Sunday, October 22, 2023

ಸರಪಾಡಿಯಲ್ಲಿ ಮತದಾನ ಬಹಿಷ್ಕಾರ ಬ್ಯಾನರ್, ಪ್ರತಿಭಟನೆ

Must read

ಬಂಟ್ವಾಳ: ರಸ್ತೆಗೆ ಡಾಮಾರು ಮಾಡಿ ಕೊಟ್ಟರೆ ಮಾತ್ರ ಮತದಾನ ಮಾಡುತ್ತೇವೆ , ಇಲ್ಲದಿದ್ದರೆ ಮತದಾನ ಬಹಿಷ್ಕಾರ ಮಾಡುತ್ತವೆ ಈ ಖಡಕ್ ಎಚ್ಚರಿಕೆ ಯ ಮಾತು ಸರಪಾಡಿ ಗ್ರಾಮದವರದ್ದು.‌

ರಸ್ತೆ ಡಾಮರೀಕರಣ ಮಾಡದಿದ್ದರೆ ಈ ಬಾರಿಯ ಲೋಕಸಭಾ ಚುನಾವಣೆ ಗೆ ಬಹಿಷ್ಕಾರದ ಎಚ್ಚರಿಕೆ ಯನ್ನು ನೀಡಿ ಪ್ರತಿಭಟನೆ ಕೈಕೊಂಡ ಘಟನೆ ಬಂಟ್ವಾಳ ತಾಲೂಕಿನ ಸರಪಾಡಿ ಎಂಬಲ್ಲಿ ನಡೆದಿದೆ.
ಬಜೆ ಪರಿಸರ ದಲ್ಲಿ ಮತದಾನ ಬಹಿಷ್ಕಾರದ ಬ್ಯಾನರ್ ಹಾಕಲಾಗಿದ್ದು ಸುದ್ದಿ ತಿಳಿದು ಅಗಮಿಸಿದ ಚುನಾವಣಾ ಅಧಿಕಾರಿಗಳು ಬ್ಯಾನರ್ ತೆಗದು ಕೊಂಡು ಹೋದ ಘಟನೆ ಕೂಡ ನಡೆದಿದೆ.
ಹಾಗಾಗಿ ಇಂದು ಬೆಳಿಗ್ಗೆ ಊರಿನ ಗ್ರಾಮಸ್ಥರು ಒಟ್ಟು ಗೂಡಿ ಪ್ರತಿಭಟನೆ ಯಲ್ಲಿ ನಿರತರಾಗಿದ್ದಾರೆ.
ಸರಪಾಡಿ ಗ್ರಾಮದ ಮಣಿನಾಲ್ಕೂರು ದೇವಸ್ಯಪಡೂರು ಸಂಪರ್ಕ ದ ಸುಮಾರು 2.50 ಕಿ.ಮಿ ಬಜೆ ರಸ್ತೆಯ ಡಾಮರೀಕರಣಕ್ಕೆ ಕಳೆದ ಹದಿನೈದು ವರ್ಷಗಳಿಂದ ಬೇಡಿಕೆ ಯ ಜೊತೆಗೆ ಹೋರಾಟ ನಡೆಸುತ್ತಿದ್ದಾರೆ.
ಆದರೆ ರಾಜಕೀಯ ಪಕ್ಷಗಳ ನಡುವಿನ ಕೆಸರೆರಚಾಟ ಈ ಭಾಗದ ಜನರು ಸೌಲಭ್ಯ ವಂಚಿರಾಗುವಂತೆ ಮಾಡಿದೆ.
ಬಜೆ ಎಂಬ ಊರಿನಿಂದ ಹೆದ್ದಾರಿ ಸಂಪರ್ಕ ಕ್ಕೂ ಈ ರಸ್ತೆ ಬಹಳ ಸಹಕಾರಿಯಾಗುತ್ತದೆ.
ಇಲ್ಲಿ ಸುಮಾರು 200 ಕ್ಕೂ ಅಧಿಕ ಮನೆಗಳಿದ್ದು, ಪ್ರಾರ್ಥನಾ ಮಂದಿರ ಶಾಲೆ ಹಾಗೂ ಆಸ್ಪತ್ರೆ ಇದೆ. ರಸ್ತೆಗೆ ಡಾಮರೀಕರಣ ಮಾಡದ ಹಿನ್ನೆಲೆಯಲ್ಲಿ ದೂಳಿನಿಂದ ಕಫ ಹಾಗೂ ಕೆಮ್ಮು ಶೀತ ಜ್ವರಗಳು ಬಾಧಿಸುತ್ತಿದೆ.
ಕಳೆದ ವರ್ಷಬಹುಗ್ರಾಮ ಕುಡಿಯುವ ನೀರಿನ ಸರಬರಾಜು ಕಾಮಗಾರಿಯ ವೇಳೆ ತೆಗೆದ ಮಣ್ಣು ಈ ರಸ್ತೆಗೆ ಹಾಕಿದ್ದು ವಾಹನ ಸಂಚಾರಕ್ಕೆ ಬಹಳಷ್ಟು ತೊಡಕಾಗಿ ದೆ ಎಂದು ಸ್ಥಳೀಯ ನಿವಾಸಿ ಬಾಲಕೃಷ್ಣ ವಾಹಿನಿ ಗೆ ತಿಳಿಸಿದ್ದಾರೆ.

More articles

Latest article