ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಸಿದ್ಧಕಟ್ಟೆ ಸಮೀಪದ ಇತಿಹಾಸ ಪ್ರಸಿದ್ಧ ಪೂಂಜ ಶ್ರೀ ಪಂಚದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಇದೇ 21ರಿಂದ 25ರತನಕ ವಾರ್ಷಿಕ ಜಾತ್ರಾ ಮಹೋತ್ಸವ ಮತ್ತು ರಥೋತ್ಸವ ನಡೆಯಲಿದೆ.



ಇದೇ 21ರಂದು ಧ್ವಜಾರೋಹಣಗೊಂಡು ಚೆಂಡು ಉತ್ಸವ ಮೂಲಕ ಜಾತ್ರೆ ಆರಂಭಗೊಂಡು 22ರಂದು ದೇವರ ಬಲಿ ಉತ್ಸವ, ಸಂಜೆ ಚೆಂಡು, 23ರಂದು ಬಲಿ ಉತ್ಸವ ಮತ್ತು ಸಂಜೆ ಚೆಂಡು, 24ರಂದು ಮಧ್ಯಾಹ್ನ ಚಂಡಿಕಾಯಾಗ, ಸಂಜೆ ಚೆಂಡು, ರಥೋತ್ಸವ, ಸವಾರಿ ಬಲಿ, ಭೂತ ಬಲಿ, 25ರಂದು ಸಂಜೆ ಚೆಂಡು ಉತ್ಸವ ಮತ್ತು ರಾತ್ರಿ ಕೊಡಮಣಿತ್ತಾಯಿ ದೈವಕ್ಕೆ ಗಗ್ಗರ ಸೇವೆ ನಡೆದು 26ರಂದು ಧ್ವಜಾವರೋಹಣ ನಡೆಯಲಿದೆ. ಪ್ರತಿದಿನ ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.