ಬೆಳ್ತಂಗಡಿ: ಮಾರ್ಚ್ 8 ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಜೇಸಿಐ ಬೆಳ್ತಂಗಡಿ ಮಂಜುಶ್ರೀ ಆತಿಥ್ಯದಲ್ಲಿ ಬೆಳ್ತಂಗಡಿಯ ಮುಖ್ಯ ರಸ್ತೆಯಲ್ಲಿ ಮಹಿಳಾ ಆರೋಗ್ಯ ಸ್ವಚ್ಛತೆಯ ಅರಿವಿಗಾಗಿ ರನ್ ಫಾರ್ ನೈನ್ ಎನ್ನುವ ಕಾಲ್ನಡಿಗೆ ಜಾಥಾವನ್ನು ಹಮ್ಮಿಕೊಳ್ಳಲಾಯಿತು. ಶಾಸಕರಾದ ಹರೀಶ್ ಪೂಂಜಾ ಜಾಥಾಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಜೇಸಿ ವಲಯ ಹದಿನೈದರ ಉಪಾಧ್ಯಕ್ಷರುಗಳಾದ ರಾಯನ್ ಉದಯ್ ಕ್ರಾಸ್ತಾ ಮತ್ತು ಜಯೇಶ್ ಬರೆಟ್ಟೊ ಜೊತೆಯಾದರು. ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಪ್ರಿಯಾ ಆಗ್ನೆಸ್, ತಾಲ್ಲೂಕು ಪಂಚಾಯತ್ ಸಂಯೋಜಕರಾದ ಜಯಾನಂದ್ ಲಾೖಲ, ನಗರ ಪಂಚಾಯತ್ ಸದಸ್ಯರಾದ ಜಯಾನಂದ ಗೌಡ ಮತ್ತು ಶರತ್ ಕುಮಾರ್, ರನ್ ಫಾರ್ ನೈನ್ ಕಾರ್ಯಕ್ರಮದ ರಾಯಭಾರಿ ನಟಿ ನಿರೂಪಕಿ ಸೌಜನ್ಯ ಹೆಗ್ಡೆ ಉದಕ ಪತ್ರಿಕೆ ಸಂಪಾದಕ ರಾಜೆಶ್ ಪುಂಜಾಲಕಟ್ಟೆ ಮುಂತಾದವರು ಉಪಸ್ಥಿತರಿದ್ದರು.
ಕಾಲ್ನಡಿಗೆ ಜಾಥಾವು ಸಂತೆಕಟ್ಟೆ ಅಯ್ಯಪ್ಪ ಗುಡಿಯಿಂದ ಪ್ರಾರಂಭಗೊಂಡು ಬೆಳ್ತಂಗಡಿ ಬಸ್ ನಿಲ್ದಾಣದ ಮೂಲಕವಾಗಿ ಸಾಗಿ ಜೆಸಿ ಭವನದಲ್ಲಿ ಅಂತ್ಯಗೊಂಡಿತು.


ಈ ಜಾಥಾದಲ್ಲಿ ಜೆಸಿಐ ಮಡಂತ್ಯಾರು, ಮಹಿಳಾ ವೃಂದ ಬೆಳ್ತಂಗಡಿ, ಅನುಗ್ರಹ ಟ್ರೈನಿಂಗ್ ಕಾಲೇಜು ಬೆಳ್ತಂಗಡಿ, ಗುರುದೇವ ಕಾಲೇಜು ಬೆಳ್ತಂಗಡಿ, ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ತಂಗಡಿ, ಬೀಟ್ ರಾಕರ್ಸ್ ಡ್ಯಾನ್ಸ್ ಅಕಾಡೆಮಿ ಬೆಳ್ತಂಗಡಿ, ತಾಲ್ಲೂಕು ಆರೋಗ್ಯ ಕೇಂದ್ರ ಬೆಳ್ತಂಗಡಿ, ಪವರ್ ಆನ್ ಬ್ಯಾಟರಿ ಹಾಗೂ ಮುಂತಾದ ಸಂಘ ಸಂಸ್ಥೆಗಳು ಸಹಭಾಗಿತ್ವ ವಹಿಸಿದರು.
ಜಾಥಾದ ಕೊನೆಯಲ್ಲಿ ಬೆಳ್ತಂಗಡಿ ಜೇಸಿ ಭವನದಲ್ಲಿ ಸಮಾರೋಪ ಸಭೆ ನಡೆಸಲಾಯಿತು ಜೇಸಿರೇಟ್ ಅಧ್ಯಕ್ಷೆ ಆಶಾಲತಾ ಪ್ರಶಾಂತ್ ಇವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜೇಸಿಐ ಬೆಳ್ತಂಗಡಿ ಅಧ್ಯಕ್ಷ ಪ್ರಶಾಂತ್ ಲಾೖಲ, ನಿಕಟ ಪೂರ್ವ ಅಧ್ಯಕ್ಷ ಕಿರಣ್ ಶೆಟ್ಟಿ ವಲಯ ಉಪಾಧ್ಯಕ್ಷ ರಾಯನ್ ಉದಯ್ ಕ್ರಾಸ್ತಾ ವಲಯ ವ್ಯವಹಾರ ವಿಭಾಗದ ನಿರ್ದೇಶಕ ಚಿದಾನಂದ ಇಡ್ಯಾ, ಕಾರ್ಯದರ್ಶಿ ಗಣೇಶ್ ಬಿ ಶಿರ್ಲಾಲ್, ಜೆಜೆಸಿ ಅಧ್ಯಕ್ಷ ವಿನಾಯಕ ಪ್ರಸಾದ್ ಉಪಸ್ಥಿತರಿದ್ದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪ್ರಿಯಾ ಆಗ್ನೆಸ್ ಅವರು ಮಹಿಳೆಯರ ಹಕ್ಕುಗಳು ಮತ್ತು ಇತರ ಅಂಕಿ ಅಂಶಗಳೊಂದಿಗೆ ಮಾಹಿತಿ ನೀಡಿ ಹೆಣ್ಣು ಮಕ್ಕಳ ರಕ್ಷಣೆ ಮತ್ತು ಹೊಣೆ ಇದರ ಪ್ರಮಾಣ ವಚನ ಬೋಧಿಸಿದರು. ಜೆಸಿಐ ರನ್ ಫಾರ್ ನೈನ್ ಕಾರ್ಯಕ್ರಮದ ರಾಯಭಾರಿ ಜೇಸಿ ಸೌಜನ್ಯ ಹೆಗ್ಡೆಯವರು ಪವರ್ ಆಫ್ ವಿಮನ್ ವಿಷಯದಲ್ಲಿ ಮಾತನಾಡಿ ಮಹಿಳೆಯರು ಯಾವುದೇ ಮೀಸಲಾತಿಯನ್ನು ನಿರೀಕ್ಷಿಸದೆ ಸಾಧಿಸಲು ಪ್ರೇರಣೆ ನೀಡಿದರು. ಈ ಸಂದರ್ಭದಲ್ಲಿ ಇಂದಬೆಟ್ಟುವಿನ ಮಹಿಳಾ ರಿಕ್ಷಾ ಚಾಲಕಿ ಶ್ರೀಮತಿ ಹರಿಣಿ ರತ್ನಾಕರ ಗೌಡ ಇವರನ್ನು ಸನ್ಮಾನಿಸಲಾಯಿತು. ದೀಕ್ಷಾ ಗಣೇಶ್ ಇವರ ವೇದಿಕೆ ಆಹ್ವಾನದೊಂದಿಗೆ ಶುಭ ಸ್ವರೂಪ್ ಇವರು ಜೇಸಿ ವಾಣಿ ಉದ್ಘೋಷಿಸಿದರು. ಸಭೆಗೆ ಅತಿಥಿಗಳನ್ನು ಶಾಂತ ಬಂಗೇರ ಪರಿಚಯಿಸಿದರೆ ಸನ್ಮಾನ ಪತ್ರವನ್ನು ಸುಭಾಷಿಣಿ ವಾಚಿಸಿದರು. ಜೇಸಿರೇಟ್ ಅಧ್ಯಕ್ಷೆ ಆಶಾಲತಾ ಪ್ರಶಾಂತ್ ಸ್ವಾಗತಿಸಿ ಕಾರ್ಯಕ್ರಮದ ಸಂಯೋಜಕಿ ಹೇಮಾವತಿ ಕೆ .ಇವರು ವಂದಿಸಿದರು. ಬೆಳ್ತಂಗಡಿಯ ಜನತೆ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಪ್ರಕಟಣೆ- ಜೇಸಿ ರಾಜೇಶ್ ಪಿ. ಪುಂಜಾಲಕಟ್ಟೆ
ಪ್ರಧಾನ ಸಂಪಾದಕರು ಉದಕ ಪತ್ರಿಕೆ

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here