Saturday, October 21, 2023

ಪತ್ರಕರ್ತರ ಕ್ಷೇಮಾಭಿವೃದ್ದಿ ಯೋಜನೆ ಜಾರಿಗೆ ಬದ್ದ : ಸಿಎಂ ಎಚ್ ಡಿ.ಕುಮಾರ ಸ್ವಾಮಿ

Must read

ಮೈಸೂರು: ಕಾರ್ಯನಿರತ ಪತ್ರಕರ್ತರ ಕ್ಷೇಮಾಭಿವೃದ್ದಿಗೆ ರಾಜ್ಯ ಸರಕಾರ ಸಿದ್ದವಿದ್ದು, ಜಾರಿಯಲ್ಲಿರುವ ಕ್ಷೇಮಾಭಿವೃದ್ದಿ ಯೋಜನೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಲು ನಮ್ಮ ಸರಕಾರ ಬದ್ದವಾಗಿದೆ ಎಂದು  ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಹೇಳಿದರು.  ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರು ಹಾಗೂ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಆಶ್ರಯದಲ್ಲಿ ಎರಡುದಿನಗಳ ಕಾಲ ಸುತ್ತೂರು ಕ್ಷೇತ್ರದಲ್ಲಿ ನಡೆಯುವ 34ನೇ ರಾಜ್ಯ ಪತ್ರಕರ್ತರ ಸಮ್ಮೇಳನದ ಮೊದಲದಿನವಾದ ಶುಕ್ರವಾರ  ಅವರು ಭಾಗವಹಿಸಿ ಮಾತನಾಡುತ್ತಿದ್ದರು.

ಪತ್ರಿಕೋದ್ಯಮ ಇಂದು ಬದಲಾಗುತ್ತಿರುವ ಕಾಲಘಟ್ಟದಲ್ಲಿ ಅನೇಕ ಹೊಸ ಸವಾಲುಗಳನ್ನು ಎದುರಿಸುತ್ತಿದೆ. ಸುದ್ದಿ ಮನೆಗಳಲ್ಲಿ ದುಡಿಯುವ ಪತ್ರಕರ್ತರು ಆರೋಗ್ಯ , ಆರ್ಥಿಕ ಸಂಕಷ್ಟಗಳಿಗೆ ಸಿಲುಕಿ ನಲುಗುತ್ತಿರುವುದನ್ನು ಕಂಡಿದ್ದು,ಇದಕ್ಕಾಗಿ ಕ್ಷೇಮಾಭಿವೃದ್ದಿ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ಚಿಂತನೆ ನಡೆಸಿದೆ ಎಂದರು. ಪತ್ರಕರ್ತರು ನೇರವಂತಿಕೆ,ನಿಷ್ಠುರತೆ,ವಸ್ತುನಿಷ್ಠ ಹಾಗೂ ಸತ್ಯ ನಿಷ್ಠ ವರದಿಗಳನ್ನು ನೀಡುತ್ತಾ ಸದಾ ಕಾಲ ಎತ್ತಿಹಿಡಿಯಬೇಕೆಂದು ಆಶಯ ವ್ಯಕ್ತಪಡಿಸಿದರು. ಮಾಧ್ಯಮಗಳು ಅತ್ಯಂತ ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸುವ ಬದ್ದತೆಯನ್ನು ಅಳವಡಿಸಕೊಳ್ಳಬೇಕಾಗಿದೆ ಎಂದರು.ಮಾಧ್ಯಮ ಕ್ಷೇತ್ರ ನಾಗಾಲೊಇಟದಲ್ಲಿ ಬೆಳೆಯುತ್ತಿದ್ದು,ವಿದ್ಯುನ್ಮಾನ ಕ್ಷೇತ್ರವಂತು ವಿಸ್ತಾರಗೊಳ್ಳತ್ತಲೆ ಇದೆ. ಮಾಧ್ಯಮಗಳು ಮಾನವೀಯ ಕಳಕಳಿಯುಳ್ಳ ,ಜನಸಾಮಾನ್ಯರ ಸಂಕಷ್ಟಗಳಿಗೆ ಸ್ಪಂದಿಸುವ ಸುದ್ದಿಗಳ ಹಾಗೂ ವಿಚಾರಗಳಿಗೆ ಹೆಚ್ಚಿನ ಗಮನಹರಿಸಬೇಕೆಂದರು.   ಸುತ್ತೂರು ಕ್ಷೇತ್ರದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ,  ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್,  ಸಣ್ಣ ನೀರಾವರಿ ಸಚಿವ ಪುಟ್ಟರಾಜು,  ಮಾಧ್ಯಮ ಅಕಾಡೆಮಿ ಅಧ್ಯಕ್ಷ ಎಂ.ಸಿದ್ದರಾಜು, ಶಾಸಕರಾದ ಹರ್ಷವರ್ಧನ್ ,ಎಚ್.ವಿಶ್ವನಾಥ್, ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ಎಚ್.ಬಿ. ದಿನೇಶ್,ಭಾರತೀಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನಯ್ಯ, ಮೊದಲಾದವರು ಉಪಸ್ಥಿತರಿದ್ದರು. ವಿಶ್ರಾಂತ ಪತ್ರಕರ್ತರಾದ ನಾಡೋಜ ಡಾ.ಪಾಟೀಲ್ ಪುಟ್ಟಪ್ಪ,ಎಚ್.ಎಸ್.ದೊರೆಸ್ವಾಮಿ ಅವರನ್ನು ಸನ್ಮಾನಿಸಲಾತು ಹಾಗೂ ಹಿರಿಯ ಪತ್ರಕರ್ತರಾದ ಈಶ್ವರ ದೈತೋಟ ಗೊಮ್ಮಟ ಮಾಧ್ಯಮ ಮತ್ತು.  ಅಂಶಿ ಪ್ರಸನ್ನಕುಮಾರ್ ಡಿವಿಜಿ ಪ್ರಶಸ್ತಿಯನ್ನು ಪ್ರಧಾನ ಮಾಡಲಾತಿತು. ಇದೇವೇಳೆ’ ಮಾಧ್ಯಮ’ ಸ್ಮರಣ ಸಂಚಿಕೆಯನ್ನು ಮುಖ್ಯಮಂತ್ರಿಯವರು ಬಿಡುಗಡೆಗೊಳಿಸಿದರು. ಶ್ರೀಲಂಕ, ಕೊಲಂಬೋಅಂತರಾಷ್ಟ್ರೀಯಪೊಟೋಜರ್ನಲಿಸ್ಟ್ ಗೀತಿಕಾತಾಲೂಕದಾರ್,ಶ್ರೀಲಂಕ ಕೊಲಂಬೋ ಡೈಲಿ ಮಿರರ್ ನ ಸುದ್ದಿ ಸಂಪಾದಕ ಕುರುಲು ಕೂಜಾಣ ಕರಿಯಕರವಣ,ನೇಪಾಳ ಕಠ್ಮಂಡು ಮೆಟ್ರೋ ಎಫ್.ಎಂ. ನ ನ್ಯೂಸ್ ಎಡಿಟರ್ ಅಶೋಕ ಸಿಲ್ವಲ್, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅವರು ಪ್ರಸ್ತಾವಿಸಿ,ಸ್ವಾಗತಿಸಿದರು.ಹಾಗೆಯೇ ವಿವಿಧ ಬೇಡಿಕೆಗಳ ಮನವಿಯನ್ನು ಮುಖ್ಯಮಂತ್ರಿಯವರಿಗೆ ಸಲ್ಲಿಸಲಾಯಿತು.

ಗೋಷ್ಠಿಗಳು : ಮಾಧ್ಯಮ ಮತ್ತು ರಾಜಕಾರಣ,  ಹಾಗೂ ಸಮೂಹ ಮಾಧ್ಯಮ, ಸ್ವಯಂ ನೀತಿ ಸಂಹಿತೆ ವಿಚಾರದ ಕುರಿತು ಗೋಷ್ಠಿಗಳು ನಡೆಯಿತು.

More articles

Latest article