Thursday, October 26, 2023

ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ ನಿಂದ ಆರ್ಥಿಕ ಅರಿವು ಜಾಗೃತಿ

Must read

ಬಂಟ್ವಾಳ: ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ವತಿಯಿಂದ ನಬಾರ್ಡ್ ಸಹಯೋಗದಲ್ಲಿ ಗ್ರಾಹಕರಿಗೆ ಆರ್ಥಿಕ ಅರಿವು ಜಾಗೃತಿ ಕಾರ್ಯಕ್ರಮವು ಬಂಟ್ವಾಳ ಶಾಖಾ ಕಛೇರಿಯಲ್ಲಿ ನಡೆಯಿತು.
ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿವೃತ್ತ ವ್ಯವಸ್ಥಾಪನಾ ನಿರ್ದೇಶಕರಾದ ನಾರಾಯಣ ಕಾಮತ್ ರವರು ಮಾತನಾಡಿ ನಮ್ಮ ಬ್ಯಾಂಕಿನ ಗ್ರಾಹಕರೊಂದಿಗೆ ಉತ್ತಮ ಬಾಂಧ್ಯವ್ಯ ಹೊಂದಿದೆ. ಈಗಾಗಲೇ ನೆಟ್ ಬ್ಯಾಂಕಿಂಗ್ ವ್ಯವಸ್ಥೆ ಮತ್ತು ಕೋರ್‍ ಬ್ಯಾಂಕಿಂಗ್ ವ್ಯವಸ್ಥೆ ಹಾಗೂ ಮುಂದಿನ ದಿನಗಳಲ್ಲಿ ಇಂಟರ್‍ ನೆಟ್ ಬ್ಯಾಂಕಿಗ್ ವ್ಯವಸ್ಥೆ ಬರಲಿದೆ. ಎಲ್ಲರೂ ಆಪ್ ಮೂಲಕ ಮೊಬೈಲ್ ನಲ್ಲಿ ವ್ಯವಹಾರ ಮಾಟಬಹುದಾಗಿದೆ, ಹಾಗೂ ಮಹಿಳೆಯರಿಗೆ ನವೋದಯ ಸ್ಯ-ಸಹಾಯ ಸಂಘಗಳ ಬಗ್ಗೆ ಹಾಗೂ ಕೃಷಿಕರಿಗೆ ನಬಾರ್ಡ್ ಸಹಯೋಗದೋಂದಿಗೆ ಸಾಲಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದರು.
ಬ್ಯಾಂಕಿನ ಶಾಖಾ ವ್ಯವಸ್ಥಾಪಕರಾದ ಶಿವಪ್ರಸಾದ್ ರವರು ಮಾತನಾಡಿ ಬ್ಯಾಂಕ್ ಗ್ರಾಹಕರೊಂದಿಗೆ ಉತ್ತಮ ಸಂಬಂಧವನ್ನು ಬಯಸುತ್ತದೆ. ತಮ್ಮ ಆರ್ಥಿಕ ಅಭಿವೃದ್ಧಿಗೆ ಬ್ಯಾಂಕ್ ಸದಾ ಪ್ರೋತ್ಸಾಹ ನೀಡುತ್ತಿದೆ ಎಂದು ಹೇಳಿದರು ಮತ್ತು ಬ್ಯಾಂಕಿನ ವಸೂತಿದಳದ ಸಂತೋಷ್ ಕುಮಾರ್‍ ಶೆಟ್ಟಿ ಯವರು ಬ್ಯಾಂಕಿನ ವರದಿಯನ್ನು ಓದಿ ಹೇಳಿದರು. ಹಾಗೂ ಮುಖ್ಯ ಅಥಿತಿ ಗಳಾಗಿ ಬಂಟ್ವಾಳ ವಲಯ ಮೇಲ್ವಿಚಾರಕರಾದ ಕೇಶವ ಕಿಣಿ ಮತ್ತು ವಿಟ್ಲ ವಲಯದ ಯೊಗೀಶ್ ರವರು ಉಪಸ್ಥಿತರಿದ್ದರು. ಶಾಖೆಯ ಸೀಮಾರವರು ಸ್ವಾಗತಿಸಿದರು, ಹಾಗೂ ಶೇಖ್ ಮೊಹಮ್ಮದ್ ನವೀದ್ ರವರು ವಂದಿಸಿದರು. ನವೋದಯ ಟ್ರಸ್ಟ್ ನ ಶೋಭಾರವರು ಕಾರ್ಯಕ್ರಮ ನಿರೂಪಿಸಿದರು.

More articles

Latest article