ಬಂಟ್ವಾಳ: ಲಕ್ಷ ಲಕ್ಷ ಭಕ್ತ ಜನಸಾಗರದ ಮಧ್ಯೆ ಐತಿಹಾಸಿಕ ತಾಯಿ ಪೊಳಲಿ ಶ್ರೀ ರಾಜರಾಜೇಶ್ವರಿಯ ಬ್ರಹ್ಮಕಲಶೋತ್ಸವ ಸಂಪನ್ನಗೊಂಡಿತು.
ಮುಂಜಾನೆಯಿಂದಲೇ ಜನಸಾಗರವೇ ಕ್ಷೇತ್ರ ಕ್ಕೆ ಹರಿದು ಬರುತ್ತಿತ್ತು. ಕಳೆದ ಹತ್ತುದಿನಗಳಿಂದ ಕ್ಷೇತ್ರದಲ್ಲಿ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ವ್ರದ್ದಿಯಾಗುತ್ತಲೇ ಇತ್ತು.
ಮಾ.4 ರಿಂದ ಮಾ13 ಬುಧವಾರ ಇಂದಿನ ದಿನದವರೆಗೂ ಲಕ್ಷಾಂತರ ಭಕ್ತರು ಅಗಮಿಸಿ ದೇವಿಯ ದರ್ಶನ ಪಡೆದು ಪ್ರಸದಾ ಸ್ವೀಕರಿಸಿದ್ದಾರೆ.



ಧಾರ್ಮಿಕ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮಗಳು ಬಲು ಅಚ್ಚುಕಟ್ಟಾಗಿ ನೆರವೇರಿತ್ತು. ಜೊತೆಗೆ ಕ್ಷೇತ್ರ ಕ್ಕೆ ಆಗಮಿಸಿದ ಭಕ್ತರು ದೇವಾಲಯ ದ ಒಳಗೆ ಪ್ರವೇಶ ಮಾಡಿ ದೇವರ ದರ್ಶನ ಪಡೆದು ಬಳಿಕ ಲಘುಉಪಹಾರ ಅನ್ನಸಂತರ್ಪಣೆ , ನೀರಿನ ವ್ಯವಸ್ಥೆ, ಸ್ವಚ್ಚತಾ ಕೆಲಸ, ಪಾರ್ಕಿಂಗ್ ವ್ಯವಸ್ಥೆ , ಉಗ್ರಾಣ ದಲ್ಲಿನ ಅಚ್ಚುಕಟ್ಟಾದ ಜೊಡಣೆ, ಅತಿಥಿಗಳ ಸತ್ಕಾರ ಹೀಗೆ ಒಂದೇ ಎರಡೇ ಎಲ್ಲವೂ ಅದ್ಬುತ ವ್ಯವಸ್ಥೆ, ಯಾವುದು ಒಂದು ಚೂರು ಕೊರತೆಯಾಗದ ರೀತಿಯಲ್ಲಿ ದೇವಿಯ ಅನುಗ್ರಹ ದಂತೆ ಸಾಂಗವಾಗಿ ನೆರವೇರಿದೆ.
ದೇವಿಯ ಶಕ್ತಿಯ ಪ್ರಭಾವದಿಂದ ಇಡೀ ಜಿಲ್ಲೆಯೇ ಬೆರಗಾಗುವ ರೀತಿಯಲ್ಲಿ ಇಲ್ಲಿನ ಬ್ರಹ್ಮಕಲಶೋತ್ಸವ ಸಂಪನ್ನಗೊಂಡಿದೆ.