Wednesday, October 18, 2023

ಕಡಿಮೆ ಅಂಕ ಪಡೆದ ಹಾಗೂ ಫೇಲಾದ ಮಕ್ಕಳಲ್ಲಿ ಒಂದು ಭಿನ್ನಹ.

Must read

ಕಡಿಮೆ ಅಂಕ ಬಂದ ಮಕ್ಕಳು ಮಮ್ಮಲ ಮರುಗದಿರಿ, ನಿಜವಾಗಿಯೂ ನೀವೇ ಅತ್ಯಂತ ಪ್ರಭಾವಶಾಲಿ, ದೊಡ್ಡ ವ್ಯಕ್ತಿಗಳಾಗುವವರು ತಾವು, ನೋಡಿ 100 ಗೆ 100 ತಗೆದವರು ಇಂದೇ ನಾನು ಡಾಕ್ಟರ್ ಅಥವಾ ಇಂಜಿನಿಯರ್ ಅಂತ ತಮ್ಮ ಭವಿಷ್ಯ ಬರೆದುಕೊಂಡು ಅದಕ್ಕೆ ಅವರು ಕಟೀ ಬದ್ದರಾಗುತ್ತಾರೆ, ಅದನ್ನು ಬಿಟ್ಟರೆ ಬದುಕೆಂಬುವುದು ಅವರಿಗೆ ನಶ್ವರ, ಆದರೆ ಫೇಲಾದವರು ಮತ್ತು 35% ನವರನ್ನು ನೋಡಿ, ಅವರಿಗೆಷ್ಟು ಅವಕಾಶಗಳು, ಎಲ್ಲಾ ಬಾಗಿಲು ಓಪನ್ ಇರುತ್ತವೆ, ದೇಶ ಕಟ್ಟುವ ನಾಯಕರು, ದೇಶ ಕಾಯುವ ಯೋಧರು, ಅನ್ನ ಬೆಳೆಯುವ ರೈತರು, ಇತರೆ ಕಾಂಪಿಟಿಷನ್ ಎಕ್ಸಾಮ್,, ಸಮಾಜ ಸೇವೆ, ಪದವಿ, ವ್ಯಾಪಾರ, ಹೀಗೆ ಹಲವಾರು ಅವಕಾಶ ಸಿಗುವುದು 35% ನವರಿಗೆ ಮತ್ತು ಫೇಲ್ ಆದವರಿಗೆ ಮಾತ್ರ, ಹಾಗಾಗು ಇವರು ಮಾತ್ರ ಜೀವನದಲ್ಲಿ ಮೇರು ವ್ಯಕ್ತಿಗಳಾಗುತ್ತಾರೆ, ಕಾರಣ ಮಾನಸಿಕವಾಗಿ ಯಾವ ಯುದ್ದ ಮಾಡಲೂ ತಯಾರಿರುತ್ತಾರೆ, ಇದಕ್ಕೆ ಅತ್ಯತ್ತಮ ಉದಾಹರಣೆ ವ್ಯಕ್ತಿಗಳೆಂದರೆ ಸಚಿನ್ ತೆಂಡೂಲ್ಕರ್, ಅಮಿತಾಬ್ ಬಚ್ಚನ್, ಬಿಲ್ ಗೇಟ್ಸ್, ಡಾ. ರಾಜಕುಮಾರ್, ಪುಟ್ಟ ರಾಜ ಗವಾಯಿಗಳು, ದೇವೇ ಗೌಡರು ಹೀಗೆ ಹೆಸರಿಸುತ್ತಾ ಹೋದರೆ ಸಾವಿರಾರು ಜನ ಸಿಗುತ್ತಾರೆ, ಹಾಗಾಗಿ ಅಧೈರ್ಯ ಹೊಂದುವುದು ತರವಲ್ಲ, ನಿಮ್ಮ ಬದುಕಿಗೆ ನೀವೆ ಉತ್ತಮವಾದ ಶಿಲ್ಪಿ, ಪೇಲ್ ಆದವರಿಂದ ಮತ್ತು 35% ಪಡೆದವರಿಂದಲೇ ಈ ಜಗತ್ತು ನಡೆಯುತ್ತಿರುವುದು, ಹೇಗೆಂದರೆ ಪೇಲಾದವರ ಹಾಗೂ ಜಸ್ಟ್ ಪಾಸದವರ ಅನುಪಾತವೇ ಈ ಜಗದಲ್ಲಿ ಅತಿ ಹೆಚ್ಚು, ಬಿ ಕೂಲ್, ಬಿ ಪ್ರೌಡ್, ಬಿ ಹ್ಯಾಪಿ…

 

  • ರವಿ ಚಿನಾ ಹಳ್ಳಿ

More articles

Latest article