Sunday, October 22, 2023

ಕೋರ್ಯಾರು ಶ್ರೀ ದುರ್ಗಾಮಹಮ್ಮಾಯಿ ದೇವಸ್ಥಾನ ಮಾ.29 :ವರ್ಷಾವಧಿ ಮಹೋತ್ಸವ

Must read

ಬಂಟ್ವಾಳ: ಬಂಟ್ವಾಳ ತಾಲೂಕು ಸಿದ್ಧಕಟ್ಟೆ ಸಮೀಪದ ಕೋರ್ಯಾರು ಶ್ರೀ ದುರ್ಗಾಮಹಮ್ಮಾಯಿ ದೇವಸ್ಥಾನದಲ್ಲಿ ಹೋಳಿ ಹಬ್ಬದ ವರ್ಷಾವಧಿ ಮಹೋತ್ಸವ ಮಾ.29ರಂದು ಜರಗಲಿದೆ.

ಮಾ.29ರಂದು ಗಣಹೋಮ, ಮಧ್ಯಾಹ್ನ ಮಹಾಪೂಜೆ, ಹುಲಿನರ್ತನ ಸೇವೆ, ಅನ್ನಸಂತರ್ಪಣೆ, ಬಳಿಕ ಸಭಾ ಕಾರ್ಯಕ್ರಮ ನಡೆಯಲಿದ್ದು ಶ್ರೀ ಧಾಮ ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅವರು ಆಶೀರ್ವಚನ ನೀಡಲಿರುವರು. ಬಳಿಕ ವಿವಿಧ ವಾಳ್ಯಗಳ ಗುಮ್ಮಟೆ ಮತ್ತು ಕೋಲಾಟ ಪ್ರದರ್ಶನ, ಸಂಜೆ ಶ್ರೀ ರಾಮ ಸೀತಾ ಸ್ವಯಂವರ ನಂತರ ಕೋಲಾಟದೊಂದಿಗೆ ಸೇತುವೆ ಕಟ್ಟಿ ಮಂಗಳ, ಗುಮ್ಮಟೆ ಸೇವೆ ಮಂಗಳ, ಓಕೋಳಿ ಅಗ್ನಿಸೇವೆ ಮಂಗಳ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

More articles

Latest article