ವಿಟ್ಲ: ವಿಟ್ಲ ರಾಷ್ಟ್ರಭಕ್ತ ಬಾಂಧವರಿಂದ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವರ ಸಾನಿಧ್ಯದಲ್ಲಿ ದೇಶದ ಶಾಂತ, ಕ್ಷೇಮ, ಉನ್ನತಿಗಾಗಿ, ಅಯೋಧ್ಯೆಯಲ್ಲಿ ಶೀಘ್ರವಾಗಿ ಶ್ರೀರಾಮ ಮಂದಿರದ ನಿರ್‍ಮಾಣಕ್ಕಾಗಿ ಹಾಗೂ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವ ಸಂಕಲ್ಪದೊಂದಿಗೆ ಶ್ರೀರುದ್ರಯಾಗ, ಶಿವಪಂಚಾಕ್ಷರೀ ಹವನ ಮತ್ತು ಸಾಮೂಹಿಕ ಶ್ರೀ ಶಿವಪಂಚಾಕ್ಷರೀ ಜಪ ನಡೆಯಿತು.
ಅಮೈ ಗಿರೀಶ್ ಭಟ್ ಇವರ ನೇತೃತ್ವದಲ್ಲಿ ನಡೆದ ಈ ಕಾರ್‍ಯಕ್ರಮದಲ್ಲಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಲ್ ಎನ್ ಕೂಡೂರು, ವಿಟ್ಲ ಅರಮನೆಯ ಕೃಷ್ಣಯ್ಯ ಕೆ. ವಿಟ್ಲ ಮೊದಲಾದವರು ಭಾಗವಹಿಸಿದ್ದರು.
