Wednesday, October 18, 2023

ಇಡ್ಕಿದು: ರೇಬಿಸ್ ಲಸಿಕಾ ಶಿಬಿರ

Must read

ವಿಟ್ಲ: ಇಡ್ಕಿದು ಪಂಚಾಯಿತಿ, ಪಶು ಸಂಗೋಪನಾ ಇಲಾಖೆ, ನಾನಾ ಸೇವಾ ಸಂಸ್ಥೆಗಳ ಸಹಕಾರದೊಂದಿಗೆ ವತಿಯಿಂದ 23 ನೇ ವರ್ಷದ ಹುಚ್ಚು ನಾಯಿ ನಿರೋಧಕ ಲಸಿಕಾ ಶಿಬಿರ ನಡೆಯಿತು.
ಶಿಬಿರ ಉದ್ಘಾಟಿಸಿದ ಡಾ. ಕೃಷ್ಣ ಭಟ್ ಕೋಂಕೋಡಿ ಮಾತನಾಡಿ ೨೫ನೇ ವರ್ಷದ ಕಾರ್‍ಯಕ್ರಮವನ್ನು ರಾಜ್ಯ ಮಟ್ಟದ ಇಲಾಖಾಧಿಕಾರಿ, ಸೇವಾ ಸಂಸ್ಥೆಗಳ ಉನ್ನತ ಮಟ್ಟದ ಅಧಿಕಾರಿಗಳನ್ನು ಸೇರಿಸಿ ಮಾದರಿ ಕಾರ್‍ಯಕ್ರಮವನ್ನಾಗಿ ಮಾಡಬೇಕು ಎಂದರು.
ಗ್ರಾಮ ಪಂಚಾಯತ್ ವ್ಯಾಪ್ತಿಯ 23 ಕೇಂದ್ರಗಳಲ್ಲಿ ಶಿಬಿರವನ್ನು ಹಮ್ಮಿಕೊಂಡಿದ್ದು 366 ನಾಯಿಗಳಿಗೆ ಚುಚ್ಚುಮದ್ದು ನೀಡಲಾಯಿತು. ವಿಟ್ಲ ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕರು ಡಾ. ಸುರೇಶ್ ಭಟ್ ಇವರ ನೇತೃತ್ವದಲ್ಲಿ ಡಾ.ಪರಮೇಶ್ವರ ನಾಕ್ ಪಶು ವೈದ್ಯಾಧಿಕಾರಿ ಅಡ್ಯನಡ್ಕ, ಜಾನುವಾರು ಅಭಿವೃದ್ದಿ ಅಧಿಕಾರಿಗಳಾದ ಕೃಷ್ಣಮೂರ್ತಿ ಜಿ, ಈಶ್ವರ ಭಟ್ ಕೆ, ಹಿರಿಯ ಪಶು ವೈದ್ಯಕೀಯ ಪರೀಕ್ಷಕರುಗಳಾದ ಮಂದಾರ ಜೈನ್, ಸುರೇಶ್ , ಕಿಶೋರ್, ಶೀನಪ್ಪ ಚುಚ್ಚುಮದ್ದು ನೀಡಿ ಸಹಕರಿಸಿದರು.
ಕಾರ್‍ಯಕ್ರಮದಲ್ಲಿ ಪಂಚಾಯಿತಿ ಅಧ್ಯಕ್ಷರಾದ ಚಂದ್ರಾವತಿ, ಸದಸ್ಯರುಗಳಾದ ಜಯರಾಮ ಕಾರ್‍ಯಾಡಿಗುತ್ತು, ಚಿದಾನಂದ ಪೆಲತ್ತಿಂಜ, ಸತೀಶ್ ಕೆಂರ್ದೆಲು, ಕೇಶವ ಉರಿಮಜಲು, ವಸಂತಿ, ಶಾರದಾ, ಜಗದೀಶ್ವರಿ, ಕಾರ್‍ಯದರ್ಶಿ ಅಜಿತ್ ಕುಮಾರ್, ಲೆಕ್ಕ ಸಹಾಯಕಿ ರಾಜೇಶ್ವರಿ, ಗ್ರಾಮಸ್ಥರು ಉಪಸ್ಥಿತರಿದ್ದರು.
ಪಿಡಿಒ ಗೋಕುಲ್ ದಾಸ್ ಭಕ್ತ ಸ್ವಾಗತಿಸಿದರು. ಉಪಾಧ್ಯಕ್ಷರಾದ ಎಂ.ಸುಧೀರ್ ಕುಮಾರ್ ಶೆಟ್ಟಿ ಮಿತ್ತೂರು ವಂದಿಸಿದರು. ಸಿಬ್ಬಂದಿಗಳಾದ ಸೂರಪ್ಪ, ಭವ್ಯ, ಸುನೀತಾ, ಸಾವಿತ್ರಿ , ಪೂರ್ಣೀಮಾ ಕೇಂದ್ರಗಳಲ್ಲಿ ಚುಚ್ಚುಮದ್ದು ನೀಡಲು ಸಹಕರಿಸಿದರು.

More articles

Latest article