ಬಂಟ್ವಾಳ: ಮಂತ್ರದೇವತೆ ಕ್ರಿಯೇಷನ್ ಮತ್ತು ಟ್ರೈಪಾಡ್ ಕ್ರಿಯೇಷನ್ ಇವರು ನಿರ್ಮಾಣದ ” ಪೊರ್ಲ ತೆಲಿಕೆ ” ಡ್ರೀಮ್ ಲವ್ ಆಲ್ಬಂ ಸಾಂಗ್ ಬಿಡುಗಡೆ ಗೆ ಸಿದ್ದಗೊಂಡಿದೆ.



ಮಾ.24 ಆದಿತ್ಯವಾರ ಸಂಜೆ ಮಡಂತ್ಯಾರು ಶಿಕ್ಷಕ ರಮೇಶ್ ಮೂಲ್ಯ ಅವರ ಮನೆಯಲ್ಲಿ ಬಿಡುಗಡೆಗೊಳ್ಳಲಿದೆ.
ಪ್ಯಾಕು, ಪ್ಯಾಕು ಖ್ಯಾತಿಯ ಕಾಮಿಡಿ ಕಿಲಾಡಿ ಹಿತೇಶ್ ಕಾಪಿನಡ್ಕ ಅವರು ಈ ಆಲ್ಬಂ ಸಾಂಗ್ ಅನ್ನು ಬಿಡುಗಡೆಗೊಳಿಸಿದ್ದಾರೆ.
ರಕ್ಷಿತ್ ರೈ ಪುಂಜಾಲಕಟ್ಟೆ , ನೀತು ಎನ್ ಶೆಟ್ಟಿ ನಾರಾವಿ ನಟನೆಯ, ಶಿವಶಂಕರ್ ಗೇರುಗಟ್ಟೆ ಅವರ ಗಾಯನದಲ್ಲಿ ಅತ್ಯುತ್ತಮ ಆಲ್ಬಂ ಸಾಂಗ್ ಮೂಡಿ ಬಂದಿದೆ.
ಮಣಿಕ್ ಮಾಲೆ ನಿರ್ದೇಶನ ದಲ್ಲಿ ಅನುಜ್ ಅವರು ಚಿತ್ರೀಕರಣ ನಡೆಸಿದ್ದಾರೆ.
ಜಯರಾಜ್ ಅತ್ತಾಜೆ ಅವರ ಸಹಕಾರದಲ್ಲಿ
ಪಲ್ಗುಣಿ ರೆಕಾರ್ಡಿಂಗ್ ವೇಣೂರು ಇದರ ಮಾಲಕ
ಶಿವು ನಾರಾವಿ ಅವರು ರೆಕಾರ್ಡಿಂಗ್ ಹಾಗೂ ಬಿಕೆ ಕ್ರಿಯೇಷನ್ ವರ್ಕಾಡಿ ಇದರ ಮಾಲಕ ಬಾತು ಕುಲಾಲ್ ಅವರು ಸಂಕಲನ ಮಾಡಿದ್ದಾರೆ.