Wednesday, April 10, 2024

ಮಂಗಳೂರಿಗೆ ಪ್ರಧಾನಿ ಮೋದಿ, ಕಾರ್ಯಕರ್ತರಿಗೆ ವ್ಯವಸ್ಥಿತ ರೀತಿಯ ಪಾರ್ಕಿಂಗ್

ಬಂಟ್ವಾಳ: ಪ್ರಧಾನಿ ನರೇಂದ್ರ ಮೋದಿಯವರು ಲೋಕಸಭಾ ಚುನಾವಣೆಯ ಬಹಿರಂಗ ಪ್ರಚಾರಕ್ಕಾಗಿ ಮಂಗಳೂರಿನ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸುವ ಹಿನ್ನೆಲೆಯಲ್ಲಿ ಕಾರ್ಯಕ್ರಮ ಕ್ಕೆ ಆಗಮಿಸುವ ಕಾರ್ಯಕರ್ತರು ವಾಹನ ಪಾರ್ಕಿಂಗ್ ವ್ಯವಸ್ಥೆ ಈ ಕೆಳಗಿನಂತಿವೆ.

ರೂಟ್‍ನಂಬ್ರ: 1 ಉಡುಪಿ, ಕಾರ್ಕಳ,ಪಡುಬಿದ್ರೆ, ಮುಲ್ಕಿ, ಸುರತ್ಕಲ್,(ಕಾರ್ಯಕರ್ತರನ್ನು ಕೆಳಗೆ ಇಳಿಸುವ ಸ್ಥಳ ) ಕಡೆಯಿಂದ ಬರುವಂತಹ ವಾಹನಗಳಿಗೆ.
ಕೊಟ್ಟಾರ ಚೌಕಿಯಾಗಿ – ಉರ್ವಸ್ಟೋರ್ – ಲೇಡಿಹಿಲ್ – ಲಾಲ್‍ಬಾಗ್ – ಪಿ.ವಿ.ಎಸ್ ಮಾರ್ಗವಾಗಿ ನವಭಾರತ್ ಸರ್ಕಲ್‍ನಲ್ಲಿ ಜನರನ್ನು ಇಳಿಸಿ ಕರಾವಳಿ ಉತ್ಸವ ಮೈದಾನ – ಉರ್ವ ಮಾರ್ಕೆಟ್ ಮೈದಾನ – ಉರ್ವಚರ್ಚ್ ಮೈದಾನ – ಕೆನರಾ ಹೈಸ್ಕೂಲ್‍ ಉರ್ವ ಮೈದಾನದಲ್ಲಿ ವಾಹನ ನಿಲುಗಡೆ ಮಾಡತಕ್ಕದ್ದು.
ರೂಟ್ ನಂಬ್ರ -2: ಸುಳ್ಯ- ಪುತ್ತೂರು- ಬೆಳ್ತಂಗಡಿ-ಬಂಟ್ವಾಳ- ಮೂಡಬಿದ್ರೆ–ಗುರುಪುರ ಕೈಕಂಬ ಕಡೆಯಿಂದ ಬರುವಂತಹ ವಾಹನಗಳಿಗೆ.
ಪಡೀಲ್ – ನಂತೂರು–ಕದ್ರಿ- ಬಲ್ಮಠ–ಜ್ಯೋತಿ ಸರ್ಕಲ್ (ಕಾರ್ಯಕರ್ತರನ್ನು ಕೆಳಗೆ ಇಳಿಸುವ ಸ್ಥಳ )ನಲ್ಲಿ ಜನರನ್ನು ಇಳಿಸಿ ಬಂಟ್ಸ್ ಹಾಸ್ಟೆಲ್ ಮಾರ್ಗವಾಗಿ ಬಂಟ್ಸ್ ಹಾಸ್ಟೆಲ್ ಮೈದಾನ–ಕದ್ರಿ ಮೈದಾನ – ಬಲ್ಮಠ ಶಾಂತಿ ನಿಲಯ ಮೈದಾನ- ಪದುವಾ ಹೈಸ್ಕೂಲ್ ಮೈದಾನದಲ್ಲಿ ವಾಹನ ನಿಲುಗಡೆ ಮಾಡತಕ್ಕದ್ದು.
ರೂಟ್ ನಂಬ್ರ– 3: ಕೋಣಾಜೆ–ದೇರಳಕಟ್ಟೆ – ಉಳ್ಳಾಲ- ತೋಕ್ಕೋಟ್ಟು – ಕಾಸರಗೋಡು ಕಡೆಯಿಂದ ಬರುವಂತಹ ವಾಹನಗಳಿಗೆ :
ತೋಕ್ಕೋಟ್ಟು – ಪಂಪ್‍ವೆಲ್–ಕಂಕನಾಡಿ– ವೆಲೆನ್ಸೀಯಾ– ಮಂಗಳಾದೇವಿ(ಕಾರ್ಯಕರ್ತರನ್ನು ಕೆಳಗೆ ಇಳಿಸುವ ಸ್ಥಳ ) ಜಂಕ್ಷನ್‍ನಲ್ಲಿ ಜನರನ್ನು ಇಳಿಸಿ ಎಮ್ಮೆಕೆರೆ ಮೈದಾನ– ವಾಮನ ನಾಯಕ್ ಮೈದಾನ– ಮೋರ್ಗನ್ಸ್‍ಗೇಟ್ ಮೈದಾನ ವಾಹನ ನಿಲುಗಡೆ ಮಾಡತಕ್ಕದ್ದು.
ಎಂದು ನರೇಂದ್ರ ಮೋದಿ ಸಾರ್ವಜನಿಕ ಸಭೆಯ ಪಾರ್ಕಿಂಗ್ ವ್ಯವಸ್ಥೆಯ ಪ್ರಮುಖ್ ಸಂದೇಶ್ ಶೆಟ್ಟಿ ತಿಳಿಸಿದ್ದಾರೆ .

More from the blog

ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ….?​ ಇಲ್ಲಿದೆ ಮಾಹಿತಿ

ಬೆಂಗಳೂರು: ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಶೇ 81.15 ಮಂದಿ ಉತ್ತೀರ್ಣಗೊಂಡಿದ್ದಾರೆ. 2024ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ 1,28,448 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ...

ದ್ವಿತೀಯ ಪಿಯು ಫಲಿತಾಂಶ ಪ್ರಕಟ : ದಕ್ಷಿಣ ಕನ್ನಡ ಜಿಲ್ಲೆಗೆ ಮೊದಲ ಸ್ಥಾನ

ಬೆಂಗಳೂರು: ಮಾರ್ಚ್ 1ರಿಂದ ಮಾರ್ಚ್ 22ರವರೆಗೆ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಬುಧವಾರ ಪ್ರಕಟಗೊಂಡಿದೆ. ಬೆಂಗಳೂರಿನಲ್ಲಿ ಶಿಕ್ಷಣ ಇಲಾಖೆ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದೆ. ಈ ಬಾರಿ, ಶೇ 81.15 ಮಂದಿ ಉತ್ತೀರ್ಣರಾಗಿದ್ದಾರೆ....

ಶಾಲಾ ಸಮುದಾಯದತ್ತ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ಮಾಣಿ: ಶೈಕ್ಷಣಿಕ ವಿಚಾರಗಳ ಸಂಬಂಧಿತವಾದ ಒಳ್ಳೆಯ ಚಚೆ೯ಗಳು ಮೂಡಿಬಂದಾಗ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾದ ಕೆಲಸಗಳು ಮೂಡಲು ಸಾಧ್ಯ ‌. ಪ್ರತಿಯೊಬ್ಬ ವಿದ್ಯಾರ್ಥಿ, ಪೋಷಕರು,ತನ್ನ ಶಾಲೆಯ ಬಗ್ಗೆ ಒಳ್ಳೆಯ ಭಾವನೆ, ಸಂಬಂಧ ಇರಬೇಕು...

ಮೈಟ್ ಎಜುಕೇಶನ್ ಸಂಸ್ಥೆಯ ವತಿಯಿಂದ 2024ರ ಪ್ರಾಕ್ಟಿಕಲ್ ಪರೀಕ್ಷೆ

ಮಂಗಳೂರು ಹಾಗೂ ಬಿಸಿರೋಡ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಮೈಟ್ ಎಜುಕೇಶನ್ ಸಂಸ್ಥೆಯ ವತಿಯಿಂದ 2024ರ ಪ್ರಾಕ್ಟಿಕಲ್ ಪರೀಕ್ಷೆ ಸೋಮವಾರ ಬಿಸಿರೋಡ್ ಶಾಖೆಯಲ್ಲಿ ನಡೆಯಿತು. ಟೀಚರ್ಸ್ ಟ್ರೈನಿಂಗ್ ವಿಭಾಗದ ವಿದ್ಯಾರ್ಥಿನಿಯರಿಂದ ಪ್ರಸ್ತುತ ವರ್ಷದಲ್ಲಿ ತಯಾರಿಸಿದ ಎಲ್ಲಾ ಕಲಿಕಾ...