Monday, October 30, 2023

ಸರಕಾರಿ ಆಸ್ಪತ್ರೆಗೆ ಶಾಸಕ ರಾಜೇಶ್ ನಾಯಕ್ ಭೇಟಿ

Must read

ಬಂಟ್ವಾಳ: ಇಲ್ಲಿನ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ತೆರಳಿದ ರೋಗಿಯೋರ್ವರಿಗೆ ಸಕಾಲದಲ್ಲಿ ಚಿಕಿತ್ಸೆ ನೀಡದೆ ಆಸ್ಪತ್ರೆಯ ಕರ್ತವ್ಯ ದಲ್ಲಿದ್ದ ನರ್ಸ್ ದರ್ಪದ ಮಾತುಗಳನ್ನಾಡಿ ರೋಗಿಯೂ ಚಿಕಿತ್ಸೆಗಾಗಿ ಅಂಗಲಾಚಿದ್ದಾರೆ, ಹಾಗಾಗಿ ಈ ಸರಕಾರಿ ಆಸ್ಪತ್ರೆಗೆ ಒಮ್ಮೆ ಬಂಟ್ವಾಳ ಶಾಸಕರು ಭೇಟಿ ನೀಡಿ ಮಾಹಿತಿ ಪಡೆಯಬೇಕು ನೊಂದ ನಾಗರೀಕ ಎಂಬ ತಲೆಬರಹದ ಸಂದೇಶವೊಂದು ನಿನ್ನೆಯಿಂದ ನಿರಂತರವಾಗಿ ವೈರಲ್ ಆಗುತ್ತಿತ್ತು.

ಈ ಹಿನ್ನೆಲೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು ಅವರು ಇಂದು ಬುಧವಾರ ಮಧ್ಯಾಹ್ನ ಬಂಟ್ವಾಳ ಸರಕಾರಿ ಆಸ್ಪತ್ರೆ ಗೆ ಭೇಟಿ ನೀಡಿ ರೋಗಿಗಳ ಜೊತೆ ಮಾತನಾಡಿ ಮಾಹಿತಿ ಪಡೆದುಕೊಂಡಿದ್ದಾರೆ. ಈ ಸಂಧರ್ಭದಲ್ಲಿ ಆಸ್ಪತ್ರೆಯ ವೈದ್ಯಾಧಿಕಾರಿಗಳು ಹಾಜರಿದ್ದರು.

More articles

Latest article