ಶ್ರದ್ಧಾ ಭಕ್ತಿ ಹಾಗೂ ಸಾಮರಸ್ಯದಕ್ಷೇತ್ರವಾದ ಅರ್ಕುಳ ಶ್ರೀ ಉಳ್ಳಾಕ್ಲು ಮಗೃಂತಾಯಿ ಧರ್ಮದೇವತೆಗಳ ಸಾನಿಧ್ಯ ಹಾಗೂ ಶ್ರೀ ಕ್ಷೇತ್ರ ಪೊಳಲಿಯ ಶ್ರೀ ರಾಜರಾಜೇಶ್ವರಿಅಮ್ಮನವರಿಗೂ ಅವಿನಾಭಾವ ಸಂಬಂಧ.ಪೊಳಲಿ ಶ್ರೀ ರಾಜರಾಜೇಶ್ವರಿದೇವಸ್ಥಾನದ ಪುನರ್ನಿರ್ಮಾಣದ ಶುಭವಸರದಲ್ಲಿ ಶ್ರೀ ಉಳ್ಳಾಕ್ಲು ಮಗೃಂತಾಯಿ ಧರ್ಮದೇವತೆಗಳ ಮಾಡ ಹಾಗೂ ಸಾಣ ಪುನರ್ನವೀಕರಣಗೊಂಡು, ಬ್ರಹ್ಮಕಲಶೋತ್ಸವದ ಸಮಯ ಅರ್ಕುಳ ಬೀಡಿನಿಂದ ಶ್ರೀ ದೈವಗಳ ಭಂಡಾರವು ಶ್ರೀ ಕ್ಷೇತ್ರ ಪೊಳಲಿಗೆ ಆಗಮಿಸಿ ನೇಮ ಸೇವೆಯು ಸಂಪನ್ನಗೊಂಡಿದೆ.
ವರ್ಷಾವಧಿಜಾತ್ರೆಯ ಪುಣ್ಯವಸರದಲ್ಲ್ಲಿ ಪೂರ್ವಕಟ್ಟುಕಟ್ಟಳೆಗೆ ಅನುಸಾರವಾಗಿ ಅರ್ಕುಳ ಬೀಡಿನಿಂದ ಶ್ರೀ ದೈವಗಳ ಭಂಡಾರವು ಶ್ರೀ ಕ್ಷೇತ್ರ ಪೊಳಲಿಗೆ ಎಪ್ರಿಲ್ 12 ರ ಶುಕ್ರವಾರದ ದ್ವಜಾವರೋಹಣದ ದಿನ ಆಗಮಿಸಿ ರಾತ್ರಿ ನೇಮ ಸೇವೆಯು ಸಂಪನ್ನಗೊಳ್ಳಲಿದೆ.
ಧಾರ್ಮಿಕತೆಯ ಸೊಗಡಿನೊಂದಿಗೆ ಜನಮಾನಸದಲ್ಲಿ ಶ್ರದ್ಧಾಭಕ್ತಿಯ ದಿವ್ಯ ಸಂಚಲನವನ್ನು ಮೂಡಿಸಲಿರುವ ಹಾಗೂ ತುಳುನಾಡಿನಲ್ಲಿಯೇ ಅತೀ ದೀರ್ಘವಾದ ಪರಂಪರಾನುಗತ ಶೋಭಾಯಾತ್ರೆಯು ಎಪ್ರಿಲ್ 12 ರ ಶುಕ್ರವಾರದಂದು ನಡೆಯಲಿದೆ.
ಎಪ್ರಿಲ್ 12 ನೇ ಶುಕ್ರವಾರ ಬೆಳಿಗ್ಗೆ 6.30ಕ್ಕೆ ಅರ್ಕುಳ ಬೀಡಿನಿಂದ ಹೊರಟು ಮೇರಮಜಲು (7.00), ಕುಟ್ಟಿಕಳ (7.45) ತೇವುಕಾಡು (8.00) ಮಹಮ್ಮಾಯಿಕಟ್ಟೆ- ಅಬ್ಬೆಟ್ಟುಗೋಳಿ (8.30), ಅಮ್ಮುಂಜೆ (9.30), ಬಡಕಬೈಲು (10.00) ಪುಂಚಮೆ(10.30) ಮಾರ್ಗವಾಗಿ ಶೋಭಾಯಾತ್ರೆಯು 11.00 ಕ್ಕೆ ಶ್ರೀ ಕ್ಷೇತ್ರ ಪೊಳಲಿ ತಲುಪಲಿದೆ. ಅಂದು ರಾತ್ರಿ ಅರ್ಕುಳ ಶ್ರೀ ಉಳ್ಳಾಕ್ಲು ಮಗೃಂತಾಯಿ ಧರ್ಮದೇವತೆಗಳಿಗೆ ನೇಮ ಸೇವೆಯು ಸಂಪನ್ನಗೊಳ್ಳಲಿದೆ.
ದಿನಾಂಕ ೧೩-೦೩-೨೦೧೯ ನೇ ಶನಿವಾರ ಬೆಳಿಗ್ಗೆ ೬.೦೦ ಗಂಟೆಗೆ ಭಂಡಾರವು ಪೊಳಲಿಯಿಂದ ಹೊರಟು ॒ಬಡಕಬೈಲು(೬.೩೦), ಧನುಪೂಜೆ(೭.೦೦), ॒ಕಲ್ಪನೆ(೭.೩೦), ಬೆಂಜನಪದವು(೭.೪೫), ಕೊಡ್ಮಾಣ್(೮.೦೦), ನೆತ್ರೆಕೆರೆ (೮.೧೫) ಕಡೆಗೋಳಿ (೮.೩೦) ಫರಂಗಿಪೇಟೆ ಮಾರ್ಗವಾಗಿ ೯.೦೦ ಗಂಟೆಗೆ ಅರ್ಕುಳ ಬೀಡುತಲುಪಲಿದೆ.
ಅರ್ಕುಳ ಬೀಡಿನಿಂದ ಶ್ರೀ ಕ್ಷೇತ್ರ ಪೊಳಲಿಗೆ ಸಂಪನ್ನಗೊಳ್ಳಲಿರುವ ಶ್ರೀ ಉಳ್ಳಾಕ್ಲು ಮಗೃಂತಾಯಿ ಧರ್ಮದೇವತೆಗಳ ಭಂಡಾರದ ಮೆರವಣಿಗೆಯಲ್ಲಿ ಲೌಕಿಕ ಹಾಗೂ ಪಾರಮಾರ್ಥಿವಾಗಿ ಶುಭಪ್ರದವಾದ ಪಾದಯಾತ್ರಿಗಳಾಗಿ ಭಕ್ತಾದಿಗಳು ಭಾಗವಹಿಸಲಿದ್ದಾರೆ ಎಂದುಅರ್ಕುಳ ಬೀಡು ವಜ್ರನಾಭ ಶೆಟ್ಟಿ ತಿಳಿಸಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here