


ಬಂಟ್ವಾಳ: ಬಂಟ್ವಾಳ ತಾಲೂಕು ಶ್ರೀ ಶಾರದಾಂಬಿಕಾ ಭಜನಾ ಸಂಘ ಶಾರದಾ ನಗರ ಸಜೀಪ ಮುನ್ನೂರು ಅದರ 60ನೇ ವಾರ್ಷಿಕೋತ್ಸವದ ಅಂಗವಾಗಿ ಬರ್ಪೆ ಫ್ರೆಂಡ್ಸ್ ಯೂನಿಯನ್ ಶಾರದಾನಗರ ಇದರ ವತಿಯಿಂದ ರಾಷ್ಟ್ರ ಮಟ್ಟದ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಎಳೆಯ ಕ್ರೀಡಾಪಟು ತನ್ಮಯ ಎಂ. ಕೊಟ್ಟಾರಿ ಅವರನ್ನು ಎಂ.ಸುಬ್ರಹ್ಮಣ್ಯ ಭಟ್ ಸಮ್ಮಾನಿಸಿದರು.
ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ಎಂ.ಮಹಾಬಲ ಕೊಟ್ಟಾರಿ, ಜಯಂತ ಗಟ್ಟಿ, ಅರವಿಂದ ಭಟ್, ಎಸ್.ಪದ್ಮನಾಭ ಕೊಟ್ಟಾರಿ, ಸೋಮಶೇಖರ, ವಿಶ್ವನಾಥ ಕೊಟ್ಟಾರಿ ಮತ್ತಿತರು ಉಪಸ್ಥಿತರಿದ್ದರು.


