್ ಮಾರಿಪಳ್ಳ, ಹನೀಫ್ ದೇವಸ್ಯ, ನೌಶಾದ್ ಪೇರಿಮಾರ್, ಮೇಹ್ ಪುಝ್ ರಾಝೀ, ಇಕ್ಬಾಲ್ ಬಾಲ್ದಬೊಟ್ಟು, ಹಾಗೂ ಅನೇಕ ಕಾರ್ಯಕರ್ತರು ಅವರ ಜೊತೆ ಮತಯಾಚನೆ ಸಂದರ್ಭದಲ್ಲಿ ಉಪಸ್ಥಿತರಿದ್ದರು.