Monday, September 25, 2023
More

  ಎಸ್.ಡಿ.ಪಿ.ಐ.ಸ್ಪರ್ಧೆ ಯಾರಿಗೆ ಲಾಭ?

  Must read

  ಬಂಟ್ವಾಳ: ಎ.18 ರ ಮಹಾ ಲೋಕಸಭಾ ಚುನಾವಣೆಯ ರಂಗು ನಿಧಾನವಾಗಿ ಏರಿಕೆ ಕಾಣುತ್ತಿದ್ದು, ಕಾಂಗ್ರೇಸ್ ಬಿಜೆಪಿ ಜೊತೆ ಪ್ರಬಲ ಪೈಪೋಟಿ ನೀಡಲು ಎಸ್.ಡಿ.ಪಿ.ಐ.ಪಕ್ಷ ಕಣಕ್ಕಿಳಿದಿದೆ.
  ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಕೊನೆಯ ಕ್ಷದಲ್ಲಿ ಕಣದಿಂದ ಹಿಂದೆ ಸರಿದು ಕಾರ್ಯಕರ್ತರಿಂದ ಛೀಮಾರಿ ಹಾಕಿಕೊಂಡ ಎಸ್.ಡಿ.ಪಿ.ಐ.ಪಕ್ಷ ಈ ಬಾರಿಯ ಲೋಕಸಭಾ ಚುನಾವಣೆಗೆ ರಣಕಹಳೆ ಊದಿದೆ.
  ಕಳೆದ ಬಾರಿ ವಿಧಾನ ಸಭಾ ಚುನಾವಣೆಯಲ್ಲಿ ಹೋದ ಮಾನವನ್ನು ಈ ಲೋಕಸಭಾ ಚುನಾವಣೆಯಲ್ಲಿ ಮರುಪಡೆದುಕೊಳ್ಳಲು ಶತಾಯಗತಾಯ ಪ್ರಯತ್ನ ಮಾಡುತ್ತಿದ್ದೆ.
  ಕಳೆದ ಲೋಕಸಭಾ ಚುನಾವಣೆಯಲ್ಲಿ ಹನೀಪ್ ಖಾನ್ ಕೋಡಾಜೆ ಸ್ಪರ್ಧೆ ಮಾಡಿ 27374 ಮತಗಳನ್ನು ಪಡೆದು ತ್ರಪ್ತಿಪಟ್ಟುಕೊಂಡಿದ್ದರು.
  ಅ ಬಳಿಕ ಪಕ್ಷ ಗ್ರಾ.ಪಂ.ಮಹಾನಗರಪಾಲಿಕೆ , ಪುರಸಭೆ, ನಗರಸಭೆ ಹೀಗೆ ಸ್ಪರ್ಧೆ ಮಾಡಿ ತಮ್ಮ ಅಸ್ತಿತ್ವವನ್ನು ಹೊಂದಿದೆ.
  ಮುಂದಿನ ದಿನಗಳಲ್ಲಿ ಪಕ್ಷ ವನ್ನು ಕಟ್ಟಿಬೆಳೆಸುವ ನಿಟ್ಟಿನಲ್ಲಿ ಯುವಕರ ಮನಪರಿವರ್ತನೆ ಮಾಡಲಾಗುತ್ತಿದೆ.
  ಅದರಲ್ಲೂ ದ.ಕ.ಜಿಲ್ಲೆಯಲ್ಲಿ ತಮ್ಮ ಪ್ರಾಬಲ್ಯವನ್ನು ಸಾಧಿಸಲು ಪಕ್ಷದ ನಾಯಕರು ಪಣತೊಟ್ಟಿದ್ದಾರೆ. ಅದರ ಫಲವಾಗಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ದ.ಕ.ಜಿಲ್ಲೆಯಲ್ಲಿ ಅಭ್ಯರ್ಥಿ ಯನ್ನು ಕಣಕ್ಕೆ ಇಳಿಸಿ ಒಂದು ಲಕ್ಷಕ್ಕೂ ಅಧಿಕ ಮತಗಳನ್ನು ಪಡೆದು ಎರಡು ರಾಷ್ಟ್ರೀಯ ಪಕ್ಷಗಳಿಗೆ ಸ್ಪಷ್ಟವಾದ ಸಂದೇಶವನ್ನು ರವಾನಿಸಲು ಸಿದ್ಧವಾಗಿದೆ.
  ಈ ಬಾರಿಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಯಾಗಿ ಬಂಟ್ವಾಳ ತಾಲೂಕಿನ ಯುವ ನಾಯಕ ಇಲ್ಯಾಸ್ ತುಂಬೆ ಅವರನ್ನು ಕಣಕ್ಕೆ ಇಳಿಸಿದ್ದು ಉತ್ಸಾಹದಿಂದ ಪ್ರಚಾರ ಕಾರ್ಯ ನಡೆಯುತ್ತಿದೆ.

  28 ಲೋಕಸಭಾ ಕ್ಷೇತ್ರದ ಪೈಕಿ ಕೇವಲ ದ.ಕ.ಜಿಲ್ಲೆಯ ಲ್ಲಿ ಮಾತ್ರ ಎಸ್.ಡಿ.ಪಿ.ಐ.ಮಾಡುತ್ತಿದ್ದು, ನಾಯಕರ ಮ್ಯಾನ್ ಪವರ್ ಇಡೀ ಕ್ಷೇತ್ರ ವ್ಯಾಪ್ತಿಯಲ್ಲಿ ಸಂಚಾರ ಮಾಡುತ್ತಿದೆ.
  ದ.ಕ.ಜಿಲ್ಲೆಯ ಸ್ಪರ್ಧೆ ಕಾಂಗ್ರೇಸ್ ಪಕ್ಷಕ್ಕೆ ದೊಡ್ಡ ಹೊಡೆತವನ್ನು ನೀಡುವ ಸಂಭವಿದ್ದರೂ ಕೂಡಾ ಕಾಂಗ್ರೇಸ್ ಪಕ್ಷ ಮಾತ್ರ ಈವರೆಗೆ ಎಸ್.ಡಿ.ಪಿ.ಐ.ಜೊತೆ ಹೊಂದಾಣಿಕೆ ಯ ವಿಚಾರಕ್ಕೆ ಮುಂದಾಗಿಲ್ಲ ಎಂಬುದು ಸ್ಪಷ್ಟ.

  ಮಂಗಳೂರುಮಹಾನಗರ ಪಾಲಿಕೆ 1, ಸಜೀಪ ಗ್ರಾಮ ಪಂಚಾಯತ್ ಆಡಳಿತ ನಡೆಸುವ ಎಸ್.ಡಿ.ಪಿ.ಐ 7.
  ನಂದಾವರ ಗ್ರಾ.ಪಂ 3 ಸ್ಥಾನವನ್ನು ಪಡದು ಕಾಂಗ್ರೇಸ್ ಆಡಳಿತ ಕ್ಕೆ ಸಪೋರ್ಟ್ ಮಾಡುತ್ತಿದ್ದಾರೆ. ‌ಬಂಟ್ವಾಳ  ಪುರಸಭೆಯಲ್ಲಿ 4 ಸ್ಥಾನ,
  ಉಳ್ಳಾಲ ಪುರಸಭೆಯಲ್ಲಿ 6 ಸ್ಥಾನ, ಸವಣೂರು ಪಂಚಾಯತ್ ನಲ್ಲಿ 4 ಸ್ಥಾನ. ಪುತ್ತೂರು ಪುರಸಭೆಯಲ್ಲಿ 1ಸ್ಥಾನ ಸುಳ್ಯ ನ.ಸಭೆಯಲ್ಲಿ.1 ಸ್ಥಾನ, ಜೊಕಟ್ಟೆ ಗ್ರಾ.ಪಂ.ನಲ್ಲಿ 2 ಸ್ಥಾನ, ಗೋಳ್ತಮಜಲು ಗ್ರಾ.ಪಂ.ನಲ್ಲಿ 2 ಸ್ಥಾನ. ಬಜಪೆ ಗ್ರಾ.ಪಂ.ನಲ್ಲಿ 4 ಸ್ಥಾನ, ಸೂರಿಂಜೆ ಗ್ರಾ.ಪಂ.ನಲ್ಲಿ 3 ಸ್ಥಾನ, ಚಾರ್ಮಾಡಿ ಗ್ರಾ.ಪಂ.ನಲ್ಲಿ 1.ಸ್ಥಾನ, ಕಣಿಯೂರು ಗ್ರಾ.ಪಂ.ನಲ್ಲಿ1.ಸ್ಥಾನ ಬೆಳ್ತಂಗಡಿ ಕುವೆಟ್ಟು ಗ್ರಾ.ಪಂ. ನಲ್ಲಿ1. ಸ್ಥಾನ ಬಂಗೇರುಕಟ್ಟೆ ಮಚ್ಚಿನ ಗ್ರಾ.ಪಂ.ನಲ್ಲಿ 1 ಸ್ಥಾನ ಪಾಂಡವರಕಲ್ಲು ಗ್ರಾ.ಪಂ.ನಲ್ಲಿ 1 ಸ್ಥಾನ, ಉಪ್ಪಿನಂಗಡಿ ಗ್ರಾ.ಪಂ.ನಲ್ಲಿ 1.ಸ್ಥಾನ
  ಪುತ್ತಿಗೆ ಗ್ರಾ.ಪಂ.ನಲ್ಲಿ 1.ಸ್ಥಾನ ನೆಟ್ಟನಿಗೆ ಈಶ್ವರಮಂಗಿಲ ಗ್ರಾ.ಪಂ.ನಲ್ಲಿ 1.ಸ್ಥಾನ, ಪಜೀರುಗ್ರಾ.ಪಂ.ನಲ್ಲಿ 1 ಸ್ಥಾನ, ತುಂಬೆ ಗ್ರಾ.ಪಂ.2 ಸ್ಥಾನ . ಪುದು ಗ್ರಾ.ಪಂ.ನಲ್ಲಿ 1, ಸ್ಥಾನ, ಮಂಜನಾಡಿ ಗ್ರಾ.ಪಂ.ನಲ್ಲಿ 1 ಸ್ಥಾನ, ಕೋಟೆಕಾರ್ ಗ್ರಾ.ಪಂ.ನಲ್ಲಿ 1 ಸ್ಥಾನ , ಮಂಗಳೂರು ಮಹಾನಗರ ಪಾಲಿಕೆ 1. ಅಡ್ಯಾರು ಗ್ರಾ.ಪಂ.ನಲ್ಲಿ 5. ಸ್ಥಾನ, ಪಡೆದು ತಮ್ಮ ಪಕ್ಷ ವನ್ನು ಬೆಳೆಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಿದೆ.

  ಇದರಲ್ಲಿ ಸಜೀಪ ನಡು ಗ್ರಾ.ಪಂ.ಮೆಜ್ವಾರಿಟಿಯಲ್ಲಿ ಆಡಳಿತ ನಡೆಸಿ ದರೆ, ಸಜೀಪ ಮುನ್ನೂರು ಗ್ರಾ.ಪಂ.ನಲ್ಲಿ 3 ಸ್ಥಾನಗಳನ್ನು ಪಡೆದುಕೊಂಡು ಕಾಂಗ್ರೇಸ್ ಆಡಳಿತ ಕ್ಕೆ ಬೆಂಬಲ ನೀಡಿದೆ.
  ಒಟ್ಟು 54 ಗ್ರಾ.ಪಂ.ನಗರಸಭೆ, ಪುರಸಭೆ, ಮಹಾನಗರಪಾಲಿಕೆಗಳಲ್ಲಿ ಖಾತೆ ತೆರೆದು ರಾಜಕೀಯ ವಾಗಿ ತಮ್ಮ ಪ್ರಾಬಲ್ಯವನ್ನು ಹೊಂದಿದೆ. ‌
  ಬಂಟ್ವಾಳ ಪುರಸಭೆ ಯಲ್ಲೂ ಇವರು ನಿರ್ಣಾಯಕ ರಾಗಿದ್ದು ಕಾಂಗ್ರೇಸ್ ಅಥವಾ ಬಿಜೆಪಿ ಪಕ್ಷ ಆಡಳಿತ ನಡೆಸಲು ಇವರ ಸಹಕಾರ ಬೇಕು.

  ಈ ಮಟ್ಟದಲ್ಲಿ ಪಕ್ಷ ಬೆಳವಣಿಗೆ ಕಾಣುತ್ತಿದ್ದು ಕಾಂಗ್ರೇಸ್ ಮತ್ತು ಬಿಜೆಪಿ ಪಕ್ಷಕ್ಕೆ ಪ್ರಬಲ ಪೈಪೋಟಿ ಯ ಪಕ್ಷವಾಗಿ ಹೊರಹೊಮ್ಮಲಿದೆ.
  ಈವರೆಗೆ ಕಾಂಗ್ರೇಸ್ ಮುಸ್ಲಿಂ ಬಾಹುಳ್ಯವಿರುವ ಕ್ಷೇತ್ರದಲ್ಲಿ ಎಲ್ಲಿಯೂ ಪ್ರಾತಿನಿಧ್ಯ ನೀಡಿಲ್ಲ ಎಂಬ ಆರೋಪ ಇವರದ್ದು.
  ಸಂವಿಧಾನ ವನ್ನು ಪ್ರೀತಿಸುವ ಪಕ್ಷಕ್ಕೆ , ನಾಯಕರಿಗೆ ನಾವು ಸಪೋರ್ಟ್ ನೀಡುತ್ತವೆ ಎಂಬ ಮಾತನ್ನು ಇವರು ಹೇಳುತ್ತಾರೆ.

  More articles

  LEAVE A REPLY

  Please enter your comment!
  Please enter your name here

  Latest article