Monday, April 15, 2024

ಅಳಿಕೆ: ಸಾಧನೆ ಮೆರೆದ ವಿದ್ಯಾರ್ಥಿಗಳು: ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇ.೧೦೦ ಫಲಿತಾಂಶ: ವಾಣಿಜ್ಯ ವಿಭಾಗದಲ್ಲಿ ಶ್ರೀಕೃಷ್ಣ ಶರ್ಮ ರಾಜ್ಯಕ್ಕೆ ಪ್ರಥಮ

 

ವಿಟ್ಲ: ಶ್ರೀ ಸತ್ಯಸಾಯಿ ಲೋಕಸೇವಾ ಪದವಿ ಪೂರ್ವ ಕಾಲೇಜು, ಅಳಿಕೆ ಇದರ ದ್ವಿತೀಯ ಪಿ.ಯು.ಸಿ. ಫಲಿಂತಾಶ ಪ್ರಕಟಗೊಂಡಿದ್ದು, ವಿಜ್ಞಾನ ವಿಭಾಗದಲ್ಲಿ ಹಾಜರಾದ ೧೨೨ ವಿದ್ಯಾರ್ಥಿಗಳಲ್ಲಿ ೭೩ ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ ಮತ್ತು ೪೯ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಕಾಲೇಜಿಗೆ ಶೇ.೧೦೦ ಫಲಿತಾಂಶ ದಾಖಲಿಸಿರುತ್ತಾರೆ. ಕಲಾ ಮತ್ತು ವಾಣಿಜ್ಯ ವಿಭಾಗಗಳಲ್ಲಿ ೯೫ ವಿದ್ಯಾರ್ಥಿಗಳಲ್ಲಿ ೩೭ ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, ೫೦ ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, ೪ ವಿದ್ಯಾಥಿಗಳು ದ್ವಿತೀಯ ಮತ್ತು ೨ ವಿದ್ಯಾರ್ಥಿಗಳು ಸಾಮಾನ್ಯ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ.

ವಿಜ್ಞಾನ ವಿಭಾಗ

ಅಮರೇಶ್ ಟಿ.ಎನ್. ೫೭೯ ಪ್ರಥಮ
ಅಮೋಘ ಅವಿನ್ ೫೭೮ ದ್ವಿತೀಯ
ಚಂದನ್ ಆರ್ ಕಾಕೋಲ್ ೫೭೨ ತೃತೀಯ

ವಾಣಿಜ್ಯ ವಿಭಾಗ

ಶ್ರೀಕೃಷ್ಣ ಶರ್ಮ ಕೆ ೫೯೬ ಪ್ರಥಮ
ಬಸವರಾಜ್ ವೈಜಿ ೫೯೨ ದ್ವಿತೀಯ
ಹರ್ಷನ್ ಬಿ.ಪಿ. ೫೯೦ ತೃತೀಯ

ಕಲಾ ವಿಭಾಗ

ಉಮರ್ ಅಲ್ ಫಾರೂಕ್ ಐದರ್ ೫೦೯ ಪ್ರಥಮ
ಶಶಾಂಕ್ ವೈ ಪಾಟೀಲ್ ೫೦೦ ದ್ವಿತೀಯ
ಕೀರ್ತನ್ ಎಸ್.ವಿ. ೪೮೩ ತೃತೀಯ

ಸಂಸ್ಕೃತದಲ್ಲಿ ಶೇ.೧೦೦ಪಡೆದ ೨೧ ವಿದ್ಯಾರ್ಥಿಗಳು :
ಅಮರೇಶ್ ಟಿ.ಎನ್., ಶರಣ ಬಸವರಾಜ್ ವಿ.ಡಿ., ಮನೋಜ್ ಎಸ್.ಜಿ., ಹರ್ಷವರ್ಧನ ಡಿ.ಎನ್., ಅಭಿಷೇಕ್ ಸಿ.ಎ., ಕುಶಾಲ್ ಎ.ಎಸ್., ಶಮಂತ್‌ಕೃಷ್ಣ ಯಂ., ಲಿಖಿತ್ ರೈ, ಗಣೇಶ ಪಿ., ಪ್ರಣೀತ್, ಮೋಹಿತ್‌ಕೃಷ್ಣ ಕಾಮತ್, ಸಂಪ್ರೀತ್ ಡಿ.ಡಿ., ಶ್ರೀಹರಿ ಕೆ.ಎಸ್., ಮನೋಜ್ ವಿ. ಶೇಟ್, ಹರಿನಾಥ್ ಹೆಚ್ ಬಾಪಟ್, ಶ್ರೀಕೃಷ್ಣ ಶಮ್, ಹರ್ಷನ್ ಬಿ.ಪಿ., ಆಕಾಶ್, ಸಂಜಯ್ ಕೃಷ್ಣ, ನಾಗರಕ್ಷಿತ್, ಆದಿತ್ಯ ಯು. ಮಡಿವಾಳ್.

ಗಣಿತಶಾಸ್ತ್ರದಲ್ಲಿ ೧೦೦ರಲ್ಲಿ ೧೦೦ ಅಂಕ ಪಡೆದ ೧೦ ವಿದ್ಯಾರ್ಥಿಗಳು :
ಅಮರೇಶ್ ಟಿ.ಎನ್., ಅಮೋಘ್ ಅವಿನ್, ಚಂದನ್ ಆರ್.ಕೆ., ಬಸವಪ್ರಭು ಹೆಚ್., ಸಮೀರ್ ಎ. ಅಕ್ಕಿ, ಸಂಗಮೇಶ ಯಂ. ಅಕ್ಕಿ , ಶ್ರೀನಂದ್ ಹೆಗಡೆ, ದಿವಾಕರ್ ಹೆಚ್.ಕೆ., ಸ್ನೇಹಿತ್ ಯಂ., ಚರಣ್ ಯಂ.ಯಸ್.

ಲೆಕ್ಕಶಾಸ್ತ್ರದಲ್ಲಿ ೧೦೦ರಲ್ಲಿ ೧೦೦ ಅಂಕ ಪಡೆದ ೧೦ ವಿದ್ಯಾರ್ಥಿಗಳು :
ಶ್ರೀಕೃಷ್ಣ ಶರ್ಮ ಕೆ., ಹರ್ಷನ್ ಬಿ.ಪಿ., ಸುಮುಖ್ ಬಿ.ಬಿ., ಆಕಾಶ್, ಅನೀಷ್ ಅಯ್ಯಪ್ಪ ಎನ್.ವಿ., ರೋಹಿತ್ ಆರ್., ರಕ್ಷಿತ್ ಯಂ. ಶೇಟ್, ನಾಣಯ್ಯ ಪಿ.ಎ., ಹಿತೇಶ್ ಕುಮಾರ್, ಚೇತನ್ ಎನ್.

ಸಂಖ್ಯಾಶಾಸ್ತ್ರದಲ್ಲಿ ೧೦೦ರಲ್ಲಿ ೧೦೦ ಅಂಕ ಪಡೆದ ೮ ವಿದ್ಯಾರ್ಥಿಗಳು :
ಶ್ರೀಕೃಷ್ಣ ಶರ್ಮ ಕೆ., ಬಸವರಾಜ್ ವೈ..ಜಿ., ಹರ್ಷನ್ ಬಿ.ಪಿ., ಸುಮುಖ್ ಬಿ.ಬಿ., ಚಿನ್ಮಯ್ ಬಿ., ಆಕಾಶ್, ಸಂಜಯ್ ಕೃಷ್ಣ ಬಿ., ರವಿತೇಜ ಪಿ.ಯು.

ಬೇಸಿಕ್ ಮ್ಯಾಥ್ಸ್‌ನಲ್ಲಿ ೧೦೦ರಲ್ಲಿ ೧೦೦ ಅಂಕ ಪಡೆದ ೬ ವಿದ್ಯಾರ್ಥಿಗಳು:
ಶ್ರೀಕೃಷ್ಣ ಶರ್ಮ ಕೆ., ಬಸವರಾಜ್ ವೈ.ಜಿ., ಚಿನ್ಮಯ್ ಬಿ., ಅನೀಶ್ ಅಯ್ಯಪ್ಪ ಎನ್.ವಿ., ಸ್ಕಂದ ಆರ್. ಭಟ್, ನಾನಯ್ಯ ಪಿ.ಎ.

ಭೌತಶಾಸ್ತ್ರದಲ್ಲಿ ೧೦೦ರಲ್ಲಿ ೧೦೦ ಅಂಕ ಪಡೆದ ೩ ವಿದ್ಯಾರ್ಥಿಗಳು :
ಅಮೋಘ ಅವಿನ್, ಶುಭಮ್, ದಿವಾಕರ್ ಹೆಚ್.ಕೆ.

ವ್ಯಾವಹಾರಿಕ ಅಧ್ಯಯನದಲ್ಲಿ ೧೦೦ರಲ್ಲಿ ೧೦೦ ಅಂಕ ಪಡೆದ ೨ ವಿದ್ಯಾರ್ಥಿಗಳು :
ಶ್ರೀಕೃಷ್ಣ ಶರ್ಮ ಕೆ., ಬಸವರಾಜ್ ವೈ.ಜಿ.
,,,,,

’ಒತ್ತಡವಿಲ್ಲದೇ ಕಲಿತೆ’- ಶ್ರೀಕೃಷ್ಣ ಶರ್ಮ: ಪಿಯುಸಿಯ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿ ಸಾಧನೆ ಮೆರೆದ ಶ್ರೀಕೃಷ್ಣ ಶರ್ಮ ಕೆ. ಕಾಸರಗೋಡು ಜಿಲ್ಲೆಯ ಬದಿಯಡ್ಕ ಸಮೀಪದ ಪೆರಡಾಲದವರು. ಎಸ್ಸೆಸ್ಸೆಲ್ಸಿ ತನಕ ಬದಿಯಡ್ಕದ ಶ್ರೀ ಭಾರತಿ ವಿದ್ಯಾಪೀಠದಲ್ಲಿ ಕಲಿತ ವಿದ್ಯಾರ್ಥಿ. ಪಿಯುಸಿಗೆ ಅಳಿಕೆ ಶ್ರೀಸತ್ಯಸಾಯಿ ಲೋಕಸೇವಾ ವಿದ್ಯಾಸಂಸ್ಥೆಗೆ ಸೇರಿದ್ದು, ಕಾಲೇಜಿಗೆ ಪ್ರತೀದಿನ ಬಸ್ಸಲ್ಲಿ ಬಂದು ಹೋಗುತ್ತಿದ್ದರು. ಪ್ರಗತಿಪರ ಅಡಕೆ ಕೃಷಿಕ ಸುಬ್ರಹ್ಮಣ್ಯ ಭಟ್ ಮತ್ತು ಶಾರದಾ ಅವರ ಪುತ್ರರಾದ ಶ್ರೀಕೃಷ್ಣ ದಿನದಲ್ಲಿ ಸಿಗುತ್ತಿದ್ದ ಬಿಡುವಿನಲ್ಲಿ ಮಾತ್ರ ಅಸಕ್ತಿಯಿಂದ ಅಭ್ಯಾಸದಲ್ಲಿ ತೊಡಗಿ ಕೊಳ್ಳುತ್ತಿದ್ದರು. ಶಿಕ್ಷಣ ಸಂಸ್ಥೆಯಲ್ಲಿ ಕೊಡುತ್ತಿದ್ದ ಬೋಧನೆಯ ಹೊರತಾಗಿ ಇನ್ಯಾವುದೇ ವಿಶೇಷ ಕೋಚಿಂಗ್‌ಗೆ ಸೇರದೇ ಟಾಪರ್ ಆಗಿ ಮೂಡಿ ಬಂದಿರುವುದು ವಿಶೇಷವೆನಿಸಿದೆ.

“ಶಿಕ್ಷಣ ಸಂಸ್ಥೆಯಲ್ಲಿ ನೀಡುತ್ತಿದ್ದ ಬೋಧನೆಗೆ ಪೂರಕವಾಗಿ ಪ್ರತೀದಿನ ರಾತ್ರಿ ೨ ತಾಸು ಮತ್ತು ಬೆಳಗ್ಗೆ ೨ ತಾಸಿನಷ್ಟು ಹೊತ್ತು ಅಭ್ಯಾಸ ಮಾಡುತ್ತಿದ್ದೆ. ಕಾಲೇಜಿನ ಉಪನ್ಯಾಸಕರು, ಪ್ರಿನ್ಸಿಪಾಲ್, ಆಡಳಿತ ಮಂಡಳಿ ಎಲ್ಲರೂ ನನ್ನ ಕಲಿಕೆಯ ಬಗ್ಗೆ ನಿರಂತರ ಮೆಚ್ಚುಗೆ ವ್ಯಕ್ತಪಡಿಸುವುದರೊಂದಿಗೆ ಸಾಧನೆ ಮಾಡಿದರೆ ರಾಜ್ಯದಲ್ಲಿ ಟಾಪರ್ ಆಗಿ ಬರಬಹುದೆಂದು ಧೈರ್‍ಯದ ಮಾತುಗಳನ್ನು ಹೇಳುತ್ತಿದ್ದರು. ಅದರಂತೆ ಮುನ್ನಡೆದೆ. ಈ ಸಾಧನೆಯಿಂದ ಮನೆಯಲ್ಲಿ ಸಂಭ್ರಮದ ವಾತಾವರಣ ತುಂಬಿದೆ. ಮುಂದಕ್ಕೆ ಸಿ.ಎ ಮಾಡುವ ಆಸೆ ಇಟ್ಟುಕೊಂಡಿದ್ದೇನೆ. ನನ್ನ ಸಾಧನೆಗೆ ನೆರವಾದ ತಂದೆತಾಯಿಗುರುಹಿರಿಯರಿಗೆ ಚಿರಋಣಿಯಾಗಿದ್ದೇನೆ ಎಂದು ಶ್ರೀಕೃಷ್ಣಶರ್ಮ ನಮ್ಮ ಬಂಟ್ವಾಳದ ಜೊತೆ ಸಂತಸ ಹಂಚಿಕೊಂಡರು.

 

ಪಿಯುಸಿ ಪರೀಕ್ಷೆ: ಅಡ್ಯನಡ್ಕ ಕಾಲೇಜಿಗೆ ೯೫ ಶೇ. ಫಲಿತಾಂಶ:
ವಿಟ್ಲ: ಅಡ್ಯನಡ್ಕ ಜನತಾ ಪದವಿಪೂರ್ವ ಕಾಲೇಜು ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ೯೫ ಶೇ. ಫಲಿತಾಂಶ ಪಡೆದಿದೆ. ಕಾಲೇಜಿನ ಒಟ್ಟು ೯೯ ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಇವರಲ್ಲಿ ೯೪ ಮಂದಿ ಉತ್ತೀರ್ಣರಾಗಿದ್ದಾರೆ. ಒಟ್ಟು ೨೨ ಮಂದಿ ವಿಶಿಷ್ಟ ಶ್ರೇಣಿಯಲ್ಲಿ ಪಾಸಾಗಿದ್ದು, ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ವೇದದೀಕ್ಷಾ ಅತೀ ಹೆಚ್ಚು ಅಂದರೆ ೫೬೮ ಅಂಕ ಪಡೆದಿದ್ದಾರೆ. ಈ ಸಂದರ್ಭದಲ್ಲಿ ಅಡ್ಯನಡ್ಕ ಎಜುಕೇಶನಲ್ ಸೊಸೈಟಿಯ ಅಧ್ಯಕ್ಷರು, ಸಂಚಾಲಕರು, ಆಡಳಿತ ಮಂಡಳಿ ಹಾಗೂ ಬೋಧಕ ವರ್ಗದವರು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

More from the blog

ಹಿಂದೂ‌ ಸಂಘಟನೆಯ ಕಾರ್ಯಕರ್ತನಿಗೆ ಚೂರಿ ಇರಿತ

ಬಂಟ್ವಾಳ : ಹಿಂದೂ ಸಂಘಟನೆಯ ಮುಖಂಡನೋರ್ವನಿಗೆ ಸ್ನೇಹಿತ ಚೂರಿಯಿಂದ ಇರಿದ ಘಟನೆ ಬಂಟ್ವಾಳದಲ್ಲಿ ನಡೆದಿದ್ದು, ಗಂಭೀರವಾಗಿ ಗಾಯಗೊಂಡಿರುವ ಈತನನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಹಿಂದೂಯುವಸೇನೆಯ ಮುಖಂಡನಾಗಿದ್ದು, ಉದ್ಯಮಿಯಾಗಿರುವ...

ನೆತ್ತರಕೆರೆ: ನವೋದಯ ಮಿತ್ರ ಕಲಾ ವೃಂದ (ರಿ.) 37ನೇ ವಾರ್ಷಿಕೋತ್ಸವ ಸಮಾರಂಭ

ಬಂಟ್ವಾಳ : ಈ ಮಣ್ಣಿನ ಸಂಸ್ಕೃತಿ, ಮೌಲ್ಯವನ್ನು ಮುಂದಿನ ತಲೆಮಾರಿಗೆ ತಲುಪಿಸುವ ಮಹತ್ತರವಾದ ಜವಾಬ್ದಾರಿ ಸಂಘ ಸಂಸ್ಥೆಗಳ ಮೇಲಿದೆ, ಈ ನಿಟ್ಟಿನಲ್ಲಿ ನವೋದಯ ಮಿತ್ರ ಕಲಾ ವೃಂದವು ಸಮಾಜಕ್ಕೆ ಪೂರಕವಾಗಿ ಸಮಾಜಮುಖಿ ಕಾರ್ಯಗಳನ್ನು...

ಲೋಕಸಭಾ ಚುನಾವಣೆ : ‘ಸಂಕಲ್ಪ ಪತ್ರ’ ಹೆಸರಿನಲ್ಲಿ ಬಿಜೆಪಿ ಪ್ರಣಾಳಿಕೆ ಬಿಡುಗಡೆ

ನವದೆಹಲಿ: ದೆಹಲಿಯಲ್ಲಿರುವ ಬಿಜೆಪಿಯ ಪ್ರಧಾನ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಲೋಕಸಭೆ ಚುನಾವಣೆಗಾಗಿ ಬಿಜೆಪಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ‘ಸಂಕಲ್ಪ ಪತ್ರ’ ಹೆಸರಲ್ಲಿ ದೇಶದ ಜನರಿಗೆ ಪ್ರಧಾನಿ ಮೋದಿ ಆಶ್ವಾಸನೆಗಳನ್ನು ನೀಡಿದ್ದು ಮೊದಲ ಸಂಕಲ್ಪ...

ಬಾಲಿವುಡ್ ನಟ ಸಲ್ಮಾನ್​ ಖಾನ್ ಮನೆ ಮುಂದೆ ಗುಂಡಿನ ದಾಳಿ

ಮುಂಬೈ: ಬಾಲಿವುಡ್ ಆ್ಯಕ್ಟರ್​ ಸಲ್ಮಾನ್ ಖಾನ್ ಅವರ ನಿವಾಸದ ಮೇಲೆ ಇಂದು ಬೆಳಗಿನ ಜಾವ 5 ಗಂಟೆಗೆ ದುಷ್ಕರ್ಮಿಗಳು ಬೈಕ್​ನಲ್ಲಿ ಬಂದು 5 ಸುತ್ತು ಫೈರಿಂಗ್ ಮಾಡಿ ಎಸ್ಕೇಪ್ ಆಗಿದ್ದಾರೆ. ಮುಂಬೈನ ಬಾಂದ್ರಾ ಪ್ರದೇಶದಲ್ಲಿರುವ...