Wednesday, October 18, 2023

’ವ್ಯಕ್ತಿ ವಿಕಾಸದ ಮೂಲಕ ರಾಷ್ಟ್ರ ವಿಕಾಸ ವಿಕಾಸವಾಹಿನಿಯ ಧ್ಯೇಯ’- ಒಡಿಯೂರು ಶ್ರೀ

Must read

ವಿಟ್ಲ: ಸಂಘಟಿತ ಮನೋಭಾವ ನಮ್ಮೊಂದಿಗೆ ಇದ್ದರೆ ಸುಂದರ ಸಮಾಜ ನಿರ್‍ಮಾಣ ಸಾಧ್ಯ. ಬದುಕಿನ ಹರಿವಿಗೆ ಸಂಸ್ಕೃತಿ ಬೇಕು. ವಿಕಾಸವಾಹಿನಿ ಸ್ವ-ಸಹಾಯ ಸಂಘಗಳ ಮುಖೇನಾ ಬದುಕು ಶಿಕ್ಷಣ ನೀಡುವ ಪ್ರಯತ್ನ ನಡೆಯುತ್ತಿದೆ. ವ್ಯಕ್ತಿಯ ವ್ಯಕ್ತಿತ್ವ ವಿಕಾಸವಾದಲ್ಲಿ ರಾಷ್ಟ್ರ ವಿಕಾಸ ಸಾಧ್ಯ. ಇದುವೇ ವಿಕಾಸವಾಹಿನಿಯ ಧ್ಯೇಯ ಎಂದು ಒಡಿಯೂರುಶ್ರೀಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ನುಡಿದರು.
ಅವರು ಮಡಿಯಾಲ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಸಭಾಭವನದಲ್ಲಿ ನಡೆದ ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ ಅಳಿಕೆ ಗ್ರಾಮಸಮಿತಿ ಮತ್ತು ಘಟ ಸಮಿತಿಯ ವಾರ್ಷಿಕೋತ್ಸವ ಹಾಗೂ ಸಾಮೂಹಿಕ ಶ್ರೀ ಸತ್ಯದತ್ತವ್ರತ ಪೂಜೆಯ ಧರ್ಮ ಸಭೆಯಲ್ಲಿ ಆಶೀರ್ವಚನ ನೀಡಿದರು. ಕೊಡು ಕೊಳ್ಳುವಿಕೆ ಶುದ್ಧವಿದ್ದಲ್ಲಿ ನಿರ್ಮಲ ಸಮಾಜ ನಿರ್ಮಾಣ ಸಾಧ್ಯ. ವ್ಯಕ್ತಿಯ ವ್ಯಕ್ತಿತ್ವ ರೂಪಿಸುವಲ್ಲಿ, ಆತ್ಮವಿಶ್ವಾಸ ವೃದ್ಧಿಸುವಲ್ಲಿ ವಿಕಾಸವಾಹಿನಿ ಮೂಖೇನಾ ಪೂರಕ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ ಎಂದರು.
ಈ ಸಂದರ್ಭ ವೇದಿಕೆಯಲ್ಲಿ ಅಳಿಕೆ ಗ್ರಾಮಪಂಚಾಯಿತಿ ಅಧ್ಯಕ್ಷರಾದ ಪದ್ಮನಾಭ ಪೂಜಾರಿ ಸಣ್ಣಗುತ್ತು, ಮಂಗಳೂರು ಸಂತ ಅಲೋಶಿಯಸ್ ಕಾಲೇಜು ಕನ್ನಡ ವಿಭಾಗ ಮುಖ್ಯಸ್ಥರಾದ ಸರಸ್ವತಿ ಕುಮಾರಿ, ಅಳಿಕೆ ಸತ್ಯಸಾಯಿ ಲೋಕಸೇವಾ ಪದವಿ ಪೂರ್ವ ಕಾಲೇಜಿನ ನಿವೃತ್ತ ಉಪನ್ಯಾಸಕರಾದ ಶ್ರೀಧರ ಕೆ, ಉದ್ಯಮಿಗಳಾದ ಪ್ರಭಾಕರ ಶೆಟ್ಟಿ ದಂಬೆಕಾನ, ವಿಟ್ಲ ಯಕ್ಷಭಾರತ ಸೇವಾ ಪ್ರತಿಷ್ಠಾನ (ರಿ.)ನ ಅಧ್ಯಕ್ಷರಾದ ಸಂಜೀವ ಪೂಜಾರಿ ಉಪಸ್ಥಿತರಿದ್ದರು.
ಕಾರ್‍ಯಕ್ರಮದಲ್ಲಿ ಇರಾ ಘಟಸಮಿತಿಯ ಅಧ್ಯಕ್ಷರಾದ ಮಂಜುನಾಥ ಡಿ ಶೆಟ್ಟಿ, ವಿಟ್ಲಪಡ್ನೂರು ಘಟಸಮಿತಿಯ ಅಧ್ಯಕ್ಷರಾದ ಹೇಮಾನಂದ ಶೆಟ್ಟಿ, ವರ್ಕಾಡಿ ಘಟಸಮಿತಿಯ ಅಧ್ಯಕ್ಷರಾದ ಸದಾಶಿವ ಟೈಲರ್, ಅಳಿಕೆ ಗ್ರಾಮಸಮಿತಿ ಮಾಜಿ ಅಧ್ಯಕ್ಷರಾದ ಬಾಲಕೃಷ್ಣ ಪೂಜಾರಿ ಸಣ್ಣಗುತ್ತು, ಅಳಿಕೆ ಗ್ರಾಮಸಮಿತಿ ಮತ್ತು ಘಟಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ಅಮಿತ ಮಿತ್ತಳಿಕೆ ಆಶಯ ಗೀತೆ ಹಾಡಿದರು. ಅಳಿಕೆ ಗ್ರಾಮಸಮಿತಿ ಅಧ್ಯಕ್ಷ ಕಾನ ಈಶ್ವರ ಭಟ್ ಸ್ವಾಗತಿಸಿದರು. ಕಾರ್‍ಯದರ್ಶಿ ಮಹೇಶ್ ದೂಜಮೂಲೆ ವರದಿ ಮಂಡಿಸಿದರು. ಘಟ ಸಮಿತಿ ಅಧ್ಯಕ್ಷರಾದ ಸದಾಶಿವ ಶೆಟ್ಟಿ ವಂದಿಸಿದರು. ಬಂಟ್ವಾಳ ತಾಲೂಕಿನ ವಿಸ್ತರಣಾಧಿಕಾರಿ ಸದಾಶಿವ ಅಳಿಕೆ ಕಾರ್‍ಯಕ್ರಮ ನಿರೂಪಿಸಿದರು. ವಲಯ ಸಂಯೋಜಕಿ ಲೀಲಾ ಕೆ, ಸೇವಾದೀಕ್ಷಿತರಾದ ಪುಷ್ಪಾ, ಶಶಿಕಲಾ, ವಾರಿಜ, ರಾಧಾಕೃಷ್ಣ, ಕಛೇರಿ ಸಿಬ್ಬಂದಿಗಳಾದ ವಿಜೇತ, ಪವಿತ್ರ ಸಹಕರಿಸಿದರು. ಅಳಿಕೆ ಬಾಲವಿಕಾಸ ಭಗಿನಿಯಾದ ಲೀಲಾವತಿ ಇವರ ನಿರ್ದೇಶನದಲ್ಲಿ ಒಡಿಯೂರು ಶ್ರೀ ಬಾಲವಿಕಾಸ ಕೇಂದ್ರದ ಮಕ್ಕಳಿಂದ ನಾನಾ ಸಾಂಸ್ಕೃತಿಕ ಕಾರ್‍ಯಕ್ರಮ ನಡೆಯಿತು.

More articles

Latest article