Friday, April 12, 2024

ಏನೆಂದು ಬರೆಯಲಿ…

ಏನೆಂದು ಬರೆಯಲಿ ಕವನ
ಯಾರ ಬಗ್ಗೆ ಬರೆಯಲಿ ಕವನ
ಏನೂ ಇಲ್ಲದ ಈ ಮೂರು ದಿನದ ಜೀವನದಲ್ಲಿ.

ಕವನ ಬರೆಯಲು ಕುಳಿತರೆ
ಒಮ್ಮೆ ಎಲ್ಲ ನಮ್ಮವರಂತೆ ಕಾಣುವರು ಕೆಲವೊಮ್ಮೆ ನಮ್ಮವರೇ ಬೇರೆಯವರಂತೆ ಕಾಣುವರು ಏನೆಂದು ಬರೆಯಲಿ ಕವನ ಯಾರ ಬಗ್ಗೆ ಬರೆಯಲಿ ಕವನ ?
ಏನೂ ಇಲ್ಲದ ಈ ಮೂರು ದಿನದ ಜೀವನದಲ್ಲಿ.

ಗುರುಗಳ ಬಗ್ಗೆ ಬರೆದೆನೊಂದು ಕವನ ಗುರುವೇ ದೇವರೆಂದು ಬರೆದೆನೊಂದು ಕವನ.
ಗುರುಗಳೇ ಮಕ್ಕಳ ಭವಿಷ್ಯದಲ್ಲಿ ಆಟ ಆಡಿದಾಗ ನನ್ನ ಕವನ ಅರ್ಥಹೀನವಾಯಿತು. ಏನೆಂದು ಬರೆಯಲಿ ಕವನ ಯಾರ ಬಗ್ಗೆ ಬರೆಯಲಿ ಕವನ ?ಏನೂ ಇಲ್ಲದ ಈ ಮೂರು ದಿನದ ಜೀವನದಲ್ಲಿ.

ಅಣ್ಣ ತಮ್ಮಂದಿರ ಬಗ್ಗೆ ಬರೆದೇ ನೊಂದು ಕವನ, ರಾಮ ಲಕ್ಷ್ಮಣ ರಂತೆ ಇರುವರೆಂದು ಬರೆದೆನೊಂದು ಕವನ, ಅಣ್ಣ ತಮ್ಮಂದಿರು ಆಸ್ತಿಯ ವಿಷಯಕ್ಕೆ ಬಡಿದಾಡಿದಾಗ ನನ್ನ ಕವನ ಅರ್ಥಹೀನ ವಾಯಿತು.
ಏನೆಂದು ಬರೆಯಲಿ ಕವನ ಯಾರ ಬಗ್ಗೆ ಬರೆಯಲಿ ಕವನ ? ಏನೂ ಇಲ್ಲದ ಈ ಮೂರು ದಿನದ ಜೀವನದಲ್ಲಿ.

ನನ್ನ ಹಿತೈಷಿಗಳೆಂದು ಬರಿದೇನೊಂದುಕವನ, ಯಾವಾಗಲೂ ನನ್ನ ಜೊತೆಗಿರುವರೆಂದು ಬರೆದೆ ನೊಂದು ಕವನ ನನ್ನ ಕವನ ಮುಗಿಯುವಷ್ಟರಲ್ಲಿ ಅವರು ನನ್ನ ಹಿತ ಶತ್ರುಗಳೆಂದು ತಿಳಿಯಿತು, ನನ್ನ ಕವನ ಅರ್ಥಹೀನ ವಾಯಿತು.
ಏನೆಂದು ಬರೆಯಲಿ ಕವನ ಯಾರ ಬಗ್ಗೆ ಬರೆಯಲ್ಲಿ ಕವನ ?
ಏನೂ ಇಲ್ಲದ ಈ ಮೂರು ದಿನದ ಜೀವನದಲ್ಲಿ.

ಪ್ರಾಣಿ ಪಕ್ಷಿಗಳ ಬಗ್ಗೆ ಬರೆದೆನೊಂದು ಕವನ, ಜಗತ್ತಿನಲ್ಲಿ ಇವುಗಳೇ ಮುಗ್ಧವೆಂದು ಬರೆದೆನೊಂದು ಕವನ, ಆದರೆ ಕೆಲವು ಕ್ರೂರ ಪ್ರಾಣಿ ಪಕ್ಷಿಗಳನ್ನು ನೋಡಿದೆ, ನನ್ನ ಕವನ ಅರ್ಥಹೀನಾವಾಯಿತು, ಏನೆಂದು ಬರೆಯಲಿ ಕವನ ಯಾರ ಬಗ್ಗೆ ಬರೆಯಲಿ ಕವನ ?
ಏನೂ ಇಲ್ಲದ ಈ ಮೂರು ದಿನದ ಜೀವನದಲ್ಲಿ.

ಪ್ರಕೃತಿಯೇ ತಾಯಿಯೆಂದು ಬರೆದೆನೊಂದು ಕವನ ಎಲ್ಲರನ್ನು ಎಲ್ಲವನ್ನು ಸಲಹುತ್ತಿರುವವಳೆಂದು ಬರೆದೆನೊಂದು ಕವನ ಪ್ರಕೃತಿಯ ವಿಕೋಪ ವನ್ನೊಮ್ಮೆ ಕಂಡೆ ನನ್ನ ಕವನ ಅರ್ಥ ಹೀನವಾಯಿತು. ಏನೆಂದು ಬರೆಯಲಿ ಕವನ ಯಾರ ಬಗ್ಗೆ ಬರೆಯಲಿ ಕವನ ?
ಏನೂ ಇಲ್ಲದ ಈ ಮೂರು ದಿನದ ಜೀವನದಲ್ಲಿ.

ಗಂಡ ಹೆಂಡಿರ ಪ್ರೀತಿ ಪ್ರೇಮದ ಬಗ್ಗೆ ಬರೆದನೆಂದು ಕವನ ಸಂಸಾರದ ರಥದಲ್ಲಿ ಯಾವಾಗಲೂ ಜೊತೆಯಾಗಿರುವರೆಂದು ಬರೆದನೆಂದು ಕವನ.
ಹೆಂಡತಿ ಗಂಡನನ್ನು ಕೊಂದ ವಿಷಯ ತಿಳಿದು. ನನ್ನ ಕವನ ಅರ್ಥಹೀನಾವಾಯಿತು, ಏನೆಂದು ಬರೆಯಲಿ ಕವನ ಯಾರ ಬಗ್ಗೆ ಬರೆಯಲಿ ಕವನ ?
ಏನೂ ಇಲ್ಲದ ಈ ಮೂರು ದಿನದ ಜೀವನದಲ್ಲಿ.

ಅಪ್ಪ ಅಮ್ಮನ ಬಗ್ಗೆ ಬರೆಯದೆನೊಂದು ಕವನ ಮಕ್ಕಳ ಸೃಷ್ಟಿಯ ಎರಡು ಅದ್ಭುತ ಮುಖಗಳೆಂದು ಬರೆದೆನೊಂದು ಕವನ
ಮಕ್ಕಳು ದೊಡ್ಡವರಾದರು ತಮ್ಮ ಸೃಷ್ಟಿಯ ಎರಡು ಅದ್ಭುತಗಳನ್ನು ಮರೆತುಬಿಟ್ಟರು. ನನ್ನ ಕವನ ಅರ್ಥಹೀನಾವಾಯಿತು, ಏನೆಂದು ಬರೆಯಲಿ ಕವನ ಯಾರ ಬಗ್ಗೆ ಬರೆಯಲಿ ಕವನ ?
ಏನೂ ಇಲ್ಲದ ಈ ಮೂರು ದಿನದ ಜೀವನದಲ್ಲಿ.

 

ಗಿರೀಶ್ ತುಳಸೀವನ 

 

More from the blog

ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ ವಾರ್ಷಿಕ ಜಾತ್ರೆ..ಮಹಾರಥೋತ್ಸವ ಕಣ್ಣುಂಬಿಕೊಂಡ ಸಾವಿರಾರು ಭಕ್ತರು

ಬಂಟ್ವಾಳ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರೆಯಲ್ಲಿ ಎ. ೧೧ರಂದು ಸಂಜೆ ರಥೋತ್ಸವ ನಡೆಯಿತು. ಜಾತ್ರೆಯಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು. ಮಹಾಪೂಜೆಯ ಬಳಿಕ ದೇವರು ರಥಾರೋಹಣಗೊಂಡು ಸಾಂಕೇತಿಕವಾಗಿ ರಥವನ್ನು ಎಳೆಯಲಾಯಿತು. ಮಧ್ಯಾಹ್ನ ರಥಕ್ಕೆ...

ಬಂಟ್ವಾಳದ ಉಳಿ ಗ್ರಾಮದಲ್ಲಿ ಮತದಾರರ ಮನೆಗೆ ಭೇಟಿ ನೀಡಿ ಮತಯಾಚನೆ ನಡೆಸಿದ ಶಾಸಕ ರಾಜೇಶ್ ನಾಯ್ಕ್

ಲೋಕ ಸಭಾ ಚುನಾವಣೆಯ ಹಿನ್ನಲೆಯಲ್ಲಿ ಕ್ಯಾ.ಬ್ರಿಜೇಶ್ ಚೌಟ ಅವರ ಗೆಲುವಿಗಾಗಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಗ್ರಾಮ,ಮನೆ,ಮನ ಅಭಿಯಾನದ ಅಂಗವಾಗಿ ಬಂಟ್ವಾಳದ ಉಳಿ ಗ್ರಾಮದಲ್ಲಿ ಮತದಾರರ ಮನೆಗೆ ಬೇಟಿ ನೀಡಿ...

ಮತ್ತೆ ಏರಿಕೆ ಕಂಡ ಚಿನ್ನದ ಬೆಲೆ : ಇವತ್ತಿನ ‌ಬೆಲೆ ಎಷ್ಟು ಗೊತ್ತಾ…?

ಯುಗಾದಿ ಹಬ್ಬ. ಇದು ಸಂಬಂಧ ಬೆಸೆಯುವ ಹಬ್ಬ. ಅಂದಹಾಗೆಯೇ ದೇಶದಾದ್ಯಂತ ಜನರು ಇಂದು ಸಂಭ್ರಮದಲ್ಲಿದ್ದಾರೆ. ಆದರೆ ಇದರ ನಡುವೆ ಚಿನ್ನದ ಬೆಲೆ ಏರಿಕೆಯ ಬಿಸಿಯಿಂದ ಕೊಂಚ ಬೇಸರವು ಅವರಲ್ಲಿ ಆವರಿಸಿದೆ. ಕಳೆದ ಎರಡು ದಿನಗಳ...

300 ರೂ. ಗಡಿಯತ್ತ ಹಸಿ ಕೊಕ್ಕೊ… 900 ರೂ. ಗಡಿಯತ್ತ ಒಣ ಕೊಕ್ಕೊ

ಪುತ್ತೂರು: ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಹಸಿ ಕೊಕ್ಕೊ, ಒಣ ಕೊಕ್ಕೊ ಧಾರಣೆ ಮತ್ತಷ್ಟು ಜಿಗಿದಿದ್ದು, ಹೊರ ಮಾರುಕಟ್ಟೆಯಲ್ಲಿಯೂ ಅತ್ಯಧಿಕ ದರ ದಾಖಲಾಗಿದೆ. ಒಣ ಕೊಕ್ಕೊ 900 ರೂ. ಗಡಿಯತ್ತ, ಹಸಿ ಕೊಕ್ಕೊ 300 ರೂ....