ಬಂಟ್ವಾಳ: ಬಂಟ್ವಾಳ ತಾಲೂಕು ಕಾವಳಮೂಡೂರು ಗ್ರಾಮದ ಕಾವಳಮಾಗಣೆ ಶ್ರೀ ರಾಜನ್‌ದೈವ ಕೊಡಮಣಿತ್ತಾಯ ದೈವಸ್ಥಾನದ ವಾರ್ಷಿಕ ಜಾತ್ರೋತ್ಸವ ಮಾ.19ರಿಂದ ಮಾ.22ರವರೆಗೆ ಜರಗಲಿದೆ.
ಮಾ.19ರಂದು ಬೆಳಗ್ಗೆ ಶ್ರೀ ಕ್ಷೇತ್ರದಲ್ಲಿ ಪ್ರಾರ್ಥನೆ, ಸಂಜೆ ಬಲ್ಲೋಡಿ ಮಾಗಣೆ ಗುತ್ತಿನಿಂದ ಶ್ರೀ ಕೊಡಮಣಿತ್ತಾಯಿ ದೈವದ ಭಂಡಾರ ಹೊರಟು ಕಾವಳಕಟ್ಟೆ ದೈವಸ್ಥಾನಕ್ಕೆ ಆಗಮನ, ರಾತ್ರಿ ಧ್ವಜಾರೋಹಣ, ಚೆಂಡು ಹಾಕುವುದು, ಬಲಿ ಉತ್ಸವ, ದೈವ ದರ್ಶನ, ಮಾ.20ರಂದು ಸಂಜೆ ಬಲಿ ಉತ್ಸವ, ದೈವ ದರ್ಶನ, ಮಾ.21ರಂದು ಬೆಳಗ್ಗೆ ಗಣಪತಿ ಹೋಮ, ಸಂಜೆ ಹೂವಿನ ಪೂಜೆ ಆರಂಭ, ಇತರ ಸೇವೆಗಳು-ಅಂಕ ಅಂಬೋಡಿ, ಮುಂಡೇವು, ಸೂಟೆದಾರ, ಕಾವಳಕಟ್ಟೆ ಬಸದಿಯಲ್ಲಿ ಪಂಚಾಮೃತಾಭಿಷೇಕ, ರಾತ್ರಿ ಅನ್ನಸಂತರ್ಪಣೆ, ಶ್ರೀ ರಾಜನ್ ದೈವ ಕೊಡಮಣಿತ್ತಾಯ ದೈವದ ನೇಮೋತ್ಸವ, ಬಲಿ ಉತ್ಸವ, ದರಿ ದೀಪೋತ್ಸವ, ಹುಲಿಬಂಡಿ ಉತ್ಸವ, ಕುದುರೆ ಬಂಡಿ ಉತ್ಸವ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸ್ಥಳೀಯರಿಂದ ಡಬಲ್ ಗೇಮ್ ತುಳುನಾಟಕ ಪ್ರದರ್ಶನವಿದೆ. ಮಾ.೨೨ರಂದು ಬೆಳಗ್ಗೆ ಧ್ವಜಾವರೋಹಣ, ಕುರುತಂಬಿಲ ನೇಮ, ಶ್ರೀ ಕ್ಷೇತ್ರದಿಂದ ಶ್ರೀ ಕೊಡಮಣಿತ್ತಾಯಿ ದೈವದ ಭಂಡಾರ ಬಲ್ಲೋಡಿ ಮಾಗಣೆ ಗುತ್ತಿಗೆ ನಿರ್ಗಮನ ನಡೆಯಲಿದೆ ಎಂದು ಆನುವಂಶಿಕ ಆಡಳಿತ ಮೊಕ್ತೇಸರ ಬಿ.ಭರತ್ ಕುಮಾರ್ ಜೈನ್ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.


