Sunday, October 22, 2023

ಬಂಟ್ವಾಳ ನಗರದಲ್ಲಿ ಶಾಸಕ ರಾಜೇಶ್ ನಾಯ್ಕ್ ರಿಂದ ಬಿರುಸಿನ ಮತಯಾಚನೆ

Must read

ಬಂಟ್ವಾಳ: ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರ ನೇತೃತ್ವದಲ್ಲಿ ಕಾರ್ಯಕರ್ತರು ರವಿವಾರ ಬಂಟ್ವಾಳ ನಗರಪರಿಸರದಲ್ಲಿ ದ.ಕ.ಲೋಕಸಭಾ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಪರ ಬಿರುಸಿನ ಮತಯಾಚನೆಗೈದರು. ಬಂಟ್ವಾಳ ತಿರುಮಲ ವೆಂಕಟರಮಣದೇವಳದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ ರಥಬೀದಿಯಲ್ಲಿರುವ ಅಂಚೆ ಕಚೇರಿ ಪರಿಸರ, ಶಾಲಾರಸ್ತೆ, ಕೊಟ್ರಮಣಗಂಡಿ, ಬಡ್ಡಕಟ್ಟೆಯವರೆಗೆ ಶಾಸಕರು ಅಭ್ಯರ್ಥಿ ನಳಿನ್ ಪರ ಮತಯಾಚನೆಗೈದರು.

ಈ ಸಂದರ್ಭ ಬಿಜೆಪಿ ಮುಖಂಡರಾದ ಜಿ.ಆನಂದ, ದಿನೇಶ್ ಭಂಡಾರಿ, ಉದಯಕುಮಾರ್ ರಾವ್ ಬಂಟ್ವಾಳ, ಪುರಸಭಾ ಸದಸ್ಯೆ ಶಶಿಕಲಾ, ಕಾರ್ಯಕರ್ತರಾದ ಗುರುದತ್ತ ನಾಯಕ್, ಪ್ರಮೋದ್ ಭಟ್, ರವೀಂದ್ರ ಪ್ರಭು, ವಸಂತ ಮಲ್ಯ, ರಾಮಪ್ರಸಾದ್ ಪ್ರಭು, ಪ್ರಶಾಂತ್, ಗುರುದತ್ತ ಭಂಡಾರ್ ಕಾರ್, ಗಿರಿಧರ ಬಾಳಿಗಾ, ವಿಶ್ವನಾಥ ನಾಯ್ಕ್ ಕಬ್ಬಿನಹಿತ್ಲು, ಉಮೇಶ್ ಕಬ್ಬಿನಹಿತ್ಲು, ಪುಷ್ಪರಾಜ್, ಶಿವಪ್ರಸಾದ್, ಪ್ರಣಾಮ್, ಕೃಷ್ಣಭಂಡಾರಿ ಮೊದಲಾದವರಿದ್ದರು.  ಸಂಸದ ನಳಿನ್ ಕುಮಾರ್ ಕಟೀಲ್ ಅವರು ದ.ಕ.ಜಿಲ್ಲೆಯ ಅಭಿವೃದ್ದಿ ಶ್ರಮಿಸಿದ್ದು,ಕಳೆದ ಐದು ವರ್ಷದ ಆಡಳಿತಾವಧಿಯಲ್ಲಿ ದ.ಕ.ಜಿಲ್ಲೆಗೆ 1650 ಕೋ.ರೂ.ಅನುದಾನವನ್ನು ಮಂಜೂರು ಮಾಡಿಸುವಲ್ಲಿ ಯಶಸ್ವಿಯಾಗಿದ್ದು, ಬಂಟ್ವಾಳ ಕ್ಷೇತ್ರದ ಅಭಿವೃದ್ದಿಗೂ ಸಾಕಷ್ಟು ಅನುದಾನ ಒದಗಿಸಿದ್ದಾರೆ. ಅವರ ಹ್ಯಾಟ್ರಿಕ್ ಗೆಲುವು ನಿಶ್ಚಿತವಾಗಿದ್ದು, ನರೇಂದ್ರ ಮೋದಿ ಮತ್ತೊಮ್ಮೆ ಪ್ರದಾನಿಯಾಗಲಿದ್ದಾರೆ ಎಂದು ಶಾಸಕ ರಾಜೇಶ್ ನಾಯ್ಕ್ ಅವರು ತಿಳಿಸಿದರು.

More articles

Latest article