ಬಂಟ್ವಾಳ: ಕುಡಿಯುವ ನೀರು ಸಹಿತ ಮೂಲಭೂತ ಸೌಕರ್ಯ ಒದಗಿಸಲು ಚುನಾವಣಾ ನೀತಿ ಸಂಹಿತೆ ಅಡ್ಡಿಯಾಗದಿದ್ದರೂ ,ಬಂಟ್ವಾಳ ತಾ.ನ ಮಣಿನಾಲ್ಕೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಲಕ್ಷ್ಮಿಪಲ್ಕೆ ಎಂಬಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸಿತ್ತಿದ್ದು,ಈ ಬಗ್ಗೆ ದೂರು ಕೊಡಲು ಹೋದಾಗ  ಪಿಡಿಒರವರು  ನೀತಿ ಸಂಹಿತೆಯ ನೆಪವೊಡ್ಡಿ ದೂರು ಸ್ವೀಕರಿಸದೆ ವಾಪಾಸು ಕಳುಹಿಸಿದ್ದಾರೆಂಬ ಆರೋಪ ವ್ಯಕ್ತವಾಗಿದೆ.  ಸರಪಾಡಿ ಶಾಲಾ ಬಳಿಯ ಅಂಬೇಡ್ಕರ್ ಕಾಲನಿ ಸಹಿತ ಲಕ್ಮಿಪಲ್ಕೆ ಪರಿಸರದಲ್ಲಿ ಕೆಲದಿನಗಳಿಂದ ನೀರಿನ ಸಮಸ್ಯೆ ಉಂಟಾಗಿದೆ ಎಂದು ಪಂ.ಸದಸ್ಯ ಆದಂಕುಂಞ ದೂರಿದ್ದಾರೆ. ಈ ಭಾಗದಲ್ಲಿ ಸುಮಾರು 45 ಮನೆಗಳು ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ.ಶಾಲಾ ಬಳಿರುವ ಬೋರ್ ವೆಲ್ ನಲ್ಲಿ ನೀರಿಲ್ಲದಿದ್ದು,ಇದರ ಪಕ್ಕವೇ ಮತ್ತೊಂದು ಬೋರ್ ವೆಲ್ ಕೊರೆಯಲು ಪಿಡಿಒರವರು ನಿರಾಪೇಕ್ಷಣಾ ಪತ್ರ ನೀಡಿರುವುದೇ ಇಲ್ಲಿ ನೀರಿನ ಸಮಸ್ಯೆ ಉದ್ಬವವಾಗಲು ಕಾರಣ ಎಂದು ಸದಸ್ಯ ಆದಂಕುಂಞ ಆರೋಪಿಸಿದ್ದಾರೆ. ಸಾರ್ವಜನಿಕರ ದೂರಿನ ಹಿನ್ನಲೆಯಲ್ಲಿ ಪಿಡಿಒರವರಿಗೆ  ನೀರಿನ ಸಮಸ್ಯೆ ಪರಿಹರಿಸುವಂತೆ ಶುಕ್ರವಾರ ಮನವಿ ಸಲ್ಲಿಸಲು ತೆರಳಿದಾಗ ಅವರು ಚುನಾವಣಾ ನೀತಿ ಸಂಹಿತೆಯ ನೆಪದಲ್ಲಿ ಮನವಿ ಸ್ವೀಕರಿಸದೆ ಅಗೌರವ ತೋರಿದ್ದಾರೆಂದು ಆದಂಕುಂಞ ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ. ಮುಂದಿನ ಏಳು ದಿನದೊಳಗೆ ಇಲ್ಲಿಯ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸದಿದ್ದಲ್ಲಿ ತಾಪಂ ಕಚೇರಿ ಮುಂದೆ ಪ್ರಮುಖ ತಿಭಟನೆ ನಡೆಸಲಾಗುವುದೆಂದು ತಾಪಂಕಾರ್ಯನಿರ್ವಹಣಾಧಿಕಾರಿವರಿಗೆ ಸಲ್ಲಿಸಿದ ಮನವಿಯಲ್ಲಿ ಎಚ್ಚರಿಸಿದ್ದಾರೆ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಗೂ ಮನವಿ ಪ್ರತಿ ರವಾನಿಸಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here