


ಬಂಟ್ವಾಳ: ಪ್ರಧಾನಿ ನರೇಂದ್ರ ಮೋದಿಯ ಕಾರ್ಯವೈಖರಿಯನ್ನು ಮೆಚ್ಚಿ ಭಾರತೀಯ ಜನತಾ ಪಾರ್ಟಿಯ ಪಕ್ಷದ ಕಛೇರಿಯಲ್ಲಿ ನವೀನ್ ಅಂಚಣ್ ಕೊಯಿಲ ಅವರ ಬೆಂಬಲಿಗರೊಂದಿಗೆ ಕಾಂಗ್ರೇಸ್ ತೊರೆದು ಬಿ.ಜೆ.ಪಿ ಪಕ್ಷಕ್ಕೆ ಸೇರ್ಪಡೆ ಗೊಂಡರು.
ಈ ಸಂದರ್ಭದಲ್ಲಿ ಕ್ಷೇತ್ರದ ಅಧ್ಯಕ್ಷರಾದ ಬಿ ದೇವದಾಸ್ ಶೆಟ್ಟಿ, ಜಿಲ್ಲಾ ವಕ್ತಾರರಾದ ಹರಿಕೃಷ್ಣ ಬಂಟ್ವಾಳ, ಕ್ಷೇತ್ರದ ಪ್ರ.ಕಾರ್ಯದರ್ಶಿ ರಾಮದಾಸ್ ಬಂಟ್ವಾಳ , ಹಿಂದುಳಿದ ಮೋರ್ಚಾದ ಅಧ್ಯಕ್ಷರು ವಸಂತ ಕುಮಾರ್ ಅಣ್ಣಳಿಕೆ, ಕ್ಷೇತ್ರ ಸಮಿತಿ ಸದಸ್ಯರು ದುರ್ಗದಾಸ್ ಶೆಟ್ಟಿ ಮಾವಂತೂರು, ರಾಯಿ, ಕೊಯಿಲ ಸಮಿತಿ ಅಧ್ಯಕ್ಷರು ಪರಮೇಶ್ವರ ಪೂಜಾರಿ, ಯುವ ಮೋರ್ಚಾ ಪ್ರ.ಕಾರ್ಯದರ್ಶಿ ಸಂತೋಷ್ ಕುಮಾರ್ ರಾಯಿ ಬೆಟ್ಟು, ರಾಯಿ ಗ್ರಾಮದ ಮಾಜಿ ಅಧ್ಯಕ್ಷರು ದಾಮೋಧರ ಬಂಗೇರ, ರಾಯಿ ಬೂತ್ ಕಾರ್ಯದರ್ಶಿ ಸುಧಾಕರ್, ರಾಜೇಶ್ ನಿರಾಲ್ಕೆ ಕೊಯಿಲ ಮುತಾಂದವರು ಉಪಸ್ಥಿತರಿದ್ದರು.


