


ಬಂಟ್ವಾಳ : ಬಿ.ಜೆ.ಪಿ.ಯ ಮಹಾ ಅಭಿಯಾನ ಕಾರ್ಯಕ್ರಮದಡಿ ಮತದಾರರ ಮನೆ,ಮನೆ ಸಂಪರ್ಕ ಕರ್ಪೆ ಗ್ರಾಮದಲ್ಲಿ ತಾಲೂಕು ಪಂಚಾಯತ್ ಸದಸ್ಯ ಪ್ರಭಾಕರ ಪ್ರಭು ಅವರ ನೇತೃತ್ವದಲ್ಲಿ ಭಾನುವಾರ ನಡೆಯಿತು. ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಅವರ ಪರವಾಗಿ ಮತಚಲಾಯಿಸಿ ಗೆಲ್ಲಿಸುವ ಮೂಲಕ ಮತ್ತೆ ನರೇಂದ್ರ ಮೋದಿ ಪ್ರದಾನಿಯಾಗಲು ಸಹಕರಿಸುವಂತೆ ಈ ಸಂದರ್ಭ ಪ್ರಭಾಕರ ಪ್ರಭು ಮನವಿ ಮಾಡಿದರು. ಕರ್ಪೆ ಬೂತ್ ಅದ್ಯಕ್ಷ ರಾದ ಕೆ. ರಾಮಕೃಷ್ಣ ನಾಯಕ್, ಹರೀಶ್ ಪೂಜಾರಿ, ಪ್ರಮುಖರಾದ ಚಂದ್ರಶೇಖರ ಪೂವಳ,ಸಂಜೀವ ಶೆಟ್ತಿ, ನವೀನ ತೇಜಾಸ್, ರಮೆಶ್ ಶೆಣೈ, ವಸಂತ ಶೆಟ್ತಿ, ಸುಭ್ರಮಣ್ಯ ಭಟ್, ಹರಿಯಪ್ಪ ನಾಯ್ಕ, ದಿನೇಶ್ ಭಟ್, ಶೊಭಾ, ಹರೀಶ್, ಕೃಷ್ಣಪ್ಪ, ಉಮನಾಥ ನಾಯಕ್, ಮೋಹನ್ ನಾಯಕ್, ಭಾಸ್ಕರ ಪ್ರಭು, ಮತ್ತಿರರು ಇದ್ದರು.


