Sunday, October 22, 2023

ಮಾ.31: ನಯನಾಡಿನಲ್ಲಿ ಬೃಹತ್ ರಕ್ತದಾನ ಶಿಬಿರ

Must read

ಬಂಟ್ವಾಳ: ಬಂಟ್ವಾಳ ತಾಲೂಕು ನಯನಾಡು ಶಶಾಂಕ್ ಕ್ಯಾಶ್ಯೂ ಫ್ಯಾಕ್ಟರಿ, ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ, ಶ್ರೀ ಶಾರದೋತ್ಸವ ಸಮಿತಿ ಇರ್ವತ್ತೂರು, ಪಿಲಾತಬೆಟ್ಟು ವ್ಯ.ಸೇ.ಸ. ಬ್ಯಾಂಕ್ ಪುಂಜಾಲಕಟ್ಟೆ, ಶ್ರೀ ರಾಮ ಯುವಕ ಸಂಘ ನಯನಾಡು, ರೋಟರಿ ಕ್ಲಬ್ ಮಡಂತ್ಯಾರ್, ಶಿವಾಜಿ ಫ್ರೆಂಡ್ಸ್ ಎಡ್ತೂರುಪದವು ಇವರ ವತಿಯಿಂದ ಮಂಗಳೂರು ಕೆ.ಎಂ.ಸಿ. ಆಸ್ಪತ್ರೆ ಸಹಕಾರದಲ್ಲಿ ಬೃಹತ್ ರಕ್ತದಾನ ಶಿಬಿರ ನಯನಾಡು ಶಶಾಂಕ್ ಕ್ಯಾಶ್ಯೂ ಫ್ಯಾಕ್ಟರಿ ವಠಾರದಲ್ಲಿ ಮಾ.31ರಂದು ಜರಗಲಿದೆ.
ಬಂಟ್ವಾಳ ಜನ ಜಾಗೃತಿ ವೇದಿಕೆ ನಿಕಟಪೂರ್ವ ಅಧ್ಯಕ್ಷ ಪ್ರಕಾಶ್ ಕಾರಂತ್ ಅವರು ಶಿಬಿರವನ್ನು ಉದ್ಘಾಟಿಸಲಿರುವರು. ಅಮೃತ ಸಂಜೀವಿನಿ ಮಂಗಳೂರು ಸಂಚಾಲಕ ಕೆ.ಆರ್. ಶೆಟ್ಟಿ ಅಧ್ಯಕ್ಷತೆ ವಹಿಸಲಿರುವರು. ಮತ್ತಿತರ ಗಣ್ಯರು ಅತಿಥಿಗಳಾಗಿ ಭಾಗವಹಿಸಲಿರುವರು ಎಂದು ಪ್ರಕಟನೆ ತಿಳಿಸಿದೆ.

More articles

Latest article