


ಬಂಟ್ವಾಳ: ಶೃಂಗೇರಿ ಶಾಸಕನ ದೇಶದ್ರೋಹದ ಹೇಳಿಕೆಯನ್ನು ಖಂಡಿಸಿ, ಅವರ ಮೇಲೆ ಪ್ರಕರಣ ದಾಖಲಿಸುವಂತೆ ತಾ.ಪಂ.ಸದಸ್ಯ ಬಿಜೆಪಿ ಯುವ ನಾಯಕ ಪ್ರಭಾಕರ ಪ್ರಭು ಒತ್ತಾಯಿಸಿದ್ದಾರೆ.
ನಿನ್ನೆ ಶೃಂಗೇರಿ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೆ ಗೌಡ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ರನ್ನು ಮ್ರಧು ಸ್ವಭಾವ ದವರು , ಇದರಿಂದಲೆ ಭಾರತೀಯ ಸೈನಿಕ ಅಭಿನಂದನ್ ರನ್ನು ಬಿಟ್ಟು ಕೊಟ್ರು ಎಂದು ಹಾಡಿ ಹೊಗಳಿದ್ದನ್ನು ಬಂಟ್ವಾಳ ತಾಲೂಕು ಪಂಚಾಯತ್ ಸದಸ್ಯ ಪ್ರಭಾಕರ ಪ್ರಭು ಖಂಡಿಸಿದ್ದಾರೆ. ಇದು ದೇಶ ದ್ರೊಹದ ಹೇಳಿಕೆ ಯಾಗಿದ್ದು. ತಕ್ಷಣ ಪ್ರಕರಣ ದಾಖಾಲಿಸಿ ಕ್ರಮ ಕೈಗೊಂಡು ಅವರ ಸದಸ್ಯತನ ಅನರ್ಹ ಗೊಳಿಸಬೆಕು ಎಂದು ಆಗ್ರಹಿದ್ದಾರೆ.


