ಇವತ್ತಿನ ದಿನಮಾನದಲ್ಲಿ ಸಾಮಾನ್ಯವಾಗಿ ಜನರು ತಮ್ಮದೇ ಆದ ಸಮಸ್ಯೆಗಳಲ್ಲಿ ನೊಂದು-ಬೆಂದು ಇತರರೆಡೆಗೆ ದಿವ್ಯ ಔದಾಸೀನ್ಯವನ್ನು ತಳೆಯುವುದು ಎಲ್ಲರೂ ಬಲ್ಲ ವಿಷಯವೇ ಸರಿ. ನಾವು ಕಛೇರಿಗೆ ಅಥವಾ ಬೇರೆಲ್ಲಾದರೂ ಹೋಗುವಾಗ ಯಾರಾದರೂ ಅಪರಿಚಿತರು ತೊಂದರೆಯಲ್ಲಿ ಸಿಲುಕಿದ್ದಾಗ ಅವರಿಗೆ ಸಹಾಯಹಸ್ತ ಚಾಚುವ ಬದಲು “ನಮಗೇಕೆ ಬೇಕು ಅವರಿವರ ಉಸಾಬರಿ” ಎಂದು ಕಂಡೂ ಕಾಣದ ಹಾಗೆ ಹೊರಡುತ್ತೇವೆ. ತೊಂದರೆಯಲ್ಲಿದ್ದಂತೆ ನಟಿಸಿ ಜನರನ್ನು ದೋಚುವ ಪುಂಡರ, ದುಷ್ಕರ್ಮಿಗಳ ಸಂಖ್ಯೆ ದಿನೇದಿನೇ ಹೆಚ್ಚುತ್ತಿರುವುದೂ ಈ ಬೆಳವಣಿಗೆಗೆ ಕಾರಣೀಭೂತವಾಗಿದೆ ಎಂಬುದು ಅತಿಶಯೋಕ್ತಿಯೇನಲ್ಲ.

ಆದರೆ ಇಂದಿಗೂ ಮಾನವೀಯ ಮುಖವನ್ನು ಹೊಂದಿ ಸಮಾಜಸೇವೆಯನ್ನೇ ಧ್ಯೇಯವನ್ನಾಗಿಸಿಕೊಂಡ ಹಲವಾರು #N_G_O ಗಳನ್ನು ನಾವು ಕಾಣಬಹುದು.
ಅಂತಹದ್ದೇ ಒಂದು ತಾಜಾ ಉದಾಹರಣೆ #ತುಳುನಾಡ_ಪೊರ್ಲು_ಸೇವಾ_ಟ್ರಸ್ಟ್ (ರಿ). ಈ ಸಂಸ್ಥೆ ಸಮಾಜದಲ್ಲಿ ನೊಂದ ಜೀವಗಳನ್ನು ಸ್ವಾವಲಂಬಿಗಳನ್ನಾಗಿಸಿ ಮುಖ್ಯವಾಹಿನಿಗೆ ತರುವ ಸಲುವಾಗಿ ಕಳೆದ 31 ತಿಂಗಳ ಹಿಂದೆ #ಕಟೀಲು_ಶ್ರೀ_ದುರ್ಗಾಪರಮೇಶ್ವರಿ_ಮಾತೆಯ ಅನುಗ್ರಹದೊಂದಿಗೆ ಸಮಾಜಕ್ಕಾಗಿ ನಿರಂತರ ಶ್ರಮಿಸುತ್ತಿದೆ.
#ಬಡವರಿಂದ_ಬಡವರಿಗಾಗಿ_ಬಡವರಿಗೋಸ್ಕರ ಎಂಬ ಧ್ಯೇಯವನ್ನಾಗಿಸಿಕೊಂಡು, #ಜನ_ಸೇವೆಯೇ_ಜನಾರ್ದನ_ಸೇವೆ ಎಂಬ ಉದ್ದೇಶಕ್ಕಾಗಿ ದುಡಿಯುತ್ತಿರುವ ಸಮಾನ ಮನಸ್ಕ ಯುವ ಜನಾಂಗದ ನಮ್ಮ ಸಂಸ್ಥೆ ಕೇವಲ 30 ತಿಂಗಳ ಸುದೀರ್ಘ ಸೇವಾ ಪಯಣದ ಸೇವಾ ಯೋಜನೆಯನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬಂದಿದೆ. ಇಂದು ತನ್ನ 31ನೇ ತಿಂಗಳ ಪಯಣದಲ್ಲಿ 2 ಅಶಕ್ತ ಕುಟುಂಬಗಳಿಗೆ ನೆರವಾಗಿದೆ.

ಮನೆಗೆ ಆದಾರ ಸ್ಥಂಭವಾಗಿದ್ದ ಮನೆ ಯಜಮಾನ *ಬೆಳ್ತಂಗಡಿ ತಾಲೂಕಿನ ಆಂಡಿoಜೆ ಎರ್ಕಮೆ ನಿವಾಸಿ ರಾಮಣ್ಣ ಪೂಜಾರಿಯವರು* ವಿದ್ಯುತ್ ಕಂಬದಿಂದ ಬಿದ್ದು ಸೊಂಟದ ಸಂಪೂರ್ಣ ಸ್ವಾಧೀನ ಕಳೆದುಕೊಂಡು ಕಳೆದ 7 ತಿಂಗಳುಗಳಿಂದ ಯಾತನೆ ಅನುಭವಿಸುತ್ತಿದ್ದರೆ. ಇದೀಗ ಮನೆಯ ಸಂಪೂರ್ಣ ಜವಾಬ್ದಾರಿ ರಾಮಣ್ಣನವರ ಪತ್ನಿ *ಸುಮಲತಾರವರ* ಹೆಗಲ ಮೇಲೆ. ರಾಮಣ್ಣ ಸುಮಲತಾ ದಂಪತಿಗಳಿಗೆ 2 ಚಿಕ್ಕ ಮಕ್ಕಳು ಅದರಲ್ಲಿ ಒಂದು ಬುದ್ಧಿಮಾಂದ್ಯವಾಗಿದ್ದು ಜೊತೆಗೆ ವಯಸ್ಸಾದ ಸುಮಲತಾರವರ ದೊಡ್ಡಪ್ಪ ಮತ್ತು ದೊಡ್ಡಮ್ಮ ವಾಸಿಸುತ್ತಿದ್ದರೆ. 6 ಜನ ಸಂಸಾರವನ್ನು ಸಾಗಿಸಲು ಸಮಲತಾರವರಿಗೆ ಬೀಡಿ ಕಟ್ಟಿ ಜೀವನ ಸಾಗಿಸುವುದೇ ಕಷ್ಟ ಆಗಿರುವಾಗ 4 ತಿಂಗಳುಗಳಿಂದ ಕ್ಯಾನ್ಸರ್ ಪೀಡಿತೆ ಸುಮಲತಾರವರ ದೊಡ್ಡಮ್ಮ ಗುಲಾಬಿಯವರು ಆರೈಕೆಯ ಹೊರೆಯ ಮೇಲೆ ಹೊರೆ ಬೀಳುತ್ತಿದೆ. ರಾಮಣ್ಣ ಮತ್ತು ಗುಲಾಬಿ ಚಿಕಿತ್ಸೆಗೆ ಈಗಾಗಲೇ 3 ಲಕ್ಷ ಅಧಿಕ ಖರ್ಚು ತಗುಲಿದ್ದು ಮುಂದಿನ ಚಿಕಿತ್ಸೆಗೆ ಇನ್ನಷ್ಟು ಹಣದ ಅವಶ್ಯಕತೆ ಇದೆ. ಸುಮಲತಾರವರ ಬೆನ್ನೆಲುಬಾಗಿ ನಿಲ್ಲುವ ನಿಟ್ಟಿನಲ್ಲಿ 31ನೇ ತಿಂಗಳ ಮಾಸಿಕ ಸೇವಾ ಯೋಜನೆಯಲ್ಲಿ ರೂ.25,000 ಚೆಕ್ ಮತ್ತು *ಬಂಟ್ವಾಳ ತಾಲೂಕಿನ ಕಾವಳಮೂಡೂರು ಕೆದ್ದಳಿಕೆ* ಎಂಬಲ್ಲಿ ವಾಸಿಸುತ್ತಿರುವ *ಸುಂದರ ನಾಯ್ಕ ಮತ್ತು ಶಕುಂತಳಾ* ದಂಪತಿಗಳು 4 ಹೆಣ್ಣು ಮಕ್ಕಳೊಂದಿಗೆ ಒಂದು ಚಿಕ್ಕ ಸಂಸಾರ. ಸುಂದರರವರು ತನ್ನ ಸಂಸಾರದ ನಿರ್ವಾಹಣೆಗೆ ಮಂಗಳೂರಿನ ಕಾಲೇಜ್ ಕ್ಯಾಂಟೀನ್ ಒಂದರಲ್ಲಿ ಕೆಲಸ ಮಾಡುತ್ತಿದ್ದು, ಶಕುಂತಳಾರವರು ಬೀಡಿ ಕಟ್ಟುತ್ತಿದ್ದು ಆದರೆ ಕೆಲ ಸಮಯದ ಹಿಂದೆ ಇವರಿಗೆ ಆರೋಗ್ಯ ಹದಗೆಟ್ಟ ಪರಿಣಾಮ ಬೀಡಿ ಕಟ್ಟುವ ಕೆಲಸವನ್ನು ಬಿಟ್ಟಿದ್ದು, ಮನೆಯ ಸಂಪೂರ್ಣ ಜವಾಬ್ದಾರಿ ಸುಂದರವರ ಮೇಲೆ ಬಿತ್ತು. ಕಷ್ಟದ ನಡುವೆಯು ಸುಂದರವರು ತನ್ನ ಸಂಸಾರವನ್ನು ಸುಖಮಯವಾಗಿ ಮುನ್ನಡೆಸುತ್ತಿದ್ದರು. ಸುಖವಾಗಿದ್ದ ಈ ಕುಟುಂಬದ ಮೇಲೆ ಮತ್ತೆ ವಿಧಿಯ ಕ್ರೂರ ದೃಷ್ಟಿ ಬಿತ್ತು. 4 ಹೆಣ್ಣು ಮಕ್ಕಳಲ್ಲಿ 3ನೇ ಮಗಳಾದ *ಪ್ರಿಯಾರವರ* ಆರೋಗ್ಯದಲ್ಲಿ ಕಳೆದ ಒಂದು ವರ್ಷದ ಹಿಂದೆ ಬದಲಾವಣೆ ಆಯಿತು. ಹತ್ತಿರದ ವೈದ್ಯರಲ್ಲಿ ಪರೀಕ್ಷಿಸಿದಾಗ *ಹಳದಿ ರೋಗ* ಎಂದು ದೃಢಪಟ್ಟಿದ್ದು ಮತ್ತೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ವತ್ರೆಗೆ ದಾಖಲಿಸಿದಾಗ ಹಳದಿ ರೋಗದ ಜೊತೆಗೆ ಅಪರೂಪದ *Still’s Disease* ಎಂಬ ಖಾಯಿಲೆಯು ಬಂದಿದ್ದು, ಆದರೆ ಇವರ ಪರಿಸ್ಥಿತಿ ತುಂಬಾ ಹದಗೆಟ್ಟಿತ್ತು, 31ನೇ ತಿಂಗಳ ಮಾಸಿಕ ಸೇವಾ ಯೋಜನೆಯಲ್ಲಿ ಇವರ ಚಿಕಿತ್ಸೆಗೆ ಸಹಾಯ ಮಾಡಲು ಮುಂದೆ ಬಂದಿದ್ದು ನಮ್ಮ ಸಂಸ್ಥೆ ಆದರೆ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 03.03.2019ನೇ ಆದಿತ್ಯವಾರ ಸಾವನ್ನಪ್ಪಿದ್ದು, ಇವರ ಚಿಕಿತ್ಸೆಗೆಂದು ನೀಡಬೇಕಿದ್ದ ಸಹಾಯವನ್ನು ರೂ. 25,000 ಚೆಕ್ ಅನ್ನು ಪ್ರಿಯರವರ ಕುಟುಂಬಕ್ಕೆ ಶ್ರೀ ಹನುಮಂತ ದೇವಸ್ಥಾನ ಮೂಡಬಿದ್ರೆ ಇಲ್ಲಿ
ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಶ್ರೀ ಹನುಮಂತ ದೇವಸ್ಥಾನ ಆಡಳಿತ ಟ್ರಸ್ಟ್ ನ ಖಜಾಂಚಿ ಶಿವಾನಂದ ಪ್ರಭುರವರು ಟ್ರಸ್ಟ್ ನ ಕಾರ್ಯವೈಖರಿಯ ಬಗ್ಗೆ ಮಾತಾಡಿ ಶುಭ ಹಾರೈಸಿದರು. ಟ್ರಸ್ಟ್ ನ ಪದಾಧಿಕಾರಿಗಳು ಹಾಗೂ ಸದಸ್ಯರು ಈ ಸಮಯದಲ್ಲಿ ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here