Thursday, September 28, 2023

ಭಾವನಾತ್ಮಕವಾಗಿ ಕೆರಳಿಸಿ ಮೋಸ ಮಾಡುವ ಬಿಜೆಪಿ ತಂತ್ರಗಾರಿಕೆ: ಅಶ್ವನಿ ಕುಮಾರ್ ರೈ

Must read

ಬಂಟ್ವಾಳ: ಮತದಾರರನ್ನು ಭಾವನಾತ್ಮಕವಾಗಿ ಕೆರಳಿಸಿ ಅವರನ್ನು ಮೋಸ ಮಾಡುವ ಬಿಜೆಪಿಯವರ ತಂತ್ರಗಾರಿಕೆ ಈ ಬಾರಿಯ ಚುನಾವಣೆಯಲ್ಲಿ ನಡೆಯುವುದಿಲ್ಲ. ಮತದಾರರಿಗೆ ಮಂಕುಬೂದಿ ಎರಚುವ ಕಾಲ ಹೋಗಿದೆ. ಜನರ ಈ ಬಾರಿ ಬದಲಾವಣೆ ಬಯಸಿದ್ದ ರಾಹುಲ್ ಗಾಂಧಿ ಈ ದೇಶದ ಪ್ರಧಾನಿಯಾಗಲಿದ್ದಾರೆ ಎಂದು ಕೆಪಿಸಿಸಿ ಕಾರ್ಯದರ್ಶಿ, ಹಿರಿಯ ನೋಟರಿ ನ್ಯಾಯವಾದಿ ಎ.ಅಶ್ವನಿ ಕುಮಾರ್ ರೈ ಅವರು ನುಡಿದರು.
ಬಿ.ಸಿ.ರೋಡಿನಲ್ಲಿ ಬುಧವಾರ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಪರ ಮತಯಾಚನೆ ರೋಡ್ ಶೋ ನಡೆಸಿ ಮಾತನಾಡಿದ ಅವರು, ಕಳೆದ ಬಾರಿ ಮೋದಿ ಸರಕಾರ ನೀಡಿರುವ ಆಶ್ವಾಸನೆಯನ್ನು ಮರೆತು, ಈ ಬಾರಿ ಕೇವಲ ಓಟ್ ಬ್ಯಾಂಕ್ ರಾಜಕೀಯ ಮಾಡುತ್ತಿದ್ದಾರೆ ಎಂದವರು ಆರೋಪಿಸಿದರು.


ನಳಿನ್ ಕುಮಾರ್ ಕಟೀಲ್ ಅವರು ಕಳೆದ ೨ ಅವಧಿಯಲ್ಲಿ ಮಾಡಿರುವ ಸಾಧನೆಯನ್ನು ಜನರು ನೋಡಿದ್ದಾರೆ. ಅತಂತ್ರ ಸ್ಥಿತಿಯಲ್ಲಿರುವ ಮಂಗಳೂರು ಫ್ಲೈಓವರ್, ಬಿ.ಸಿ.ರೋಡ್-ಸುರತ್ಕಲ್ ಚತುಷ್ಪಥ ಹೆದ್ದಾರಿ, ಬಿ.ಸಿ.ರೋಡ್ ಫ್ಲೈಓವರ್, ಹಾಸನ-ಬಿ.ಸಿ.ರೋಡ್ ಹೆದ್ದಾರಿ, ತೊಕ್ಕೊಟ್ಟು ನಗರ ಅಸ್ತವ್ಯಸ್ತಕ್ಕೆ ಉತ್ತರವಾದಿತ್ವ ಇಲ್ಲದಂತಾಗಿದೆ ಎಂದು ಟೀಕಿಸಿದರು.
ಮಂಗಳೂರು ಜಿಲ್ಲೆಯ ಸಮಸ್ಯೆ, ಇಲ್ಲಿನ ಜನರ ಬಹುಮುಖ್ಯ ಬೇಡಿಕೆಗಳನ್ನು ಕೇಂದ್ರ ಸರಕಾರಕ್ಕೆ ತಲುಪಿಸುವ ನಿಟ್ಟಿನಲ್ಲಿ ಮಿಥುನ್ ರೈ ಸಮರ್ಥ ಅಭ್ಯರ್ಥಿಯಾಗಿದ್ದು, ಜಿಲ್ಲೆಯ ಸಮಗ್ರ ಜನತೆ ಇಂದು ಮಿಥುನ್ ರೈ ಪರವಾಗಿ ಒಲವು ತೋರಿಸಿದ್ದಾರೆ ಎಂದವರು ಭರವಸೆ ನುಡಿದರು.
ಪ್ರಮುಖರಾದ ಸಂಜೀವ ಪೂಜಾರಿ, ರಾಮಕೃಷ್ಣ ಆಳ್ವ, ಸದಾಶಿವ ಬಂಗೇರ, ಚಿತ್ತರಂಜನ್ ಶೆಟ್ಟಿ, ಮಹಮ್ಮದ್ ನಂದರಬೆಟ್ಟು, ಲುಕ್ಮಾನ್ ಕೈಕಂಬ, ಬಿ.ಮೋಹನ್, ರಹೀಂ ಪಿ.ಎ., ಶೋಭಿತ್ ಪೂಂಜಾ, ಪ್ರವೀಣ್ ಸಜೀಪ, ಸ್ವೀವನ್ ಡಿಸೋಜ, ಮಹಮ್ಮದ್ ಶೆರೀಫ್ ಶಾಂತಿಅಂಗಡಿ, ಕರೀಂ ಬೊಳ್ಳಾಯಿ, ಸಮೀರ್ ಶಾಂತಿಅಂಗಡಿ ಈ ಸಂದರ್ಭದಲ್ಲಿ ಭಾಗವಹಿಸಿ ಮತಯಾಚನೆ ನಡೆಸಿದರು.

More articles

Latest article