


ಮೈಸೂರು: ಸಮಾಜದ ಹಿತದೃಷ್ಠಿಯಿಂದ ಸುದ್ದಿಗಳು ಕೂಡಿರಬೇಕು,ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲಿ ಜನಗಳ ಧ್ವನಿಯಾಗಿ ಮಾಧ್ಯಮಗಳು ಕೆಲಸ ಮಾಡಬೇಕು ಎಂದು ಹೇಳಿದರು.ಮೈಸೂರು ಜಿಲ್ಲೆ ಸುತ್ತೂರು ಕ್ಷೇತ್ರದಲ್ಲಿ ನಡೆದ ೩೪ ನೇ ಪತ್ರಕರ್ತರ ರಾಜ್ಯ ಸಮ್ಮೇಳನದಲ್ಲಿ ಸಮಾರೋಪ ಸಮಾರಂಭದಲ್ಲಿ ಅವರು ಸಮಾರೋಪ ಭಾಷಣ ಮಾಡುತ್ತಿದ್ದರು.ನಂಬಿಕೆ ಮತ್ತು ವಿಶ್ವಾಸ ಮೂಡಿಸುವ ರೀತಿಯಲ್ಲಿ ಪತ್ರಕರ್ತರು ಕಾರ್ಯನಿರ್ವಹಿಸಬೇಕು,ಇತ್ತೀಚಿಗಿನ ದಿನಗಳಲ್ಲಿ ಸೇವಾ ಮನೋಭಾವ ಕಡಿಮೆಯಾಗುತ್ತಿದ್ದು,ಅದು ಬೆಳೆಯಬಾರದು ಎಂದ ಅವರು ಪತ್ರಿಕೆಗಳು ಸಮಾಜದ ಮುಖವಾಣಿಯಾಗಿದ್ದು,ಪತ್ರಿಕೆಯಿಂದ ಭಾಷಾಜ್ಙಾನ ಹೆಚ್ಚುತ್ತದೆ ಎಂದರು. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಕತ್ತರಿ ಹಾಕುವ ಕೆಲಸ ಅಗಬಾರದು,ಮಾಧ್ಯಮಗಳು ಮೌಢ್ಯ, ಸುಳ್ಳು ಸುದ್ದಿಗೆ ಒತ್ತು ಕೊಡುವ ಕೆಲಸವನ್ನು ಬಿಟ್ಟು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಆಗಬೇಕು ಎಂದರು.
ಸತ್ಯಕ್ಕೆ ಪ್ರಥಮ ಆದ್ಯತೆ: ಪ್ರಶಸ್ತಿ ಪ್ರದಾನಗೈದ ವಿಧಾನಸಭೆಯ ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಮಾತನಾಡಿ ಪತ್ರಕರ್ತರು ಸತ್ಯ ಅನ್ವೇಷಣೆಯೊಂದಿಗೆ ಸತ್ಯ ಸುದ್ದಿಗೆ ಪ್ರಥಮ ಆದ್ಯತೆ ನೀಡಬೇಕು ಎಂದರು.ಪತ್ರಿಕೋದ್ಯಮ
ಹಲವಾರು ಬದಲಾವಣೆ ಕಂಡಿದೆ.ಇದು ಸಮಾಜದ ಬೆಳೆವಣಿಗೆಗೆ ಸಹಕಾರಿಯಾಗಿದೆ ಎಂದ ಅವರು ಪತ್ರಕರ್ತ ರು ನಿರ್ಭುತಿಯಿಂದ ಕಾರ್ಯ ನಿರ್ವಹಿಸುವಂತಾಗಬೇಕು ಎಂದರು.
ಸುತ್ತೂರು ಶ್ರೀ ಕ್ಷೇತ್ರದ ಜಗದ್ಗುರು ಶ್ರೀ ಶಿವರಾತ್ರಿದೇಶಿಕೇಂದ್ರ ಮಹಾಸ್ವಮೀಜಿ ಸಾನಿಧ್ಯ ವಹಿಸಿದ್ದರು. ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅಧ್ಯಕ್ಷತೆ ವಹಿಸಿದ್ದರು. ಶಾಸಕ ನಾಗೇಂದ್ರ, ಮೈಸೂರು ಜಿಲ್ಲಾ ಕಾರ್ಯನಿರತಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ,ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಅಧ್ಯಕ್ಷ ಮಲ್ಲಿಕಾರ್ಜುನಯ್ಯ, ಕಠ್ಮಂಡು ಮೆಟ್ರೋ ಎಫ್.ಎಂ.ನ ನ್ಯೂಸ್ ಎಡಿಟರ್ಅಶೋಕ್ ಸಿಲ್ವಿಲ್, ಕೊಲೊಂಬೋ ಡೈಲಿ ಮಿರರ್ ಸುದ್ದಿ ಸಂಪಾದಕ ಕುರುಲು ಕೂಜಾಣ ಕರಿಯಕರವಣ,ಕೊಲೊಂಬೋ ಅಂತರಾಷ್ಟ್ರೀಯ ಪೊಟೋ ಜರ್ನಲಿಸ್ಟ್ ಗೀತಿಕಾ ತಾಲೂಕದಾರ್, ಭಾರತೀಯ ಕಾರ್ಯ ನಿರತ ಪತ್ರಕರ್ತರ ಒಕ್ಕೂಟದ ಮಹಾಪ್ರಧಾನ ಕಾರ್ಯದರ್ಶಿ ಪರಮಾನಂದ ಪಾಂಡೆ, ಕೆ.ವಿ.ಪ್ರಭಾಕರ್ ಸಹಿತ ಸಂಘದ ಪದಾಧಿಕಾರಿಗಳು ವೇದಿಕೆಯಲ್ಲಿದ್ದರು. ಇದೇ ವೇಳೆ ಹೊಸದಿಗಂತ ಪತ್ರಿಕೆಯ ಅಂಕಣಕಾರ ದು.ಗು.ಲಕ್ಷ್ಮಣ್ , ದ.ಕ.ಜಿಲ್ಲೆಯ ಬೆಳ್ತಂಗಡಿ ತಾ.ನ ಪತ್ರಕರ್ತ ಲಕ್ಷ್ಮಿ ಮಚ್ಚಿನ ಸಹಿತ ಹಲವು ಪತ್ರಕರ್ತರಿಗೆ ವಿವಿಧ ಪ್ರಶಸ್ತಿ ಪ್ರಧಾನ ಮಾಡಲಾಯಿತು.ಉಪಾಧ್ಯಕ್ಷ ಜಯರಾಮ ಮತ್ತೀಕೆರೆ ಸ್ವಾಗತಿಸಿದರು. ಸವಿತಾ ಶಿವಕುಮಾರ್ ಬೆಂಗಳೂರು ನಿರೂಪಿಸಿದರು.


