ಬಂಟ್ವಾಳ: ಏ.18ರಂದು ನಡೆಯುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣೆ ಯ ಕರ್ತವ್ಯ ದಲ್ಲಿ ಭಾಗವಹಿಸುವ ಸಿಬ್ಬಂದಿ ಗಳಿಗೆ ಪೂರ್ವಭಾವಿ ಯಾಗಿ ಎರಡನೇ ಹಂತದ ತರಬೇತಿಯನ್ನು ಎ.ಆರ್.ಒ.ಮಹೇಶ್ ಅವರ ನೇತ್ರತ್ವದಲ್ಲಿ ಮೊಡಂಕಾಪು ಶಾಲೆಯಲ್ಲಿ ನೀಡಲಾಯಿತು.

ಒಟ್ಟು 1196 ಮಂದಿ ಸಿಬ್ಬಂದಿ ಗಳು ತರಬೇತಿಯಲ್ಲಿ ಭಾಗವಹಿಸಿದರು. ಮೊಡಂಕಾಪು ಇನ್ಫೆಂಟ್ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಒಟ್ಟು 23 ಕೊಠಡಿ ಗಳಲ್ಲಿ ತರಬೇತಿಯನ್ನು ನೀಡಲಾಗುತ್ತಿದೆ.
18 ರೂಮ್ ಗಳಲ್ಲಿ 40 ಜನ, 4 ರೂಮ್ ಗಳಲ್ಲಿ 120 ಜನ ಹಾಗೂ 1 ರೂಮ್ ನಲ್ಲಿ 36 ಸಿಬ್ಬಂದಿ ಗಳಿಗೆ ಪ್ರತ್ಯೇಕ ಪ್ರತ್ಯೇಕ ವಾಗಿ ತರಬೇತಿ ನೀಡಲಾಗಿದೆ. 21 ಸೆಕ್ಟರ್ ಅಫೀಸರ್ ಹಾಗೂ 6 ಮಂದಿ ಮಾಸ್ಟರ್ ತರಬೇತಿ ದಾರರಿಂದ ತರಬೇತಿ ನೀಡಲಾಗಿದೆ.
ಜಿಲ್ಲೆಯ ಬೇರೆ ಬೇರೆ ಕಡೆಗಳಿಂದ ಚುನಾವಣಾ ಕರ್ತವ್ಯ ಸಿಬ್ಬಂದಿ ಗಳು ತರಬೇತಿ ಯಲ್ಲಿ ಭಾಗವಹಿಸಿದರು.
ಬೆಳ್ತಂಗಡಿ ಯಿಂದ 2 ಬಸ್, ಮೂಡಬಿದ್ರೆ 1, ಮಂಗಳೂರು ಉತ್ತರ 2, ಮಂಗಳೂರು ದಕ್ಷಿಣ 2, ಮಂಗಳೂರು ಕೇಂದ್ರ 1 ಪುತ್ತೂರು 2 ಸುಳ್ಯ 2 ಬಸ್ ಒಟ್ಟು 12 ಬಸ್ ಗಳ ಲ್ಲಿ ಸಿಬ್ಬಂದಿ ಗಳು ತರಬೇತಿ ಗೆ ಅಗಮಿಸಿದ್ದಾರೆ. ಬಂಟ್ವಾಳ ತಾಲೂಕಿನಿಂದ 8 ಬಸ್ ಗಳಲ್ಲಿ ಬೇರೆ ಕಡೆ ಗೆ ತರಬೇತಿಗೆ ತೆರಳಿದ್ದಾರೆ.

ತರಬೇತಿ ಕೇಂದ್ರದ ಬಳಿ ಅಂಬ್ಯೂಲೆನ್ಸ್ ವ್ಯವಸ್ಥೆ, ಉತ್ತಮ ಗುಣಮಟ್ಟದ ಊಟೋಪಚಾರ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ಮಹೇಶ್ ತಿಳಿಸಿದರು.

ಮೊಡಂಕಾಪು ಇನ್ಫೆಂಟ್ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ನಡೆದ ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ ಕೇಂದ್ರದಲ್ಲಿ ಪವರ್‌ಪೋಂಟ್‌ನಲ್ಲಿ ಆಡಿಯೋ ಮತ್ತು ವೀಡಿಯೋ ಮೂಲಕ ಪ್ರಾತ್ಯಕ್ಷಿಕೆಯಲ್ಲಿ ಚುನಾವಣಾ ಹೇಗೆ ನಡೆಯುತ್ತದೆ.
ಅಲ್ಲಿ ಬರುವ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಲಾಯಿತು.
ನಂತರ ಇವಿಎಂನ್ನು ಬಳಸುವುದು ಹೇಗೆ, ಅಂಧ ಮತದಾರರು ಬಂದರೆ ಅವರಿಗೆ ಹೇಗೆ ಮತದಾನ ಮಾಡಲಾಗುವುದು, ಇವಿಎಂನ ದೋಷದ ಸಮಸ್ಯೆ ಬಂದರೆ ಅದನ್ನು ನಿಭಾಯಿಸುವುದು, ವಿವಿ ಪ್ಯಾಟ್ ಮತ್ತು ಮತದಾನ ಪ್ರಕ್ರಿಯೆಗಳಲ್ಲಿ ಆಧುನಿಕ ತಂತ್ರಜ್ಞಾನಗಳ ಕುರಿತು ಮಾಹಿತಿ ನೀಡಲಾಯಿತು ಎಂದು‌ ಮಹೇಶ್ ತಿಳಿಸಿದ್ದಾರೆ.

ತರಬೇತಿ ಕೇಂದ್ರದ ಬಳಿ ವಿಶೇಷವಾಗಿ ಸ್ವಾಗತ ಕೊಠಡಿ ಇದ್ದು, ತರಬೇತಿ ಪಡೆಯಲು ಬಂದವರಿಗೆ ಸಹಕಾರಿಯಾಗಲು ಮಾಹಿತಿ ಕೇಂದ್ರದ ವ್ಯವಸ್ಥೆ ಮಾಡಲಾಯಿತು ಎಂದರು.
ಕೊಠಡಿಗಳಲ್ಲಿಯೇ ಹಾಜರಾತಿಯನ್ನು ತೆಗೆದುಕೊಂಡಿದ್ದರಿಂದ ಎಲ್ಲಾ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಆಗಮಿಸಿದ್ದರು.
ಸಿದ್ದಕಟ್ಟೆ ಯ ಸಂಗಬೆಟ್ಟು ಬೂತ್ ಸಂಖ್ಯೆ 3 ಒಂದು ಮಾತ್ರ ಪಿಂಕ್‌ ಬೂತ್ ಎಂದು ಪರಿಗಣಿಸಿ ಅಲ್ಲಿನ ಎಲ್ಲಾ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಅಂಚೆ ಮತಪತ್ರದ ಅರ್ಜಿಯನ್ನು ಸ್ವೀಕರಿಸಲಾಯಿತು. ಎ.10 ಬುಧವಾರ ನಾಳೆ ಬೆಳಿಗ್ಗೆ 9.30 ರಿಂದ ಇ.ವಿ.ಯಂ.ಯಂತ್ರದ ಸಿದ್ದಪಡಿಸುವುವಿಕೆ ಕಾರ್ಯಕ್ರಮ ನಡೆಯಲಿದೆ. ಈಬಗ್ಗೆ ಈಗಾಗಲೇ ಎಲ್ಲಾ ಪಕ್ಷದ ಪ್ರಮುಖ ರಿಗೆ ಮಾಹಿತಿ ನೀಡಲಾಗಿದೆ ಎಂದು ಅವರು ಹೇಳಿದರು.

ಚುನಾವಣಾ ಅಧಿಕಾರಿ ಮಹೇಶ್, ಬಂಟ್ವಾಳ ತಹಶೀಲ್ದಾರ್ ಸಣ್ಣ ರಂಗಯ್ಯ, ತಾಲೂಕು ಪಂಚಾಯತ್ ಕಾರ್ಯನಿರ್ವಹಣ ಆಧಿಕಾರಿ ರಾಜಣ್ಣ. ಬಂಟ್ವಾಳ ಶಿಕ್ಷಣಧಿಕಾರಿ ಶಿವಪ್ರಕಾಶ್ ಚುನಾವಣಾ ಉಪತಹಶೀಲ್ದಾರ್ ದಾದಾ ಪೈರೋಜ್ ಆಹಾರ ಶಾಖೆಯ ಉಪತಹಶೀಲ್ದಾರ್ ವಾಸು ಶೆಟ್ಟಿ ನಾಡಕಚೇರಿ ಉಪ ತಹಶೀಲ್ದಾರ್ ರವಿಶಂಕರ್ ತಾಲೂಕು ಉಪತಹಶೀಲ್ದಾರ್ ರಾಜೇಶ್ ನಾಯ್ಕ್ ಚುನಾವಣಾ ಶಾಖೆಯ ಪ್ರಥಮ ದರ್ಜೆ ಸಹಾಯಕ ರಾಜ್ ಕುಮಾರ್ ಬಂಟ್ವಾಳ ಕಂದಾಯ ನಿರೀಕ್ಷಕ ನವೀನ್ ಬೆಂಜನ ಪದವು ಮತ್ತಿತರರು ಹಾಜರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here