ಬಂಟ್ವಾಳ: ವೀರಕಂಭ ರಕ್ಷಿತ ಅರಣ್ಯಕ್ಕೆ ಇಂದು ಮಧ್ಯಾಹ್ನದ ವೇಳೆ ಬೆಂಕಿ ಬಿದ್ದು ಕಾಡು ನಾಶವಾಗಿದೆ. ವೀರಕಂಭ ರಕ್ಷಿತ ಅರಣ್ಯದ
ಕೆಲಿಂಜದಲ್ಲಿ ಕಾಡಿಗೆ ಬೆಂಕಿ ಬಿದ್ದು ಕಾಡು ಸಂಪತ್ತು ಬೆಂಕಿಗೆ ಅಹುತಿಯಾಗಿದೆ.

ಸ್ಥಳ ಕ್ಕೆ ಬಂಟ್ವಾಳ ಅಗ್ನಿಶಾಮಕ ದಳದವರು ಆಗಮಿಸಿ ಬೆಂಕಿ ನಂದಿಸುವ ಕೆಲಸ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಉಪವಲಯ ಅರಣ್ಯಾಧಿಕಾರಿಗಳಾದ ಪ್ರೀತಮ್ ಮತ್ತು ಯಶೋಧರ ಅರಣ್ಯ ರಕ್ಷಕರಾದ ದಯಾನಂದ, ಜೀತೇಶ್, ರವಿ, ಖ್ಯಾತಲಿಂಗ, ರೇಖಾ, ಅರಣ್ಯ ವೀಕ್ಷಕರಾದ ಪ್ರವೀಣ, ಜಯರಾಮ, ಮತ್ತು ಚಾಲಕ ಜಯರಾಮ ಹಾಗೂ ಸಾರ್ವಜನಿಕರು ಬೆಂಕಿ ನಂದಿಸಲು ಸಹಕರಿಸಿದರು. ಆಕಸ್ಮಿಕವಾಗಿ ಕಾಡಿಗೆ ಬೆಂಕಿ ಹತ್ತಿದೆಯಾ ಅಥವಾ ಯಾರಾದರೂ ಬೆಂಕಿ ಹಚ್ಚಿದ್ದರಾ ಎನ್ನುವುದು ಇನ್ನಷ್ಟೆ ತಿಳಿಯಬೇಕಾಗಿದೆ.