Tuesday, September 26, 2023

ಶಿವನಾಮ ಸ್ಮರಣೆ

Must read

ಶಿವನೆ ನಿನ್ನ ಸ್ಮರಣೆಯಲ್ಲಿ
ನಾವು ನಡೆವೆವನುದಿನ!
ಕರುಣೆದೋರು ಬೇಗ ನೀನು
ನಲಿಯಲೆಲ್ಲ ಜನ ಮನ!

ಮೈಯ ತುಂಬ ಬೂದಿ ಬಳಿದು
ಚಂದ್ರನನ್ನೇ ಧರಿಸಿದೆ!
ಚರ್ಮದುಡುಗೆ ಗಂಗೆ ಜಡೆಯು
ಸರ್ಪವನ್ನೇ ಕುಣಿಸಿದೆ!

ಲಿಂಗದೊಳಗೆ ಸಂಗವಾಗಿ
ಶಂಖನಾದ ಹರಿಸಿದೆ!
ಗಿರಿಜೆಯನ್ನೇ ತೊಡೆಯಲಿರಿಸಿ
ಜಗವ ನೀನು ಸಲಹಿದೆ!

ತಾಂಡವದ ನೃತ್ಯಗೈದು
ಲಯದ ಕಾಲ ರುದ್ರನಾದೆ!
ಶರಧಿ ಮಥನದಿ ವಿಷವ ಕುಡಿದು
ಜಗದ ರಕ್ಷಕನಾದೆ!

 

#ನೀ.ಶ್ರೀಶೈಲ ಹುಲ್ಲೂರು

*ಚಿತ್ರ ಕೃಪೆ.ಶಾಂತಯ್ಯ ಪರಡಿಮಠ

More articles

Latest article