Wednesday, October 18, 2023

“ಪುರಲ್ದಪ್ಪೆನ ಜಾತ್ರೆದ ಪೊರ್ಲು” ಅಲ್ಬಂ ಸಾಂಗ್ ಬಿಡುಗಡೆ

Must read

ಕೈಕಂಬ: ಶ್ರೀ ರಾಜರಾಜೇಶ್ವರೀ ದೇವಸ್ಥಾನದ ವಾರ್ಷಿಕ ಜಾತ್ರಾಮಹೋತ್ಸವದ ಕಡೆ ಚೆಂಡಿನಂದು ಬುಧವಾರ ಸುದ್ದಿ 9 ವತಿಯಿಂದ “ಪುರಲ್ದಪ್ಪೆನ ಜಾತ್ರೆದ ಪೊರ್ಲು” ಎಂಬ ಅಲ್ಬಂ ಸಾಂಗ್ ಬಿಡುಗಡೆ ಮಡಲಾಯಿತು. ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ ಸ್ವಾಮೀಜಿಯಾವರು ದೀಪ ಬೆಳಗಿಸಿದರು.ಶಾಸಕ ರಾಜೇಶ್ ನಾಯ್ಕ್ ಅಲ್ಬಂ ಸಾಂಗ್ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಸ್ವಾಮಿ ಪ್ರಣವಾನಂದ ಸರಸ್ವತಿ, ದೇವಳದ ಆಡಳಿತಮೊಕ್ತೇಸರ ಡಾ. ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು, ತಾರಾನಾಥ ಆಳ್ವ ಉಳಿಪಾಡಿಗುತ್ತು, ಕಾರ್ಯನಿರ್ವಹಣಾಧಿಕಾರಿಗಳಾದ ಪ್ರವೀಣ್, ಹರೀಶ್ಚಂದ್ರ ದೇವಳದ ಅರ್ಚಕ ರಾಮ್ ಭಟ್, ಪೊಳಲಿ ಗಿರೀಶ್ ತಂತ್ರಿ, ನಮ್ಮಕುಡ್ಲ ಸಂಸ್ಥೆಯ ವ್ಯವಸ್ಥಾಪಕ ಲೀಲಾಕ್ಷ ಕರ್ಕೇರಾ, ಟೈಮ್ಸ್ ಆಫ್ ಇಂಡೀಯಾ ಕದ್ರಿ ನವನೀತ್ ಶೆಟ್ಟಿ, ವೆಂಕಟೇಶ್ ನಾವಡ, ಭಾಸ್ಕರ ಭಟ್, ಕೃಷ್ಣಾನಂದ ಹೊಳ್ಳ, ಇಂಜೀನೀಯರ್ ರಿತೇಶ್, ಅಮ್ಮುಂಜೆಗುತ್ತು ದೇವ್‌ದಾಸ್ ಹೆಗ್ಡೆ, ರಂಗನಾಥ ಶೆಟ್ಟಿ,ಸುಬ್ರಾಯ ಕಾರಂತ್, ಪ್ರಸಾಂತ್ ಗುರುಪುರ, ಭರತ್ ಗುರುಪುರ ಹಾಗೂ ಸುದ್ದಿ9 ಸಂಸ್ಥೆಯ ವಾಮನ ಪೂಜಾರಿ ಮತ್ತಿತರರು ಉಪಸ್ಥಿತರಿಂದ್ದರು. ದಿನೇಶ್ ರಾಯಿ ಕಾರ್ಯಕ್ರಮ ನಿರೂಪಿಸಿದರು.

 

More articles

Latest article