ಬಂಟ್ವಾಳ:   ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ,ಕೆಪಿಸಿಸಿ ಅಧ್ಯಕ್ಷ ದಿನೇಶ್  ಗುಂಡೂರಾವ್   ಅವರು ಬ್ರಹ್ಮಕಲಶೋತ್ಸವ ಸಂಭ್ರಮದಲ್ಲಿರುವ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಳಕ್ಕೆ ರವಿವಾರ ಭೇಟಿ ನೀಡಿ ದೇವರ ದರ್ಶನ ಪಡೆದರು.
ದೇವಳದ ಅನುವಂಶಿಕ ಆಡಳಿತ ಮೊಕ್ತೇಸರರಾದ ಅಮ್ಮುಂಜೆಗುತ್ತು ಡಾ.ಮಂಜಯ್ಯ ಶೆಟ್ಟಿ,ಮೊಕ್ತೇಸರರಾದ ತಾರನಾಥ ಆಳ್ವ ಉಳಿಪಾಡಿಗುತ್ತು,ಬ್ರಹ್ಮಕಲಶ ಸಮಿತಿ ಅಧ್ಯಕ್ಷ ,ಶಾಸಕ ಯು.ರಾಜೇಶ್ ನಾಯ್ಕ್ ,ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ,ಮಾಜಿ ಸಚಿವ ರಮಾನಾಥ ರೈ,ಕೃಷ್ಣಕುಮಾರ್ ಪೂಂಜಾ ಫರಂಗಿಪೇಟೆ ರವರು,ಮಾಜಿ ಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷರನ್ನು  ಸ್ವಾಗತಿಸಿದರು.  ಉಗ್ರಾಣ, ದೇವಳದ ವೈಭವ, ಮರದ ಕೆತ್ತನೆಯನ್ನು ವೀಕ್ಷಸಿ ಕಣ್ತುಂಬಿಕೊಂಡು,ಮೆಚ್ಚುಗೆ ವ್ಯಕ್ತಪಡಿಸಿದರು. ಅರ್ಚಕರು  ಪ್ರಾರ್ಥಿಸಿ ಪ್ರಸಾದವಿತ್ತರು.  ಶಾಸಕ ಯು.ರಾಜೇಶ್ ನಾಯ್ಕ್ ಅವರು ದೇವಳದ ಸ್ಮರಣಿಕೆ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಇವರಿಗೆ ದೇವಳದ ಇತಿಹಾಸವನ್ನು ವಿವರಿಸಲಾಯಿತು .  ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್, ಎಂಎಲ್ ಸಿ ಗಳಾದ ಐವಾನ್ ಡಿಸೋಜ. ಹರೀಶ್ ಕುಮಾರ್ ,ಜಿಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ,  ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ, ಕೃಪಾ ಆಳ್ವ, ಮಮನಪಾ ಸದಸ್ಯಪ್ರವೀಣ್ ಆಳ್ವ ಮೊದಲಾದವರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here