ಪುಣಚ: ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಇದರ ಆಶ್ರಯಲ್ಲಿ 2018-19 ರ ಸಾಲಿನ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಬೆಂಗಳೂರು ಇವರು ನಡೆಸಿದ ನ್ಯಾಷನಲ್ ಮೆನ್ಸ್ ಕಮ್ ಮೆರಿಟ್ ಸ್ಕಾಲರ್ ಶಿಫ್ (ಎನ್.ಎಮ್.ಎಮ್.ಎಸ್) ಪರೀಕ್ಷೆಯಲ್ಲಿ ಶ್ರೀದೇವಿ ಪ್ರೌಢ ಶಾಲೆಯ ೮ನೇ ತರಗತಿಯ – ಅವನೀಶ್ ಆಯ್ಕೆಯಾಗಿದ್ದು, ಇವರು ಪುಣಚ ಗ್ರಾಮದ ಧೂಮವತಿಮೂಲೆ ನಾರಾಯಣ ಮೂಲ್ಯ ಮತ್ತು ಸುಂದರಿ ದಂಪತಿಗಳ ಪುತ್ರ . ದೀಕ್ಷಾ ಹಿತ್ತಿಲು ಕೃಷ್ಣಪ್ಪ ಪೂಜಾರಿ ಮತ್ತು ಮಲ್ಲಿಕಾ ದಂಪತಿಗಳ ಪುತ್ರಿ. ಶೃಜೇಶ್ ಕುಮಾರ್ ಎಚ್. ಹಿತ್ತಿಲು ಸತೀಶ್ ಮತ್ತು ಹೇಮಲತಾ ದಂಪತಿಗಳ ಪುತ್ರ.


