Monday, September 25, 2023
More

  ಮಾಹಿತಿ ಕಾರ್ಯಗಾರ

  Must read

  ಬಂಟ್ವಾಳ: ಪ್ರಧಾನಮಂತ್ರಿ ಕಿಸಾನ್ ಯೋಜನೆ ಅನುಷ್ಠಾನ ಗೊಳಿಸಲು ಮಾರ್ಗಸೂಚಿಗಳನ್ನು ಅಧಿಸೂಚಿಸುವ ಬಗ್ಗೆ ತಾಲೂಕು ಮಟ್ಟದ ಅಧಿಕಾರಿಗಳಿಗೆ ಮಾಹಿತಿ ಕಾರ್ಯಗಾರ ತಾ.ಪಂ.ನ ಎಸ್.ಜಿ.ಆರ್.ಎಸ್.ವೈ ಸಭಾಂಗಣದಲ್ಲಿ ಶನಿವಾರ ನಡೆಯಿತು.

  ಕಾರ್ಯಕ್ರಮ ದ ಅಧ್ಯಕ್ಷ ತೆಯನ್ನು ವಹಸಿ ಮಾತನಾಡಿದ ತಾ.ಪಂ.ನ.ಇಒ ರಾಜಣ್ಣ ಸರಕಾರ ಸಣ್ಣ ಮತ್ತು ಅತೀ ಸಣ್ಣ ರೈತರ ಆದಾಯ ವ್ರದ್ದಿಸಲು ಈ ಯೋಜನೆ ಜಾರಿ ಮಾಡಿದೆ , ಯೋಜನೆ ಫಲಾನುಭವಿಗಳಿಗೆ ಫಲಪ್ರದವಾಗಲು ಸರಕಾರ ಕೆಲವೊಂದು ಮಾರ್ಗಸೂಚಿಗಳನ್ನು ನೀಡಿದೆ. ಅದರಂತೆ ಯೋಜನೆಯ ಅನುಷ್ಠಾನ ಕ್ಕೆ   ಬೇಕಾದ ಮಾಹಿತಿಯನ್ನು ನೀಡಲಾಗುತ್ತದೆ.
  ಮಾಹಿತಿಯನ್ನು ಪಡೆದು ಯೋಜನೆ ರೈತರಿಗೆ ಅನ್ಯಾಯವಾಗದಂತೆ ನೀಡಿ ಎಂದು ಅವರು ಹೇಳಿದರು.
  ಈ ಯೋಜನೆ ಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನೆ , ಮೇಲ್ವಿಚಾರಣೆ ಮತ್ತು ಅನುಷ್ಠಾನ ಸಮಯದಲ್ಲಿ ಎದುರಾಗುವ ಕುಂದುಕೊರತೆಗಳನ್ನು ನಿವಾರಿಸುವ ಸಲುವಾಗಿ ರಾಜ್ಯಮಟ್ಟದ ಲ್ಲಿ ಮತ್ತು ಜಿಲ್ಲಾ ಮಟ್ಟದಲ್ಲಿ ಸಮಿತಿ ಗಳನ್ನು ರಚಿಸಿದ್ದಾರೆ. ‌
  ರೈತರು ಈ ಯೋಜನೆಗೆ ಸಂಬಂಧಿಸಿದಂತೆ ಸ್ಥಳೀಯ ಗ್ರಾ.ಪಂ.ಅಥವಾ ಹೋಬಳಿ ರೈತ ಸಂಪರ್ಕ ಕೇಂದ್ರ, ಬಾಪೂಜಿ ಸೇವಾ ಕೇಂದ್ರ, ಅಟಲ್ ಜಿ ಜನಸ್ನೇಹಿ ಕೇಂದ್ರಗಳಲ್ಲಿ ಮಾಹಿತಿ ಪಡೆದು ಅರ್ಜಿ ಸಲ್ಲಿಸಲು ಅವಕಾಶ ಇದೆ ಎಂದರು.
  ಕ್ರಷಿ ಇಲಾಖಾ ಸಿಬ್ಬಂದಿ  ನಂದನ್ ಶೆಣ್ಯೆ ಈ ಯೋಜನೆ ಯ ಮಾಹಿತಿ ನೀಡಿದರು.
  ವೇದಿಕೆಯಲ್ಲಿ ಕ್ರಷಿ ಅಧಿಕಾರಿ ನಾರಾಯಣ ಶೆಟ್ಟಿ, ಉಪತಹಶೀಲ್ದಾರ್ ರಾಜೇಶ್ ನಾಯಕ್ ಮತ್ತು ತಾಲೂಕು ಪಂಚಾಯತ್ ಎಡಿ ಪ್ರಶಾಂತ್ ಉಪಸ್ಥಿತರಿದ್ದರು.
  ಕ್ರಷಿ ಇಲಾಖಾ ಸಿಬ್ಬಂದಿ ಗಳು, ಗ್ರಾ.ಪಂ.ಡಾಟಾ ಎಂಟ್ರಿಗಳು, ಗ್ರಾಮ ಕರಣಿಕ ರು, ಕಂದಾಯ ಇಲಾಖೆ ಯ ಸಿಬ್ಬಂದಿ ಗಳು ಮಾಹಿತಿ ಕಾರ್ಯಗಾರದಲ್ಲಿ ಪಾಲ್ಗೊಂಡಿದ್ದರು.

  More articles

  LEAVE A REPLY

  Please enter your comment!
  Please enter your name here

  Latest article