Tuesday, September 26, 2023

ತುಂಬೆ ಪದವಿ ಪೂರ್ವ ಕಾಲೇಜಿನಲ್ಲಿ ಇಂಟರಾಕ್ಟ್ ಕ್ಲಬ್ ಸನ್ನದು ಪ್ರಧಾನ ಸಮಾರಂಭ

Must read

ಬಂಟ್ವಾಳ: ರೋಟರಿ ಸಂಸ್ಥೆ ವಿದ್ಯಾರ್ಥಿಗಳ ಪ್ರತಿಭೆಯನ್ನು ಪುನಶ್ಚೇತನ ಮಾಡಲು ವಿವಿಧ ಹಂತಗಳಲ್ಲಿ   ಮಾರ್ಗದರ್ಶನ ಮತ್ತು ಪ್ರತಿಭಾ ಪುರಸ್ಕಾರ ಮಾಡುತ್ತದೆ ಎಂದು ರೋಟರಿ ವಲಯ ಕಾರ್ಯದರ್ಶಿ ನಾರಾಯಣ ಹೆಗ್ಡೆ ಹೇಳಿದರು.
ಅವರು ರೋಟರಿ ಕ್ಲಬ್ ಬಂಟ್ವಾಳ ಟೌನ್ ಇದರ  ವತಿಯಿಂದ ತುಂಬೆ ಪದವಿ ಪೂರ್ವ ಕಾಲೇಜಿನಲ್ಲಿ ಇಂಟರಾಕ್ಟ್ ಕ್ಲಬ್ ಸನ್ನದು ಪ್ರಧಾನ ಮಾಡಿ ಮಾತನಾಡಿದರು. ಸಮಾರಂಭದ ಅಧ್ಯಕ್ಷರಾದ ಕಾಲೇಜಿನ ಪ್ರಾಂಶುಪಾಲರಾದ ಗಂಗಾಧರ ಆಳ್ವ ವಿದ್ಯಾರ್ಥಿಗಳಿಗೆ  ರೋಟರಿ ಅವಕಾಶಗಳ ಸದುಪಯೋಗ ಮಾಡಲು ಕರೆ ನೀಡಿದರು.  ರೋಟರಿ ಕ್ಲಬ್ ಬಂಟ್ವಾಳ ಟೌನ್ ಇದರ ಅಧ್ಯಕ್ಷರಾದ ಉಮೇಶ್ ನಿರ್ಮಲ್ ಗಣ್ಯರನ್ನು ಸ್ವಾಗತಿಸಿದರು. ವೇದಿಕೆಯಲ್ಲಿ ಗಣೇಶ್ ಸುವರ್ಣ  ತುಂಬೆ, ಮಹಮ್ಮದ್ ಹನೀಫ್, ಮಹಮ್ಮದ್ ಮುನಿರ್ , ಸವಿತಾ ನಿರ್ಮಲ್ ಉಪಸ್ತಿತರಿದ್ದರು. ಕಾಲೇಜಿನ ಇಂಟರಾಕ್ಟ್  ಸಂಯೋಜಕರಾದ ಆಲ್ವಿನ್ ಸಿಕ್ವೇರಾ ಧನ್ಯವಾದ ಸಲ್ಲಿಸಿದರು.

More articles

Latest article