ಬಂಟ್ವಾಳ: ಇಲ್ಲಿನ ಶ್ರೀ ಮುರುಘೇಂದ್ರ ಮಿತ್ರ ಮಂಡಳಿ ಮತ್ತು ಶ್ರೀ ಮುರುಘೇಂದ್ರ ವನಿತಾ ಸಮಾಜ ಇದರ ಆಶ್ರಯದಲ್ಲಿ , ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಗಳೂರು ಇವರ ಸಹಕಾರದೊಂದಿಗೆ ಸಂಘದ ಸ್ಥಾಪಕಾಧ್ಯಕ್ಷ ದಿ. ಪದ್ಮ ಮೂಲ್ಯ ಅನಿಲಡೆ ಅವರ ಸ್ಮರಣಾರ್ಥ ಒಂದು ವಾರ ಕಾಲ ನಡೆದ ದ.ಕ.,ಉಡುಪಿ,ಕಾಸರಗೋಡು ಜಿಲ್ಲಾ ಮಟ್ಟದ ತುಳು ನಾಟಕ ಸ್ಪರ್ಧೆಯಲ್ಲಿ ಕಾರ್ಕಳ ಬಲೂರು ಚೈತನ್ಯಕಲಾವಿದರು ತಂಡದ ಮೇ 22 ನಾಟಕ ಪ್ರಥಮ ಸ್ಥಾನ ಪಡೆದಿದೆ.
ಅಭಿನಯ ಕಲಾವಿದರು ಉಡುಪಿ ತಂಡದ ಬರಂದೆ ಕುಲ್ಲಾಯೆ ನಾಟಕ ದ್ವಿತೀಯ ಸ್ಥಾನ ಮತ್ತು ತುಳುವೆರೆಉಡಲ್ ಜೋಡುಕಲ್ಲು ತಂಡದ ಶ್ರೀಮತಿ ನಾಟಕ ತೃತೀಯ ಸ್ಥಾನ ಪಡೆದಿದೆ. ಮಾ.2ರಂದು ಸಂಜೆ ನಡೆದ ಸಮಾರೋಪದಲ್ಲಿ ಪ್ರಶಸ್ತಿ ವಿತರಿಸಲಾಯಿತು.
ಬೆಂಗಳೂರು ಜಿಲ್ಲಾ ನ್ಯಾಯಾಽಶ ದಿನೇಶ್ ಹೆಗ್ಡೆ ಬದ್ಯಾರು ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಮಾಜಿಕ ಸೇವಾ ಉದ್ದೇಶ ಹೊಂದಿದ ಸಂಘ ಸಂಸ್ಥೆಗಳಿಂದ ಯುವ ಜನತೆ ಉತ್ತಮ ದಾರಿಯಲ್ಲಿ ನಡೆಯಲು ಪ್ರೇರಣೆ ನೀಡುವುದರ ಜೊತೆ ಸಮಾಜದ ಅಭಿವೃದ್ಧಿಗೆ ಕಾರಣವಾಗುವುದು. ಪುಂಜಾಲಕಟ್ಟೆಯಲ್ಲಿ ಇಂತಹ ಸಂಘ ಸಂಸ್ಥೆಗಳ ಕಾರ್ಯ ಇತರರಿಗೆ ಮಾದರಿಯಾಗಿದೆ ಎಂದು ಹೇಳಿದರು.
ಯಕ್ಷಧ್ರುವ ಪಟ್ಲ ಫೌಂಡೇಶನ್ ಸ್ಥಾಪಕಾಧ್ಯಕ್ಷ ಸತೀಶ್ ಶೆಟ್ಟಿ ಪಟ್ಲ ಅವರು ಮಾತನಾಡಿ, ಕಲಾವಿದರಿಗೆ ಪ್ರೋತ್ಸಾಹ ನೀಡುವುದರಿಂದ ಕಲೆಯ ಬೆಳವಣಿಗೆ ಸಾಧ್ಯ ಎಂದ ಅವರು ದೇಶದ ಗಡಿ ಕಾಯುವ ಯೋಧರನ್ನು ಗುರುತಿಸಿ ಗೌರವಿಸಬೇಕು.ಇಂತಹ ಕಾರ್ಯಗಳನ್ನು ಸಂಘ ಸಂಸ್ಥೆಗಳು ನಡೆಸಿದಾಗ ಇತರರಿಗೆ ಪ್ರೇರಣೆಯಾಗುವುದು ಎಂದು ಹೇಳಿದರು.
ಬಂಟ್ವಾಳ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಹರೀಶ್ ಮಾಂಬಾಡಿ ಅವರು ಮಾತನಾಡಿ, ಊರಿನ ಅಭಿವೃದ್ಧಿಯಲ್ಲಿ ಸಾಂಸ್ಕೃತಿಕ ಬೆಳವಣಿಗೆಯೂ ಮಹತ್ವದ್ದಾಗಿದೆ. ಕಲೆ, ಸಂಸ್ಕೃತಿಗೆ ಉತ್ತೇಜನ ನೀಡುವುದರಿಂದ ಸಾಮಾಜಿಕ ಬದಲಾವಣೆಗಳಾಗುತ್ತದೆ. ಇದಕ್ಕೆ ಸದಭಿರುಚಿಯ, ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಉತ್ತಮ ನಾಟಕ, ಸಿನಿಮಾಗಳ ರಚನೆಯಾಗಲಿ ಎಂದು ಹೇಳಿದರು.
ತೀರ್ಪುಗಾರರ ಪರವಾಗಿ ಮಾತನಾಡಿದ ಶಿಕ್ಷಕ ರಾಮಚಂದ್ರ ರಾವ್ ಅವರು, ಜೀವನದಲ್ಲಿ ಕಲೆ ಅವಿನಾಭಾವ ಸಂಬಂಧ ಹೊಂದಿದೆ. ನಾಟಕ ಕಲೆ ಮಾನವನ ಉನ್ನತಿಗೆ ಅದ್ಭುತ ಮಾಧ್ಯಮವಾಗಿದೆ. ಕಲಾವಿದರಿಗೆ ಸೃಜನ ಶೀಲತೆ ಮತ್ತು ಬದ್ಧತೆ ಅಗತ್ಯ ಎಂದು ಹೇಳಿದರು.
ಬಂಟ್ವಾಳ ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಸುದರ್ಶನ ಜೈನ್,ದ.ಕ. ಮತ್ತು ಉಡುಪಿ ಜಿಲ್ಲಾ ಹಾಪ್ ಕಾಮ್ಸ್ ಅಧ್ಯಕ್ಷ ಲಕ್ಷ್ಮಿ ನಾರಾಯಣ ಉಡುಪ,ಬಂಟ್ವಾಳ ಅಮೆಚೂರ್ ಕಬಡ್ಡಿ ಎಸೋಸಿಯೇಶನ್ ಅಧ್ಯಕ್ಷ ಬೇಬಿ ಕುಂದರ್,ವಾಮದಪದವು ವ್ಯ.ಸೇ. ಸ. ಸಂಘದ ಅಧ್ಯಕ್ಷ ಯಶೋಧರ ಶೆಟ್ಟಿ ದಂಡೆ, ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಗೋಪಾಲ್ ಅಂಚನ್,ಬುರೂಜ್ ಇಂಗ್ಲಿಷ್‌ಮೀಡಿಯಂ ಸ್ಕೂಲ್‌ಸಂಚಾಲಕ ಶೇಖ್ ರಹಮತ್ತುಲ್ಲಾ, ಬೆಳ್ತಂಗಡಿ ಎಪಿಎಂ ಸಿ ಸದಸ್ಯೆ ಸೆಲೆಸ್ಟಿನ್ ಸಿಲ್ವಿಯಾ ಡಿಸೋಜ, ವಸ್ತ್ರೊ ದ್ಯಮಿ ಮೋಹನ್ ಚೌಧುರಿ, ಉದ್ಯಮಿ ಅಬ್ದುಲ್ ಶುಕೂರ್ ಸಂಘದ ಗೌರವಾಧ್ಯಕ್ಷ ಮೋಹನ ಸಾಲ್ಯಾನ್, ವನಿತಾ ಸಮಾಜದ ಅಧ್ಯಕ್ಷೆ ಆಶಾ ದಿನಕರ ಶೆಟ್ಟಿ ಗೌರವಾಧ್ಯಕ್ಷೆ ಅಮೃತಾ ಎಸ್.ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಕಲಾವಿದೆ ಕವಿತಾ ದಿನಕರ್, ಸತೀಶ್ ಶೆಟ್ಟಿ ಪಟ್ಲ, ತೀರ್ಪುಗಾರರಾದ ಡಿ.ಎಸ್.ಬೋಳೂರು,ರಾಮಚಂದ್ರ ರಾವ್,ಬಿ.ಚೇತನ್ ರೈ ಮಾಣಿ ಅವರನ್ನು ಸಮ್ಮಾನಿಸಲಾಯಿತು.
ಸಂಘದ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಸ್ವಾಗತಿಸಿದರು. ರಾಜೇಂದ್ರ ಕೆ.ವಿ.ಅವರು ವಂದಿಸಿದರು. ಉಮಾ ಡಿ. ಗೌಡ ಸನ್ಮಾನ ಪತ್ರ ವಾಚಿಸಿದರು. ದೇವದಾಸ್ ಕಜೆಕಾರ್ ಕಾರ್ಯಕ್ರಮ ನಿರೂಪಿಸಿದರು.
ಫಲಿತಾಂಶ: ನಿರ್ದೇಶನ- ಪ್ರಥಮ: ಪ್ರಸನ್ನ ಶೆಟ್ಟಿ ಬಲೂರು (ಮೇ 22-ಚೈತನ್ಯ ಕಲಾವಿದರು ಬಲೂರು) ದ್ವಿತೀಯ: ದಿನೇಶ್ ಅತ್ತಾವರ್-( ಬರಂದೆ ಕುಲ್ಲಾಯೆ-ಅಭಿನಯ ಕಲಾವಿದರು ಉಡುಪಿ). ಸಂಗೀತ- ಪ್ರ: ಬರಂದೆ ಕುಲ್ಲಾಯೆ, ದ್ವಿ: ಶ್ರೀಮತಿ . ರಂಗವಿನ್ಯಾಸ-ಪ್ರ: ಚೈತನ್ಯ ಕಲಾ ಆರ್ಟ್ಸ್, ದ್ವಿ: ಅಭಿನಯ ಕಲಾವಿದರು. ಪ್ರಸಾದನ-ಪ್ರ: ಚೈತನ್ಯ, ದ್ವಿ: ತುಳುವೆರೆ ಉಡಲ್) ಶ್ರೇಷ್ಠ ನಟ-ಪ್ರ: ವೇಣು ಶೆಟ್ಟಿ ಮೂಲ್ಕಿ ( ಶ್ರೀಮತಿ ),ದ್ವಿ: ದೇವಿಪ್ರಸಾದ್ ಕೆಮ್ಮಣ್ಣು(ಬರಂದೆ ಕುಲ್ಲಯೆ). ಶ್ರೇಷ್ಟ ನಟಿ-ಪ್ರ: ಪೂಜಾ ಬಲೂರು(ಬರಂದೆ ಕುಲ್ಲಾಯೆ),ದ್ವಿ: ಸುರೇಶ್ ಜೋಡುಕಲ್ಲು (ಶ್ರೀಮತಿ). ಶ್ರೇಷ್ಠ ಹಾಸ್ಯ ನಟ-ಪ್ರ: ರಾಕೇಶ್ ಕಟಪಾಡಿ(ಬರಂದೆ ಕುಲ್ಲಾಯೆ),ದ್ವಿ: ಹರೀಶ್ ಜೋಡುರಸ್ತೆ(ಮೇ 22). ಶ್ರೇಷ್ಠ ಹಾಸ್ಯ ನಟಿ: ಯಾರೂ ಪರಿಗಣಿತವಾಗಿಲ್ಲ . ಶ್ರೇಷ್ಠ ಪೋಷಕ ನಟ-ಪ್ರ: ರಮಾ ಬಿ.ಸಿ.ರೋಡ್ (ಮಗೆ ದುಬಾಯಿಡ್),ದ್ವಿ: ದಿನೇಶ್ ಕಾಜರ ಬಲ್(ಮೇ.22), ಶ್ರೇಷ್ಠ ಪೋಷಕ ನಟಿ-ಪ್ರ: ರಾಕೇಶ್ ಹೂಡೆ(ಮೇ ೨೨. ),ದ್ವಿ: ಬಾಲಕೃಷ್ಣ ಗಟ್ಟಿ (ಶ್ರೀಮತಿ).೧೪ ಮಂದಿಗೆ ತೀರ್ಪುಗಾರರ ವಿಶೇಷ ಬಹುಮಾನ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here