Thursday, October 26, 2023

ಕಥೋಲಿಕ್ ಸಭಾ ಮೊಗರ್‍ನಾಡ್ ಘಟಕದ ರಜತೋತ್ಸವ ಸಮಾರೋಪ ಸಿಎಸ್‌ಎಂ ರಜತ ಸಂಭ್ರಮ ಸ್ಮರಣಾರ್ಥ ರಂಗಮಂಟಪ ಕೊಡುಗೆ-ಉದ್ಘಾಟನೆ

Must read

ಬಂಟ್ವಾಳ: ಬಂಟ್ವಾಳ ತಾಲೂಕು ಕಲ್ಲಡ್ಕ ಅಲ್ಲಿನ ಮೊಗರ್‍ನಾಡ್ ದೇವಮಾತೆ ಇಗರ್ಜಿ (ಮದರ್ ಆಫ್ ಗಾಡ್ ಚರ್ಚ್ ಮೊಗರ್‍ನಾಡ್)ಯ ಆವರಣದಲ್ಲಿ ಕಳೆದ ಶನಿವಾರ ಸಂಜೆ ಕಥೋಲಿಕ್ ಸಭಾ ಮಂಗಳೂರು ಪ್ರದೇಶ (ನೋ.) ಇದರ ಮೊಗರ್‍ನಾಡ್ ಘಟಕವು ರಜತೋತ್ಸವ ಸಮಾರೋಪ ಸಂಭ್ರಮಿಸಿತು.

ಈ ಶುಭಾವಸರದಲ್ಲಿ ಕಥೋಲಿಕ್ ಸಭಾ ಮೊಗರ್‍ನಾಡ್ ಘಟಕದ ಸಿಎಸ್‌ಎಂ ರಜತ ಸಂಭ್ರಮ ಸ್ಮರಣಾರ್ಥ ಕೊಡುಗೆಯಾಗಿಸಿದ್ದ ರಂಗಮಂಟಪವನ್ನು ದೇವಮಾತೆ ಇಗರ್ಜಿಯ ಪ್ರಧಾನ ಧರ್ಮಗುರು ಹಾಗೂ ಕಸಮಮೊ ನಿರ್ದೇಶಕ ರೆ| ಫಾ| ಡಾ| ಮಾರ್ಕ್ ಕಾಸ್ತೆಲಿನೊ ಆಶೀರ್ವಚನಗೈದು ಉದ್ಘಾಟಿಸಿದರು.

ನಂತರ ಫಾ| ಮಾರ್ಕ್ ಕಾಸ್ತೆಲಿನೊ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕಥೋಲಿಕ್ ಸಭಾ ಮಂಗಳೂರು ಕೇಂದ್ರಿಯ ಅಧ್ಯಕ್ಷ ರೋಲ್ಫಿ ಡಿಕೋಸ್ತ, ಅತಿಥಿ ಅಭ್ಯಾಗತರಾಗಿ ದೇವಮಾತೆ ಇಗರ್ಜಿಯ ಸಹಾಯಕ ಧರ್ಮಗುರು ರೆ| ಫಾ ದೀಪಕ್ ಡೆಸಾ, ದೇವಮಾತಾ ಕಾನ್ವೆಂಟ್‌ನ ಮುಖ್ಯಸ್ಥೆ ಭಗಿಸಿ ಸಿ| ಲೂಸಿ ಗ್ರೆಟ್ಟಾ, ಕಥೋಲಿಕ್ ಸಭಾ ಬಂಟ್ವಾಳ ಪ್ರಾದೇಶಿಕ ಸಮಿತಿ ಅಧ್ಯಕ್ಷ ಸ್ಟಾನಿ ಲೋಬೊ, ಕಥೋಲಿಕ್ ಸಭಾ ಮೊಗರ್‍ನಾಡ್ ಸಮಿತಿ ಅಧ್ಯಕ್ಷ ಆಂಟನಿ ಡಿಸೋಜಾ, ಎಂಸಿಸಿ ಬ್ಯಾಂಕ್‌ನ ಕಾರ್ಯಾಧ್ಯಕ್ಷ ಅನಿಲ್ ಲೋಬೊ ಪೆರ್ಮಾಯ್, ಬಿಸಿಸಿ ಬ್ಯಾಂಕ್‌ನ ಕಾರ್ಯಾಧ್ಯಕ್ಷ ಹೆರಾಲ್ಡ್ ಡಿಸೋಜಾ, ದೇವಮಾತೆ ಇಗರ್ಜಿಯ ಪಾಲನಾ ಮಂಡಳಿ ಉಪಾಧ್ಯಕ್ಷೆ ಜಾನೆಟ್ ವಾಸ್, ಕಾರ್ಯದರ್ಶಿ ಎಡ್ವಿನ್ ಪಸನ್ನ ವೇದಿಕೆಯಲ್ಲಿ ಆಸೀನರಾಗಿದ್ದು ಕಥೋಲಿಕ್ ಸಭಾ ಮಂಗಳೂರು ಪ್ರದೇಶದ ಮೊಗರ್‍ನಾಡ್ ಘಟಕದ ಮಾಜಿ ಅಧ್ಯಕ್ಷ ಸ್ಟೀವನ್ ಡಿಸೊಜಾ (ದೇರಡ್ಕ) ಮೊಗಾರ್‍ನಾಡ್ ಇವರನ್ನು ಹಾಗೂ ಮತ್ತಿತರ ಸಾಧಕರನ್ನು ಸನ್ಮಾನಿಸಿ ಗೌರವಿಸಿದರು. ಅತಿಥಿವರ್ಯರು ಸಂದರ್ಭೋಚಿತವಾಗಿ ಮಾತನಾಡಿ ಶುಭಾರೈಸಿದರು.

ಕಸಮಮೊ ಅಧ್ಯಕ್ಷ ಅಜಯ್ ಪಾಯ್ಸ್ ಸ್ವಾಗತಿಸಿದರು. ನೋಯೆಲ್ ಲೋಬೊ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಕಸಮಮೊ ಕಾರ್ಯದರ್ಶಿ ಸ್ಟಾನಿ ಪಿಂಟೊ ವಂದಿಸಿದರು. ಕಾರ್ಯಕ್ರಮದ ಅಂಗವಾಗಿ ಬೈಲೂರು ಪ್ರಸನ್ನ ಶೆಟ್ಟಿ ರಚಿಸಿ ನಿರ್ದೇಶಿಸಿದ ‘ಬುದ್ದಿ ಚಪಟ್’ ತುಳು ಹಾಸ್ಯಮಯ ಕನ್ನಡ ನಾಟಕವನ್ನು ಬೈಲೂರು ಕಲಾವಿದರು ಪ್ರದರ್ಶಿಸಿದರು.

More articles

Latest article