Thursday, October 26, 2023

ಮಾ. 29ರಿಂದ ಸುಲ್ತಾನ್ ನಗರ ಮಖಾಂ ಉರೂಸ್-ಧಾರ್ಮಿಕ ಮತ ಪ್ರವಚನ

Must read

ಬಂಟ್ವಾಳ: ಕೂಡಿಬೈಲು ನಾವೂರು ಸುಲ್ತಾನ್ ನಗರ ಬದ್ರಿಯಾ ಜುಮಾ ಮಸೀದಿ ಇದರ ವಠಾರದಲ್ಲಿ ಅಂತ್ಯ ವಿಶ್ರಮಹೊಂದಿರುವ ವಲಿಯುಲ್ಲಾಹಿ (ಖ.ಸಿ) ಅವರ ಹೆಸರಿನಲ್ಲಿ 2 ವರ್ಷಕ್ಕೊಮ್ಮೆ ಆಚರಿಸಿಕೊಂಡು ಬರುತ್ತಿರುವ ಮಖಾಂ ಉರೂಸ್, ಸ್ವಲಾತ್ ವಾರ್ಷಿಕ ಹಾಗೂ 3 ದಿವಸಗಳ ಧಾರ್ಮಿಕ ಮತ ಪ್ರವಚನಗಳೊಂದಿಗೆ ಜರಗಲಿದೆ.
ಮಾ. 29 ರಂದು ಮಿತ್ತಬೈಲ್ ಜಬ್ಬಾರ್ ಉಸ್ತಾದರ ಪುತ್ರ ಕೆ.ಪಿ. ಇರ್ಷಾದ್ ಹುಸೈನ್ ದಾರಿಮಿ ಮಿತ್ತಬೈಲು ಉದ್ಘಾಟನೆಗೈಯಲಿದ್ದು, ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು “ವಿಚಿತ್ರ ಪ್ರಪಂಚ” ಎಂಬ ವಿಷಯದಲ್ಲಿ ಮತ ಪ್ರವಚನ ನೀಡುವರು. ಮಾ. 30 ರಂದು “ದುಶ್ಚಟಗಳ ಭೀಕರತೆ” ಎಂಬ ವಿಷಯದಲ್ಲಿ ಯಾಕೂಬ್ ಸಅದಿ ನಾವೂರು ಮತ ಪ್ರವಚನ ನೀಡಲಿದ್ದು, ಮಾ. 31ರಂದು ಉರೂಸ್ ಸಮಾರೋಪದ ಅಧ್ಯಕ್ಷತೆಯನ್ನು ಮಸೀದಿ ಅಧ್ಯಕ್ಷ ಅಬ್ದುಲ್ ಅಝೀಝ್ ವಹಿಸುವರು, ಮಸೀದಿ ಗೌರವಾಧ್ಯಕ್ಷ ಅಬ್ದುಲ್ ಹಮೀದ್ ಮುಸ್ಲಿಯಾರ್ ಪ್ರಸ್ತಾವಿಸುವರು, ಸುಲ್ತಾನ್ ನಗರ ಖತೀಬ ಹಾಶಿಂ ಫೈಝಿ ಪಾಂಡವರಕಲ್ಲು ಉದ್ಘಾಟಿಸಲಿದ್ದು, “ಆತ್ಮಶುದ್ಧಿ ಮತ್ತು ಯೌವ್ವನದ ಮಹತ್ವ” ಎಂಬ ವಿಷಯದ ಕುರಿತು ಇಲ್ಯಾಸ್ ಅರ್ಶದಿ ಆತೂರು ಮುಖ್ಯ ಭಾಷಣ ಮಾಡುವರು. ಸೈಯದ್ ಇಬ್ರಾಹಿಂ ಬಾತಿಷಾ ತಂಙಳ್ ಅಲ್-ಅಝ್ಹರಿ ಆನೆಕಲ್ಲು ದುವಾ ಆಶೀರ್ವಚನ ನೀಡಲಿದ್ದು, ಹಲವಾರು ಉಲಮಾ ಉಮರಾ ಸಾದತ್‌ಗಳು ಭಾಗವಹಿಸಲಿದ್ದಾರೆ ಎಂದು ಉರೂಸ್ ಸಮಿತಿಯ ಅಧ್ಯಕ್ಷ ನಝೀರ್ ಸುಲ್ತಾನ್ ನಗರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

More articles

Latest article