ಬಂಟ್ವಾಳ: ದ.ಕ.ಲೋಕಸಭಾ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲು ಅವರ ಈ ಬಾರಿ 2 ಲಕ್ಷ ಅಂತರದಿಂದ ಗೆಲುವು ಸಾಧಿಸುತ್ತಾರೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಅವರು ವಿಶ್ವಾಸ ವ್ಯಕ್ತಪಡಿಸಿದರು. ಅವರು ಬಿಸಿರೋಡಿನ ಬಿಜೆಪಿ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಈ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ 16 ಸಾವಿರ ಅಂತರದಲ್ಲಿ ಗೆಲುವು ಸಾಧಿಸಿದ್ದು , ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರ 20ಸಾವಿರ ಅಂತರ ನೀಡುವ ವಿಶ್ವಾಸ ವಿದೆ ಎಂದು ಅವರು ಹೇಳಿದರು.

ರಾಷ್ಟ್ರೋತ್ತಾನ, ಮಹಿಳೆಯರಿಗೆ ಸ್ವಾವಲಂಬಿ ಬದುಕು, ಆರ್ಥಿಕ ವ್ಯವಸ್ಥೆಯ ಬಲಪಡಿಸುವಿಕೆ, ಹಾಗಾಗಿ ಮೋದಿಯವರನ್ನು ಮತ್ತೋಮ್ಮೆ ಪ್ರಧಾನಿಯಾಗಿ ಆರಿಸುತ್ತಾರೆ ಎಂದು ಅವರು ಹೇಳಿದರು.

ಜಿಲ್ಲೆ ಹಾಗೂ ಕೇರಳದಲ್ಲಿ ಪಕ್ಷ ಸಂಘಟನೆಯಲ್ಲಿ ಹಾಗೂ ಅಭಿವೃದ್ಧ ಗಾಗಿ ಶ್ರಮಿಸಿದ ನಳಿನ್ ಕುಮಾರ್ ಕಟೀಲು ಈ ಬಾರಿ ಕಳೆದ ಬಾರಿಯ ಫಲಿತಾಂಶದ ಅಂತರಕ್ಕಿಂತಲೂ ಅಧಿಕ ಅಂತರದಿಂದ ಗೆಲುವು ಸಾಧಿಸುತ್ತೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಈ ದೇಶದಲ್ಲಿ ಪ್ರಧಾನಿಯಾಗಲು ಮೋದಿಯವರಿಗೆ ಮಾತ್ರ ಅರ್ಹತೆ ಇದ್ದು ಈ ನಿಟ್ಟಿನಲ್ಲಿ ಪಕ್ಷ ನೋಡದೆ ರಾಷ್ಟ್ರೀಯ ಚಿಂತನೆಗೆ ಮತ ನೀಡುತ್ತಾರೆ.
ಜನ ದೇಶ ನೋಡಿ ದೇಶವನ್ನು ಮುನ್ನಡೆ ಸುವ ಸಮರ್ಥ ಅಭ್ಯರ್ಥಿ ಮೋದಿಯವರನ್ನು ನೋಡಿ ಮತ ನೀಡುತ್ತಾರೆ ಎಂದು ಹರಿಕೃಷ್ಣ ಬಂಟ್ವಾಳ್ ಹೇಳೀದರು.

ಉಳಿದ ಪಕ್ಷದ ನಾಯಕರು ಮೋದಿಯವರನ್ನು ಬೈಯ್ಯುವ ಭಾಷಣ ಬಿಟ್ಟರೆ ದೇಶದ ಹಿತದೃಷ್ಟಿಯಿಂದ ಅಭಿವೃದ್ದಿಯ ಚಿಂತನೆಯಯಾವುದೇ ಹೇಳಿಕೆಗಳು ನೀಡುತ್ತಿಲ್ಲ ಎಂದು ಅವರು ಹೇಳಿದರು.

ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವದಾಸ್ ಶೆಟ್ಟಿ, ಮಾಜಿ ಶಾಸಕ ಕೊಟ್ಟಾರಿ, ಜಿಲ್ಲೆ ಯ ಉಪಾಧ್ಯಕ್ಷ ಜಿ.ಆನಂದ, ಬಿಜೆಪಿ ವಕ್ತಾರ ಹರಿಕೃಷ್ಣ ಬಂಟ್ವಾಳ್, ಅಪ್ಪಯ್ಯ ಮಣಿಯಾಣಿ, ಕ್ಷೇತ್ರದ ಕಾರ್ಯದರ್ಶಿ ಮೋನಪ್ಪ ದೇವಸ್ಯ, ಎಸ್.ಸಿ.ಮೋರ್ಚಾದ ಅಧ್ಯಕ್ಷ ದಿನೇಶ್ ಅಮ್ಟೂರು, ಕ್ಷೇತ್ರದ ಕಾರ್ಯದರ್ಶಿ ರಾಮ್ ದಾಸ ಬಂಟ್ವಾಳ, ದಿನೇಶ್ ಭಂಡಾರಿ, ದೇವಪ್ಪ ಪೂಜಾರಿ, ಮಹೇಶ್ , ಚರಣ್ ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here