Friday, April 5, 2024

ಮಗು ಮಾರಾಟ

ಬಂಟ್ವಾಳ: ಮಹಿಳೆಯೊಬ್ಬರು ತನ್ನ ಮಗುವನ್ನು ಮಾರಾಟಮಾಡಲೆತ್ನಿಸಿದ ಘಟನೆ ಮಣಿನಾಲ್ಕೂರು ಗ್ರಾಮದ ನೇಲ್ಯಪಲ್ಕೆ ಎಂಬಲ್ಲಿ ನಡೆದಿದೆ. ಇಲ್ಲಿನ ನಿವಾಸಿಯಾಗಿರುವ ಮಹಿಳೆಗೆ ಅವಳಿ ಮಕ್ಕಳು ಜನಿಸಿದ್ದು ಈ ಪೈಕಿ ಒಂದ ಮಗುವನ್ನು ಪರಿಚಯಸ್ಥರಿಗೆ ಮಾರಾಟ ಮಾಡಲು ಯತ್ನಿಸಿರುವ ಬಗ್ಗೆ ಸ್ಥಳೀಯ ಗ್ರಾಮಪಂಚಾಯಿತಿಗೆ ಸ್ಥಳೀಯರು ಮಾಹಿತಿ ನೀಡಿದ ಹಿನ್ನಲೆಯಲ್ಲಿ ಗ್ರಾಮಾಂತರ ಪೊಲೀಸರು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖಾ ಅಧಿಕಾರಿಗಳು ಜಂಟಿ ಕಾರ್ಯಚರಣೆ ನಡೆಸಿ ಮಾಹಿತಿಯನ್ನು ಕಲೆ ಹಾಕಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಮಕ್ಕಳ ಕಾವಲು ಸಮಿತಿ ಸಭೆಯ ಕರೆದಿದ್ದು ಸ್ಥಳೀಯ ಗ್ರಾ.ಪಂ.ಸದಸ್ಯರು ಚರ್ಚಿಸಿ ಮುಂದಿನ ಕಾನೂನು ಪ್ರಕ್ರಿಯೆ ಬಗ್ಗೆ ಸಮಾಲೋಚನೆ ನಡೆಸಿದ್ದರು.
ಮಹಿಳೆ ತನ್ನ ಒಂದು ತಿಂಗಳ ಹೆಣ್ಣು ಮಗುವನ್ನು ಮಾರಾಟ ಮಾಡಲು ಯತ್ನಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳಾ ಅಭಿವೃದ್ದಿ ಇಲಾಖಾಧಿಕಾರಿಗಳು ಪ್ರತಿಕ್ರಿಯಿಸಿದ್ದು ಮಗುವಿನ ಆರೈಕೆ ಹಾಗೂ ಆರೋಗ್ಯದ ಹಿತದೃಷ್ಟಿಯನ್ನು ಪರಿಗಣಿಸಿ ಮುಂದಿನ ಕ್ರಮ ಕೈಗೊಳ್ಳುವ ಬಗ್ಗೆ ಸಂಬಂಧಿದ ಇಲಾಖಾಧಿಕಾರಿಗಳ ಸಲಹೆ ಪಡೆಯುವುದಾಗಿ ಠಾಣಾಧಿಕಾರಿ ತಿಳಿಸಿದ್ದಾರೆ. ಕಾನೂನು ಸಂಘರ್ಷಕ್ಕೊಳಗಾದ ಮಗು ಹಾಗೂ ತಾಯಿಯ ಆರೈಕೆಗೆ ಸಂಬಂದಪಟ್ಟು ಇಲಾಖಾಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಕಾವಲು ಸಮಿತಿ ಸದಸ್ಯ ಆದಂ ಕುಂಞ ಹೇಳಿದ್ದಾರೆ.
ಪಂಚಾಯತ್ ಉಪಾಧ್ಯಕ್ಷ ದಿನೇಶ್, ಪಿಡಿಓ ವಸಂತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಸುಜಾತ, ಮಕ್ಕಳ ರಕ್ಷಣಾ ಸಮಿತಿ ಸದಸ್ಯರು, ಬಂಟ್ವಾಳ ಗ್ರಾಮಾಂತರ ಪೊಲೀಸರು ಕಾರ್ಯಚರಣೆ ನಡೆಸಿದರು.

More from the blog

ಸೌಜನ್ಯ ಹೋರಾಟ ಸಮಿತಿಯಿಂದ ನೋಟ ಅಭಿಯಾನ

ಮಂಗಳೂರು: ರಾಜಕೀಯ ಪಕ್ಷಗಳು ಮತ್ತು ನ್ಯಾಯಾಂಗ ವ್ಯವಸ್ಥೆಯ ಗಮನ ಸೆಳೆಯುವ ಉದ್ದೇಶದಿಂದ ಸೌಜನ್ಯ ಪರ ಹೋರಾಟ ಸಮಿತಿ ವತಿಯಿಂದ ಮುಂಬರುವ‌ ಲೋಕಸಭಾ ಚುನಾವಣೆಯಲ್ಲಿ ನೋಟಕ್ಕೆ ಮತ ಚಲಾಯಿಸಲು ಜನ ಸಾಮಾನ್ಯರನ್ನು ಪ್ರೇರೇಪಿಸಲು ನೋಟ...

ಕಲ್ಲಡ್ಕ ಶ್ರೀರಾಮ ಭಜನಾ ಮಂದಿರಕ್ಕೆ ಲೋಕಸಭಾ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಭೇಟಿ

ಬಂಟ್ವಾಳ ತಾಲೂಕಿನ ಶಕ್ತಿಕೇಂದ್ರವಾದ ಕಲ್ಲಡ್ಕ ಶ್ರೀರಾಮ ಭಜನಾ ಮಂದಿರಕ್ಕೆ ಲೋಕಸಭಾ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಆಗಮಿಸಿ ಪ್ರಾರ್ಥನೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕಲ್ಲಡ್ಕ ಡಾ| ಪ್ರಭಾಕರ್ ಭಟ್ ಬಿಜೆಪಿ...

ಕುಕ್ಕಾಜೆ ಜಂಕ್ಷನ್ ನ ಬ್ಲೀಸ್ ಫುಲ್ ಆರ್ಕೆಡ್ ನಲ್ಲಿ ನೂತನ ಶುದ್ಧ ಸಸ್ಯಹಾರಿ ಫ್ಯಾಮಿಲಿ ರೆಸ್ಟೋರೆಂಟ್ “ಹೋಟೆಲ್ ಅನ್ನಪೂರ್ಣ” ಶುಭಾರಂಭ

ಬಂಟ್ವಾಳ ತಾಲೂಕಿನ ಕುಕ್ಕಾಜೆ ಜಂಕ್ಷನ್ ನ ಬ್ಲೀಸ್ ಫುಲ್ ಆರ್ಕೆಡ್ ನಲ್ಲಿ ಅರುಣ್ ಕುಮಾರ್, ಮಹೇಶ್ ಕುಮಾರ್, ಜನಾರ್ಧನ್ ಪೊಸೊಳಿಗೆ ಮಾಲಕತ್ವದ ನೂತನ ಶುದ್ಧ ಸಸ್ಯಹಾರಿ ಫ್ಯಾಮಿಲಿ ರೆಸ್ಟೋರೆಂಟ್. "ಹೋಟೆಲ್ ಅನ್ನಪೂರ್ಣ" ಶುಭಾರಂಭಗೊಂಡಿತು. ಶ್ರೀ...

ನಂದನಹಿತ್ಲು ವೈದ್ಯನಾಥ, ಅರಸು, ಜುಮಾದಿ ಬಂಟ ದೈವಸ್ಥಾನದಲ್ಲಿ ಕಾಲಾವಧಿ ನೇಮೋತ್ಸವ

ಬಂಟ್ವಾಳ: ಇಲ್ಲಿನ ಪೇಟಯಲ್ಲಿರುವ ನಂದನಹಿತ್ಲು ವೈದ್ಯನಾಥ,ಅರಸು,ಜುಮಾದಿ ಬಂಟ ದೈವಸ್ಥಾನದಲ್ಲಿ ಕಾಲವಧಿಯ ನೇಮೋತ್ಸವವು ಗುರುವಾರ ಬೆಳಗ್ಗೆ ಸಂಪನ್ನಗೊಂಡಿತು. ಕ್ಷೇತ್ರದ ತಂತ್ರಿಗಳಾದ ಪೊಳಲಿ ಗಿರಿಪ್ರಕಾಶ್ ತಂತ್ರಿವರ ನೇತೃತ್ವದಲ್ಲಿ‌ ನಡೆದ ವಿವಿಧ ವೈಧಿಕ ವಿಧಿವಿಧಾನಗಳ ಬಳಿಕ ಮೊದಲದಿನ ಶ್ರೀ...