Tuesday, September 26, 2023

ವಿವಿಧ ಸಾಧಕರಿಗೆ ಸನ್ಮಾನ

Must read

ಬಂಟ್ವಾಳ : ವಿವಿಧ ಕ್ಷೇತ್ರದಲ್ಲಿ ಸಾಧನೆಗೈದವರನ್ನು    ಮೊಡಂಕಾಪುವಿನ  ಪರಾರಿಗುತ್ತು ವಿನಲ್ಲಿ ಜರಗಿದ ಯಕ್ಷಗಾನ ಬಯಲಾಟದ ರಂಗಮಂಟಪದಲ್ಲಿ ಸನ್ಮಾನಿಸಲಾಯಿತು. ನಿವೃತ್ತ ಮುಖ್ಯೊಪಾಧ್ಯಾಯ  ವಿಲಿಯಂ ಆಂಡ್ರೂ ಪಿಂಟೋ , ನಿವೃತ್ತ  ಅಧ್ಯಾಪಕರಾದ ಕೆ.ಸೀತಾರಾಮ ಭಟ್, ಟಿ.ಬಾಬು ಗೌಡ, ಎಚ್.ನಾರಾಯಣ ಹೆಬ್ಬಾರ್ ಮತ್ತು ತೆಂಕುತಿಟ್ಟಿನ ಪ್ರಸಿದ್ಧ ಬಣ್ಣದ ವೇಷಧಾರಿ ಸದಾಶಿವ ಶೆಟ್ಟಿಗಾರ್ ಸಿದ್ದಕಟ್ಟೆ ರವರನ್ನು  ಸನ್ಮಾನಿಸಿ ಅಭಿನಂದಿಸಲಾಯಿತು. ಬಂಟ್ವಾಳ     ಎಸ್.ವಿ.ಎಸ್ ಕಾಲೇಜಿನ  ಪ್ರಾಂಶುಪಾಲ ಪಾಂಡುರಂಗ ನಾಯಕ್ ಸನ್ಮಾನಿಸಿದರು..ಈ ಸಂದರ್ಭದಲ್ಲಿ ರಾಜೀವ್ ಆಳ್ವ ಪೊನ್ನೋಡಿ, ನಿವೃತ್ತ ಬ್ಯಾಂಕ್ ಅಧಿಕಾರಿ ಜಯಂತ್ ಶೆಟ್ಟಿ, ದಾಸಪ್ಪ ಶೆಟ್ಟಿ ಬಿ.ಸಿ.ರೋಡ್, ರಮೇಶ್ ಪೂಂಜ ಮರವೂರು, ಕರುಣಾಕರ ಶೆಟ್ಟಿ, ಶಂಕರ್ ಶೆಟ್ಟಿ, ದಿವಾಕರ್ ಶೆಟ್ಟಿ, ಭಾಸ್ಕರ್ ಶೆಟ್ಟಿ, ಮಾಜಿ ಪುರಸಭಾ ಅಧ್ಯಕ್ಷ ರಾಮಕೃಷ್ಣ ಆಳ್ವ, ನವೀನ್ ಶೆಟ್ಟಿ, ಮುಂಡಾಜೆಗುತ್ತು, ಪ್ರಕಾಶ್ ಬಿ.ಶೆಟ್ಟಿ ಶ್ರೀ ಶೈಲ ತುಂಬೆ, ಸತೀಶ್ ಶೆಟ್ಟಿ ಮೊಡಂಕಾಪು, ಸದಾಶಿವ ಪೂಂಜ, ಗಣೇಶ್ ಶೆಟ್ಟಿ, ಕಿಶೋರ್ ಭಂಡಾರಿ ಬೆಳ್ಳೂರು ಮತ್ತಿತರರು ಉಪಸ್ಥಿತರಿದ್ದರು. ಇದೇ ವೇಳೆ ಶ್ರೀ ಕೋದಂಡರಾಮ ಕೃಪಾ ಪೋಷಿತ ಯಕ್ಷಗಾನ ಮಂಡಳಿ ಹನುಮಗಿರಿ ಇವರಿಂದ   ಯಕ್ಷಗಾನ ಬಯಲಾಟ ನಡೆಯಿತು.

More articles

Latest article