Saturday, October 21, 2023

ದಡ್ಡಲಕಾಡು ನವಾಹ ಭಜನಾ ಸಂಕೀರ್ತನೆ

Must read

ಬಂಟ್ವಾಳ:
ಅದೊಂದು ಪುಟ್ಟ ಊರು
ಅದರೆ ಇಲ್ಲಿನ ಯುವಕರು ಮಾತ್ರ ಯಾವುದೇ ದುಶ್ಚಟಗಳಿಗೆ ಬಲಿಯಾಗದೇ ಧಾರ್ಮಿಕ ಸಾಮಾಜಿಕ ಚಟುವಟಿಕೆಗಳ ಮೂಲಕ ಮಾದರಿಯಾಗಿದ್ದಾರೆ.

 


ಅದು ದಡ್ಡಲ್ಕಾಡು ಎಂಬ ಊರು ಈ ಊರಿನ ಜನ ಮಾತ್ರ ಗುರುಹಿರಿಯರಿಗೆ ಗೌರವ, ಶೈಕ್ಷಣಿಕ , ಧಾರ್ಮಿಕ ಸಾಮಾಜಿಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಊರಿನ ಹೆಸರು ಉತ್ತುಂಗದ ಶಿಖರವನ್ನು ತಲುಪಿಸುವ ಕನಸು ಕಾಣುತ್ತಿದ್ದಾರೆ.
ಯಾವುದೇ ಫಲಾಪೇಕ್ಷೆಯಿಲ್ಲದೆ ಗ್ರಾಮದ ಅಭಿವೃದ್ಧಿ ಗೆ ದುಡಿಯುತ್ತಾರೆ.

ಈ ಗ್ರಾಮದ ಶ್ರೇಯೋಭಿವ್ರದ್ದಿಗೆ ಪ್ರೇರಣೆ ಯಾಗಿ ಬಂಟ್ವಾಳ ತಾಲೂಕಿನ‌ ಗ್ರಾಮಾಂತರ ಪ್ರದೇಶದವಾದ ಮೂಡುನಡುಗೋಡು ಗ್ರಾಮದ ಪಂಜಿಕಲ್ಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಯಲ್ಲಿ
ದಡ್ಡಲ್ಕಾಡು ಶ್ರೀ ಜಗದಂಭಿಕಾ ಭಜನಾ ಮಂದಿರ ನಿರ್ಮಾಣ ಮಾಡಿದ್ದಾರೆ.‌
ಈ ಗ್ರಾಮದಲ್ಲಿ ಸಂಸ್ಕಾರ ನೆಲೆಯಾಗಬೇಕು ಎಂಬ ಉದ್ದೇಶದಿಂದ
ದಡ್ಡಲ್ಕಾಡು ಭಜನಾಮಂದಿರಲ್ಲಿ ರಾತ್ರಿ ಹಗಲು ನಿರಂತರ ಒಂಭತ್ತು ದಿನಗಳ ಕಾಲ ನವಾಹ ಭಜನೆ.
ಈ ಭಜನಾ ಕೈಕಂರ್ಯದಲ್ಲಿ ಜಿಲ್ಲೆಯ ಸುಮಾರು 150 ಭಜನಾ ಮಂಡಳಿಗಳು ಭಾಗವಹಸಿ ರಾತ್ರಿ ಹಗಲು ಭಜನೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.
ಒಂದು ಭಜನಾ ತಂಡಕ್ಕೆ 2 ಗಂಟೆಗಳ ಕಾಲವಕಾಶವಿದೆ.
ಭಜನೆ ಯಲ್ಲಿ ಭಾಗವಹಿಸಿದ ಹಾಗೂ ಇಲ್ಲಿ ಗೆ ಬರುವ ಭಕ್ತರಿಗೆ ನಿರಂತರವಾಗಿ ಉಪಹಾರ ಹಾಗೂ ಭೋಜನ ದ ವ್ಯವಸ್ಥೆ ಕಲ್ಪಿಸಲಾಗಿದೆ.
ಭಜನಾ ಕಾರ್ಯಕ್ರಮ ಕ್ಕೆ ಭಕ್ತರು ಆರಂಭದಿಂದ ದಿನವೂ ಹೊರೆಕಾಣಿಕೆ ಸಮರ್ಪಣೆ ಮಾಡುತ್ತಿದ್ದಾರೆ.

ಮಕ್ಕಳು , ಮಹಿಳೆಯರು ಹಿರಿಯರು ಕೂಡಾ ಇಲ್ಲಿನ ಪ್ರತಿಕಾರ್ಯಮದಲ್ಲಿ ಭಾಗವಹಿಸುತ್ತಾರೆ.

ಶ್ರೀ ಜಗದಂಬಿಕಾ ಶ್ರೀ ಮಹಮ್ಮಾಯಿ ಗುಳಿಗ ಅಣ್ಣಪ್ಪ ಕ್ಷೇತ್ರ (ರಿ). ದೇವಿನಗರ ದಡ್ಡಲಕಾಡು ಇದರ 5 ನೇ ವರ್ಷದ ಪ್ರತಿಷ್ಠಾ ವರ್ಧಂತ್ಯುತ್ಸವ ಅಂಗವಾಗಿ ಮಾ.27 ಬುಧವಾರದಿಂದ ಎ.6 ರ ಶನಿವಾರದವರೆಗೆ ಅಖಂಡ ನವಾಹ ಭಜನಾ ಸಂಕೀರ್ತನೆ ಹಾಗೂ ಪ್ರತಿಷ್ಠಾ ವರ್ಧಂತ್ಯುತ್ಸವ , 58 ನೇ ವರ್ಷಾವಧಿ ಮಹೋತ್ಸವ , ಸಾಮೂಹಿಕ ನವಚಂಡಿಕಾ ಯಾಗ ರಂಗಪೂಜೆ, ಹಾಗೂ ಮಾರಿ ಪೂಜಾ ಉತ್ಸವ ನಡೆಯಲಿದೆ.
ಶ್ರೀ ಸತ್ಯನಾರಾಯಣ ಭಟ್ ಶಿವಕ್ಷೇತ್ರ ಇಜ್ಜ ಇವರ ನೇತ್ರತ್ವದಲ್ಲಿ ” ಲೋಕಕಲ್ಯಾಣಾರ್ಥವಾಗಿ ಕ್ಷೇತ್ರದ ಶ್ರೇಯೋಭಿವ್ರದ್ದಿ ಹಾಗೂ ಊರಿನ ಸುಭೀಕ್ಷೆಗಾಗಿ ಅಖಂಡ ನವಾಹ ಭಜನಾ ಸಂಕೀರ್ತನೋತ್ಸವ ವು ವಿವಿಧ ವೈಧಿಕ , ಧಾರ್ಮಿಕ ಕ್ರಿಯಾಕಲಾಪಗಳೊಂದಿಗೆ ಜರಗುತ್ತಿದೆ.

More articles

Latest article