ನೀನ್ಯಾರು ನಾನ್ಯಾರು ಎಂದು ತಿಳಿಯದ ಆ ಸಂದರ್ಭ ನಿನ್ನ ಗರ್ಭದೊಳಗೆ ನಾ ಭದ್ರವಾಗಿದ್ದ ಆ ಒಂಬತ್ತು ತಿಂಗಳು,
ಹೇಗೆ ಮರೆಯಲಿ ತಾಯಿ ನಿನ್ನ ಆ ತ್ಯಾಗವ, ಅಮ್ಮ…. ನನ್ನಲ್ಲಿರುವುದು ನಿನ್ನ ಜೀವ, ನಿನ್ನ ದೇಹ, ನಿನ್ನ ರಕ್ತ, ನಿನ್ನ ಮಾಂಸ, ನಿನ್ನ ಕರುಣೆ, ನಿನ್ನ ತ್ಯಾಗ, ಹೇಗೆ ಮರೆಯಲಿ ತಾಯಿ ನಿನ್ನ ಆ ತ್ಯಾಗವ,



ನಾನು ನಿನ್ನ ಗರ್ಭದಿಂದ ಹೊರ ಬರುವ ಆ ಮಾಸ, ನಿನಗೆ ಒದ್ದು ಹಿಂಸಿಸಿದ ಆ ಮಾಸ, ಆದರೂ ನನ್ನನ್ನು ಜೋಪಾನವಾಗಿ ಸಲಹಿದ ನಿನ್ನ ಆ ಭ್ರೂಣ ಹೇಗೆ ಮರೆಯಲಿ ತಾಯಿ ನಿನ್ನ ಆ ತ್ಯಾಗವ,
ನೀನೇ ಮನುಷ್ಯ ಸೃಷ್ಟಿಯ ಮೂಲ, ನಿನ್ನ ಬಿಟ್ಟು ಈ ಜಗವೇಲ ಶೂನ್ಯ, ನೀನಿಲ್ಲದ ಜಗವ ಊಹಿಸುವುದು ಹೇಗೆ ತಾಯಿ, ಈ ಜಗತ್ತೇ ನಿಂತಿರುವುದು ನಿನ್ನಿಂದಲೇ ತಾಯಿ, ಹೇಗೆ ಮರೆಯಲಿ ತಾಯಿ ನಿನ್ನ ಆ ತ್ಯಾಗವ,
ಆ ದೇವರಿಗಿಂತಲೂ ಸಾವಿರ ಪಟ್ಟು ಶ್ರೇಷ್ಠಳು ನೀನು, ಏಕೆಂದರೆ ದೇವರು ಬೇಡಿದರೆ ಮಾತ್ರ ಕೊಡವನ್ನು ನೀನು ನಾ ಬೇಡದೆ ಕೊಟ್ಟೆ ನನ್ನ ಈ ಜನ್ಮವ, ಹೇಗೆ ಮರೆಯಲಿ ತಾಯಿ ನಿನ್ನ ಆ ತ್ಯಾಗವ,
ಮುಕ್ಕೋಟಿ ದೇವತೆಗಳು ನಿಮ್ಮನ್ನು ನೋಡಿ ಅಸೂಯೆ ಪಡುವರು, ಎಕೆಂದರೆ ಅದೆಷ್ಟೋ ದೇವರಿಗೆ ನಿನ್ನ ಗರ್ಭದಲ್ಲಿಯೇ ಜಾಗ ಕೊಟ್ಟಿರುವೆ ಎಂದು, ಹೇಗೆ ಮರೆಯಲಿ ತಾಯಿ ನಿನ್ನ ಆ ತ್ಯಾಗವ,
ನಿನ್ನ ಹೊಟ್ಟೆಯಲ್ಲಿ ಇರುವಾಗ ನನ್ನ ಹೊಕ್ಕುಳ ಬಳ್ಳಿಯಿಂದ ನಿನ್ನ ರಕ್ತವನ್ನೇ ಕುಡಿದ ಪಾಪಿ ನಾನು, ಆದರೂ ಜನನದ ನಂತರ ಎರಡು ಮೂರು ವರ್ಷಗಳ ಕಾಲ ನಿನ್ನ ಎದೆಯ ಅಮೃತವನ್ನು ಉಣಿಸಿದ ತಾಯಿ ನೀನು, ಹೇಗೆ ಮರೆಯಲಿ ತಾಯಿ ನಿನ್ನ ಆ ತ್ಯಾಗವ,
✍ಗಿರೀಶ್ ತುಳಸೀವನ