Tuesday, October 31, 2023

ಮೈಸೂರಿನಲ್ಲಿ ಎರಡು ದಿನಗಳ ಪತ್ರಕರ್ತರ ಸಂಘದ 34 ನೇ ಸಮ್ಮೇಳನಕ್ಕೆ ಚಾಲನೆ

Must read

ಮೈಸೂರು: ಎರಡು ದಿನಗಳ  ಪತ್ರಕರ್ತರ 34 ನೇ ರಾಜ್ಯ ಸಮ್ಮೇಳನವು ಮೈಸೂರಿನ  ಸುತ್ತೂರು ಕ್ಷೇತ್ರದಲ್ಲಿ ಶುಕ್ರವಾರ  ಸುತ್ತೂರು ಕ್ಷೇತ್ರದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ  ಸಮ್ಮೇಳನವನ್ನು ದೀಪ ಬೆಳಗಿಸುವ ಮೂಲಕ ಉದ್ಗಾಟಿಸಿ ಚಾಲನೆ ನೀಡಿದರು,      ಸಾನಿಧ್ಯ ವಹಿಸಿದ್ದ ಅದಿಚುಂನಗಿರಿ ಮಠದ ಪೀಠಾಧ್ಯಕ್ಷರಾದ ಶ್ರೀನಿರ್ಮಲಾನಂದ ಸ್ವಾಮೀಜಿ ಅವರು ಆಶೀರ್ವಚನ ನೀಡಿ, ಜನಮಾನಸಕ್ಕೆ ವಿಚಾರಗಳನ್ನು ತಲುಪಿಸುವಲ್ಲಿ ಮಾಧ್ಯಮದ ಪಾತ್ರ ಮಹತ್ತರವಾಗಿದೆ. ದೇಶ, ರಾಜ್ಯಗಳು ಉದ್ದಾರವಾಗುವ ನಿಟ್ಟಿನಲ್ಲಿ ಶಾಸನಗಳು ಮುಖ್ಯವಾಗಿದೆ. ಸ್ಪರ್ಧಾತ್ಮಕ ಯುಗದಲ್ಲಿ  ಏನೆಲ್ಲಾ  ಅನಾಹುತಗಳು ಉಂಟಾಗುತ್ತಿದ್ದು, ಪತ್ರಕರ್ತರು   ಕಾರ್ಯನಿರ್ವಹಿಬೇಕಾಗಿದೆ ಎಂದರು.  ಜನರ ಜ್ಙಾನವೃದ್ದಿ ಗೊಳಿಸುವುದರ ಜೊತೆಗೆ ಸಮಾಜವನ್ನು ಸುಸ್ಥಿತಿಯಲ್ಲಿರುವ ಪತ್ರಕರ್ತರ ಕಾರ್ಯ ಅಭಿನಂದನೀಯವಾಗಿದೆ ಎಂದರು.

ಮೈಸೂರು ಜಿಲ್ಲಾ ಉಸ್ತುವಾರಿ  ಸಚಿವ ಜಿ.ಟಿ.ದೇವೇಗೌಡ ‘ಸಾಧ್ವಿ ಸುದ್ದಿಕೋಶ’ವನ್ನು ಬಿಡುಗಡೆಗೊಳಿಸಿ ಮಾತನಾಡಿ,  ಪತ್ರಕತನ್ನನ್ನುಆರ್ಥಮಾಡಿಕೊಳ್ಳಬೇಕಲ್ಲದೆ, ಮುಂದಾಲೋಚನೆ ವಹಿಸಬೇಕು,ಯುವಪತ್ರಕರ್ತರಿಗೆ ಸಂಘದ ವತಿಯಿಂದ  ತರಬೇತಿ ನೀಡಬೇಕು ಎಂದರು. ಪತ್ರಕರ್ತರ ಸ್ಥಾನಮಾನ, ಜವಾಬ್ದಾರಿ ಯನ್ನು ಅರಿತುಕೊಂಡು ನಡೆಯಬೇಕು, ಸಮ್ಮೇಳನದಲ್ಲಾಗುವ ಚರ್ಚೆಗಳು ಆರ್ಥಪೂರ್ಣವಾಗಿ ಮೂಡಿ ಬರಲಿ ಎಂದು ಆಶಿಸಿದರು. ಕರ್ನಾಟಕ ರಾಜ್ಯ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು  ಅಧ್ಯಕ್ಷತೆ ವಹಿಸಿದ್ದರು   ಶಾಸಕರಾದ ಎಚ್.ವಿಶ್ವನಾಥ್, ಮಾಧುಸ್ವಾಮಿ, ಯತೀಂದ್ರ ಸಿದ್ದರಾಮಯ್ಯ, ರಮೇಶ್ ಬಾಬು , ಕುರುಲು ಕೂಜಾಣ ಕರಿಯಕರವಣ ಶ್ರೀಲಂಕ.  ಗೀತಿಕಾ ತಾಲೂಕಾವಾರ್ ಶ್ರೀಲಂಕ,   ಅಶೋಕ್ ಸಿಲ್ವಿಲ್ ನೇಪಾಲ, ರಾಜು ನಾಯ್ಕ್ ಗೋವಾ,  ಸ್ಥಳೀಯ ಮುಖಂಡರಾದ  ಹರೀಶ್ ಗೌಡ,  ನಾರಾಯಣ ಗೌಡ, ಜಿ.ಎಸ್.   ಪ್ರಶಾಂತ್, ಪತ್ರಕರ್ತರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.     ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನಯ್ಯ ಆಶಯ ಭಾಷಣಗೈದರು.  ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ   ಸಿ.ಕೆ.ಮಹೇಂದ್ರ ಪ್ರಸ್ತಾವಿಸಿ,ಸ್ವಾಗತಿಸಿದರು.   ಪ್ರ.ಕಾರ್ಯದರ್ಶಿ ಕೆ.ಜೆ.ಲೋಕೇಶ್ ಬಾಬು ವಂದಿಸಿದರು.  ಚಲನಚಿತ್ರ ನಟಿ ಅಪರ್ಣಾ ನಿರೂಪಿಸಿದರು.  ಈ ಸಮ್ಮೇಳನದಲ್ಲಿ ದ.ಕ.ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್, ಪ್ರ.ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ,    ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ರಾಜ್ಯ ಸಮಿತಿ ಸದಸ್ಯ ಬಾಳ ಜಗನ್ನಾಥ ಶೆಟ್ಟಿ, ಮಾಜಿ ಉಪಾಧ್ಯಕ್ಷ ವೆಂಕಟೇಶ್ ಬಂಟ್ವಾಳ, ಸದಸ್ಯರಾದ ಭಾಸ್ಕರ ರೈ ಕಟ್ಟ, ಉದಯಶಂಕರ ನಿರ್ಪಾಜೆ, ವಿಷ್ಣುಗುಪ್ತ ಪುಣಚ, ಮಹಮ್ಮದ್ ಆಲಿ ವಿಟ್ಲ ರವರು ಭಾಗವಹಿಸಿದ್ದರು.  ರಾಜ್ಯದ ವಿವಿಧ ಜಿಲ್ಲೆಯ, ಹೊರ ರಾಜ್ಯದ ಪತ್ರಕರ್ತರು ಹಾಜರಿದ್ದರು.  ವಸ್ತು, ಛಾಯಾಚಿತ್ರ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.

More articles

Latest article