Saturday, October 21, 2023

ಪರಂಗಿಪೇಟೆ ನಂ.1 ರಿಕ್ಷಾ ಪಾರ್ಕ್ ನ ಉದ್ಘಾಟನೆ

Must read

ಬಂಟ್ವಾಳ: ಶಾಸಕರ ಅನುದಾನದಲ್ಲಿ ಪರಂಗಿಪೇಟೆ ಜಂಕ್ಸನ್ ನಲ್ಲಿ ನೂತನವಾಗಿ 5 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಸುಸಜ್ಜಿತ ಪರಂಗಿಪೇಟೆ ನಂ.1 ರಿಕ್ಷಾ ಪಾರ್ಕ್ ನ ಉದ್ಘಾಟನೆ ಗುರುವಾರ ನಡೆಯಿತು. ಉಸ್ತುವಾರಿ ಸಚಿವ ಯು.ಟಿ.ಖಾದರ್ ಅವರು ರಿಕ್ಷಾ ಪಾರ್ಕ್ ನ್ನು ಉದ್ಘಾಟಿಸಿದರು.


ಬಳಿಕ ಮಾತನಾಡಿದ ಅವರು  ಸರ್ವ ರೀತಿಯ ಪ್ರೀತಿಗೆ ಪಾತ್ರರಾದ ವರು ಅಪತ್ಬಾಂದವರು ರಿಕ್ಷಾ ಚಾಲಕರು , ಅವರ ಸರ್ವಾಂಗೀಣ ಅಭಿವೃದ್ಧಿ ಗೆ ಬೇಕಾದ ಸಕಲ ವ್ಯವಸ್ಥೆ ಗೆ ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಅವರು ಹೇಳಿದರು.
ಎಲ್ಲರ ಪ್ರೀತಿ ವಿಶ್ವಾಸ ಗಳಿಸಿ ಉದ್ಯೋಗ ದಲ್ಲಿ ಮುಂದುವರಿಯಿರಿ ಎಂದು ಅವರು ಹೇಳಿದರು.ರಿಕ್ಷಾ ಚಾಲಕರ ಬಿಸಿಲು ಮಳೆಯ ಸಂಕಷ್ಟ ಕಡಿಮೆ ಮಾಡಲು ಅವಕಾಶ ಅಗಿದೆ ಎಂದರು.

ಬಂಟ್ವಾಳ ಎ.ಎಸ್.ಪಿ. ಸೈದುಲು ಅಡಾವತ್ ,ಮಾತನಾಡಿ ಎಲ್ಲಾ ಚಾಲಕರೂ ಟ್ರಾಫಿಕ್ ರೂಲ್ಸ್ ಪಾಲೋ ಮಾಡಿ, ಶಿಸ್ತು ಬದ್ಧ ವಾದ ರೀತಿಯಲ್ಲಿ ಕೆಲಸ ಮಾಡುವಂತೆ ಅವರು ತಿಳಿಸಿದರು.

ಗ್ರಾಮಾಂತರ ಠಾಣಾ ಎಸ್. ಐ.ಪ್ರಸನ್ನ , ಮಾಜಿ ಜಿ.ಪಂ.ಸದಸ್ಯ ಡಿ.ಸಿ.ಸಿ.ಪ್ರಧಾನ ಕಾರ್ಯದರ್ಶಿ ಉಮ್ಮರ್ ಫಾರೂಕ್ , ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಲಿಡೊಯಾ ಪಿಂಟೋ , ಸದಸ್ಯ ರಾದ ಹಾಶೀರ್ ಪೆರಿಮಾರ್ , ಇಕ್ಬಾಲ್ ಸುಜೀರ್, ಮಹಮ್ಮದ್ ಮೋನು, ಲಕ್ಷ್ಮೀ , ಸುಜಾತ, ರಝಿಯಾ, ರಿಯಾಜ್ ಕುಂಪಣಮಜಲು, ಕಿಶೋರ್ ಸುಜೀರ್, ಜೀನತ್, ಸಮಾಜ ಸೇವಕರಾದ ಇಸ್ಮಾಯಿಲ್ ವಳಚ್ಚಿಲ್, ಮಾಜಿ.ಅಧ್ಯಕ್ಷ ಪ್ರಕಾಶ್ ಚಂದ್ರ ರೈ, ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ಜಾಫರ್ , ಸದಸ್ಯ ರಾದ ಇನ್ಸಾದ್ , ಆಶ್ರಪ್, ಮಾಜಿ ತಾ.ಪಂ.ಸದಸ್ಯ ಆಶಿಪ್ ಇಕ್ಬಾಲ್, ಮುಯ್ಯದ್ದೀನ್ ಜುಮಾ ಮಸೀದಿ ಅಧ್ಯಕ್ಷ ಎಸ್ ಮಹಮ್ಮದ್ ಬಾವ, ಅಮ್ಮೆಮಾರ್ ಮಸೀದಿ ಅಧ್ಯಕ್ಷ ಉಮರಬ್ಬ, ಮಸೀದಿ ಕಾರ್ಯದರ್ಶಿ ಮಜೀದ್ ಪರಂಗಿಪೇಟೆ, ಪ್ರಮುಖರಾದ ಮಜೀದ್ , ಸಲಾಂ ಮಲ್ಲಿ, ಗಪೂರ್ ದುಬೈ, ಎಂ.ಕೆ.ಮಹಮ್ಮದ್, ಅಬುಬಕ್ಕರ್, ಇಂಮ್ತಿಯಾಜ್ ತುಂಬೆ, ವಲಯ ಅಧ್ಯಕ್ಷ ರಫೀಕ್ ಪೆರಿಮಾರ್ ಮತ್ತಿತರರು ಉಪಸ್ಥಿತರಿದ್ದರು.

More articles

Latest article