ಬಂಟ್ವಾಳ: ಕೊಡಗು ಸಂತ್ರಸ್ತರಿಗಾಗಿ ಬೆಂಜನಪದವು ಕೆನರಾ ಎಂಜಿನಿಯರಿಂಗ್ ಕಾಲೇಜಿನ ಎನ್ನೆಸ್ಸೆಸ್ ಘಟಕದ ವತಿಯಿಂದ ಸಂಗ್ರಹಿಸಲಾದ ಆರ್ಥಿಕ ನೆರವನ್ನು ಹಸ್ತಾಂತರಿಸುವ ಸರಳ ಕಾರ್ಯಕ್ರಮ ಮಡಿಕೇರಿಯ ಸೇವಾ ಭಾರತಿ ಕಾರ್ಯಾಲಯದಲ್ಲಿ ನಡೆಯಿತು.
ಕೊಡಗಿನ ಸಂತ್ರಸ್ತರ ಪೈಕಿ ಆಯ್ದ 9 ಕುಟುಂಬಗಳಿಗೆ ನೇರವಾಗಿ ಈ ನೆರವನ್ನು ಹಸ್ತಾಂತರಿಸಲಾಯಿತು. ಕೊಡಗಿನಲ್ಲಿ ನೆರೆ ಪರಿಸ್ಥಿತಿಯ ಬಳಿಕ ನಡೆದಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆಯೂ ಕೂಡಾ ಈ ಸಂದರ್ಭ ಸಂತ್ರಸ್ತರ ಮೂಲಕ ಮಾಹಿತಿ ಸಂಗ್ರಹಿಸಲಾಯಿತು. ಸಂತ್ರಸ್ತರ ಪರವಾಗಿ ರಾಜು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಸೇವಾ ಭಾರತಿ ಮಡಿಕೇರಿ ವಲಯ ಸಂಯೋಜಕ ಚಂದ್ರ,ಕೋಶಾಧಿಕಾರಿ ಶಿವಾಜಿ, ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಕೆ.ಪಿ.ಜಗದೀಶ್, ಎ.ಬಿ.ವಿ.ಪಿ. ಕಾರ್ಯದರ್ಶಿ ಮನುದೇವ ಪಿ.ವೈ, ಕಾಲೇಜಿನ ಎನ್ನೆಸ್ಸೆಸ್ ಘಟಕದ ಸಂಯೋಜಕ ನಾರಾಯಣ ಸ್ವಾಮಿ, ಸಹ ಪ್ರಾಧ್ಯಾಪಕ ಸಂದೀಪ್, ವಿದ್ಯಾರ್ಥಿ ಸಂಚಾಲಕರುಗಳಾದ ಆದರ್ಶ್, ಅಕ್ಷಯ್ ಕಾಮತ್, ಸತ್ಯನಾರಾಯಣ ಭಟ್ ಉಪಸ್ಥಿತರಿದ್ದರು.