ಬಂಟ್ವಾಳ: ಸುಳ್ಳುಗಳನ್ನು ಹೇಳುತ್ತಾ ಕಳೆದ ಬಾರಿ ಬಿಜೆಪಿ ಆಡಳಿತಕ್ಕೆ ಬಂದಿದೆ ಆದರೆ ಈ ಬಾರಿ ಅಂತಹ ಅವಕಾಶವನ್ನು ಮತದಾರರು ನೀಡುವುದಿಲ್ಲ ಜಿಲ್ಲೆಯ ಸಮಗ್ರ ಅಭಿವ್ರದ್ದಿಗಾಗಿ ಸರ್ವಧರ್ಮಿಯರನ್ನು ಪ್ರೀತಿಸುವ ಕಾಂಗ್ರೇಸ್ ಪಕ್ಷವನ್ನು ಬೆಂಬಲಿಸುತ್ತಾರೆ ಎಂದು ನಿಕೇತ್ ರಾಜ್ ಮೌರ್ಯ ಹೇಳಿದರು.

ಅವರು ಬಿ.ಸಿ.ರೋಡಿನ ಪೊಳಲಿ ದ್ವಾರದ ಬಳಿ ಇರುವ ಮೈದಾನದಲ್ಲಿ ಗುರುವಾರ ಸಂಜೆ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಭಾಷಣಕಾರ ನಿಕೇತ್ ರಾಜ್ ಮೌರ್ಯ ಹೇಳಿದರು.

ಲೋಕಸಭಾ ಅಭ್ಯರ್ಥಿ ಮಿಥುನ್ ರೈ ಪರ ಪ್ರಚಾರ ಭಾಷಣ ಮಾಡಿದ ಅವರು, ಹಗರಣಗಳ ಬಗ್ಗೆ ಮಾತನಾಡುವ ನರೇಂದ್ರ ಮೋದಿ ನೇತೃತ್ವದ ಸರಕಾರದಿಂದ ಜನರು ಕೇವಲ ಭಾಷಣಗಳನ್ನಷ್ಟೇ ಕೇಳಬೇಕಾಯಿತು .
ಇವರ ಅವಧಿಯಲ್ಲಿ ಕೋಟ್ಯಾಂತರ ರೂ. ಹಗರಣಗಳನ್ನು ಕಾಣಬೇಕಾಯಿತು ಎಂದು ಅವರು ಹೇಳಿದರು.
ವಿದೇಶಕ್ಕೆ ಗೋಮಾಂಸ ರಪ್ತು ಮಾಡುವ ಮೂಲಕ ಕಾಂಗ್ರೇಸ್ ನ ಅವದಿಯಲ್ಲಿ ನಡೆಯದಂತಹ ಅನೇಕ ಅಕ್ರಮ ಚಟುವಟಿಕೆಗಳಲ್ಲಿ ಬಿಜೆಪಿ ಬಾಗಿಯಾಯಿತು ಎಂದು ಟೀಕಿಸಿದರು.

ಇದಕ್ಕೂ ಮುನ್ನ ಮಾತನಾಡಿದ ನ್ಯಾಯವಾದಿ ಸುಧೀರ್ ಕುಮಾರ್ ಮುರೊಳ್ಳಿ, ಬಿಜೆಪಿಯಿಂದ ಆಯ್ಕೆಗೊಂಡ ಸಂಸದರು ಶೂನ್ಯ ಸಾಧನೆ ಮಾಡಿದ್ದಾರೆ, ಅಪಪ್ರಚಾರ ಮಾಡಿದರೆ ಗೆಲ್ಲುತ್ತೇವೆ ಎಂದು ನಂಬಿದ್ದಾರೆ ಎಂದು ಲೇವಡಿ ಮಾಡಿದರು. ಅವರ ಆ ಪ್ರಚಾರಕ್ಕೆ ತಕ್ಕುದಾದ ಪ್ರತ್ಯುತ್ತರವಾಗಿ ಮಿಥುನ್ ರೈ ಅವರನ್ನು ಎಂ.ಪಿ‌.ಯಾಗಿ ಆರಿಸಿ ಎಂದು ಅವರು ಮನವಿ ಮಾಡಿದರು.

ಮಾಜಿ ಸಚಿವ ರಮಾನಾಥ ರೈ ಮಾತನಾಡಿ, ಅಪಪ್ರಚಾರದಿಂದ ತಾನು ವಿಧಾನಸಭೆಯಲ್ಲಿ ಸೋಲನುಭವಿಸಬೇಕಾಯಿತು. ಕೆಲಸ ಮಾಡಿಯೂ ಸೋಲಕಾಣಬೇಕಾಯಿತ್ತಲ್ಲ ಎಂಬ ನೋವು ನನಗಿದೆ, ತಕ್ಷಣ ಆ ನೋವು ಮರೆಯಲು ಈ ಬಾರಿ ಕಾಂಗ್ರೇಸ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದರು.
ಕನ್ನಡ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾದ ಸಂಸದರಿಂದ ಅಭಿವೃದ್ಧಿಗಳಾಗಿವೆ. ಬಿಜೆಪಿಯಿಂದ ಆಯ್ಕೆಗೊಂಡ ಸಂಸದರ ಯಾವುದಾದರೂ ಒಂದು ಸಾಧನೆಯನ್ನು ಹೇಳುವಿರಾ ಎಂದು ಪ್ರಶ್ನಿಸಿದರು.
ಪಕ್ಷದ ಅಭ್ಯರ್ಥಿ ಮಿಥುನ್ ರೈ ಮಾತನಾಡಿ, ತಾನು ಕೇಸರಿ ಶಾಲು ಹಾಕುವ ಬಗ್ಗೆ ಕೆಲವರು ಪ್ರಸ್ತಾಪಿಸುತ್ತಾರೆ. ಆದರೆ ಕೇಸರಿ ಎಲ್ಲರನ್ನೂ ಒಗ್ಗೂಡಿಸುವ ಸಂಕೇತ, ಹಿಂದು, ಮುಸ್ಲಿಂ, ಕ್ರೈಸ್ತರನ್ನು ಜೊತೆಗೂಡಿಸಿ ಕೆಲಸ ಮಾಡುತ್ತೇನೆ, ತನಗೆ ಅವಕಾಶ ನೀಡಿದರೆ ನಿಷ್ಠೆಯಿಂದ ಕೆಲಸ ಮಾಡುವೆ ಎಂಬ ಆಶ್ವಾಸನೆ ನೀಡಿದರು.
ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಮಾತನಾಡಿ, ಈ ಬಾರಿ ಮಿಥುನ್ ರೈ ಅವರನ್ನು ಗೆಲ್ಲಿಸುವಂತೆ ಕರೆ ನೀಡಿದರು.ಈ ಸಂದರ್ಭ ವಿಧಾನಪರಿಷತ್ತು ಸದಸ್ಯ ಹರೀಶ್ ಕುಮಾರ್, ಜಿಲ್ಲಾ ಪಂಚಾಯತ್ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಪದ್ಮಶೇಖರ ಜೈನ್, ಎಂ.ಎಸ್.ಮಹಮ್ಮದ್, ಶಾಹುಲ್ ಹಮೀದ್, ಪಕ್ಷ ಪ್ರಮುಖರಾದ ಬಿ.ಎಚ್. ಖಾದರ್, ಕೋಡಿಜಾಲ್ ಇಬ್ರಾಹಿಂ, ಜೆಡಿಎಸ್ ಪ್ರಮುಖರಾದ ಮಹಮ್ಮದ್ ಶಫಿ, ಪಿ.ಎ.ರಹೀಂ, ಹಾರೂನ್ ರಶೀದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್, ಸುದೀಪ್ ಶೆಟ್ಟಿ ಮಾಣಿ, ಪ್ರಮುಖರಾದ ಬಾಲಕೃಷ್ಣ ಆಳ್ವ ಕೊಡಾಜೆ, ಸದಾಶಿವ ಬಂಗೇರ, ಪ್ರಶಾಂತ್ ಕುಲಾಲ್, ರಾಜಶೇಖರ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here